ಮನೆ ರಾಜಕೀಯ ಉಕ್ರೇನ್ -ರಷ್ಯಾ ಯುದ್ಧ: ಮಧ್ಯಸ್ಥಿಕೆ ವಹಿಸುವುದು ಸುಲಭವಲ್ಲ- ಪ್ರತಾಪ್ ಸಿಂಹ

ಉಕ್ರೇನ್ -ರಷ್ಯಾ ಯುದ್ಧ: ಮಧ್ಯಸ್ಥಿಕೆ ವಹಿಸುವುದು ಸುಲಭವಲ್ಲ- ಪ್ರತಾಪ್ ಸಿಂಹ

0

ಮೈಸೂರು: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿರುವ ಹಿನ್ನೆಲೆ ಮಧ್ಯಸ್ಥಿಕೆ ವಹಿಸುವಂತೆ ಭಾರತಕ್ಕೆ ಉಕ್ರೇನ್ ಮನವಿ ಮಾಡಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಮಧ್ಯಸ್ಥಿಕೆ ವಹಿಸುವುದು ಅಷ್ಟು ಸುಲಭದ ಮಾತಲ್ಲ ಎಂದಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಆದರೆ ಮಧ್ಯಸ್ಥಿಕೆ ವಹಿಸುವುದು ಅಷ್ಟು ಸುಲಭವಲ್ಲ. ರಷ್ಯಾ ಅಧ್ಯಕ್ಷರೇ ಖುದ್ದಾಗಿ ಪ್ರಧಾನಿಯವರಿಗೆ ಕರೆ ಮಾಡಿದ್ದಾರೆ. ಅಂತರಾಷ್ಟ್ರೀಯ ವಿಚಾರ ಯಾವ ರೀತಿ ಸೂಕ್ಷ್ಮ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಗೊತ್ತಿದೆ. ಭಾರತ ಸರ್ಕಾರ ಅಥವಾ ಮೋದಿಯವರಿಗೆ ಸಲಹೆ ಕೊಡುವಷ್ಟು ನಾನು ದೊಡ್ಡವನಲ್ಲ. ಮೋದಿ ಮತ್ತು ಪುಟಿನ್ ನಡುವೆ ಆತ್ಮೀಯ ಸ್ನೇಹ ಸಂಬಂಧ ಇದೆ. ಅವರು ಏನು ಮಾತನಾಡಿದ್ದಾರೊ ನನಗೆ ಮಾಹಿತಿ ಇಲ್ಲ. ಎಲ್ಲಾ ರಾಷ್ಟ್ರಗಳಿಗೂ ಸ್ವಾರ್ಥವೇ ಮುಖ್ಯ ಎಂದು ಹೇಳಿದ್ದಾರೆ.

ಉಕ್ರೇನ್ ನ ಬಹುತೇಕ ಗ್ಯಾಸ್ ಲೈನ್ ಗಳು ರಷ್ಯಾ ಮೂಲಕ ಹಾದುಹೋಗುವೆ. ಉಕ್ರೇನ್ ಕಂಟ್ರೋಲ್ ತೆಗೆದುಕೊಳ್ಳಲು ರಷ್ಯಾ ಮುಂದಾಗಿದೆ. ಅಮೇರಿಕಾ ಕೂಡ ಸ್ವಾರ್ಥಕ್ಕಾಗಿ ಹಿಂದೆ ಯಾವೆಲ್ಲ ನಿರ್ಧಾರ ತೆಗೆದುಕೊಂಡಿದೆ ಎಂಬುದು ಗೊತ್ತಿದೆ. ಆದ್ದರಿಂದ ಈ ಸಮಸ್ಯೆ ಬಗೆಹರಿಸುವುದು ಅಷ್ಟು ಸುಲಭ ಅಲ್ಲ ಎಂದರು.

ಭಾರತೀಯರ ರಕ್ಷಣೆಗೆ ಬದ್ಧ: ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಕೆಂದ್ರ ಸರ್ಕಾರ ಬದ್ಧವಾಗಿದೆ. ಯುದ್ಧದಿಂದ ಜಗತ್ತಿನಾದ್ಯಂತ ಭಯದ ವಾತಾವರಣ ಸೃಷ್ಟಿ ಆಗಿದೆ. ಭಾರತದ ಸಾಕಷ್ಟು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಭಾರತದ ಸರ್ಕಾರ ಕೂಡ ಈ ಕುರಿತು ತುರ್ತು ಮೀಟಿಂಗ್ ಮಾಡಿದೆ. ಭಾರತ ಮೊದಲ ಹಂತದಲ್ಲಿ ಒಂದು ವಿಮಾನದ ಮೂಲಕ ಭಾರತೀಯರ ರಕ್ಷಣೆಗೆ ಮುಂದಾಗಿದೆ. ರಷ್ಯಾ ಅಧ್ಯಕ್ಷರ ಜೊತೆ ಕೂಡ ಮಾತನಾಡಿದ್ದಾರೆ. ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಪ್ರಧಾನಿಗಳು ಮಾತುಕತೆ ನಡೆಸುತ್ತಿದ್ದಾರೆ. ಯಾವುದೇ ಭಯ ಬೇಡ. ಸುರಕ್ಷಿತವಾಗಿ ಭಾರತೀಯರನ್ನು ಕರೆತರುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

ಹಿಂದಿನ ಲೇಖನಈ ದಿನದ ನಿಮ್ಮ ರಾಶಿ ಭವಿಷ್ಯ
ಮುಂದಿನ ಲೇಖನಮತ್ತೆ ನಿರ್ದೇಶಕರಾಗಿ ದುನಿಯಾ ವಿಜಯ್