ಮನೆ ಅಪರಾಧ ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಅಪರಿಚಿತ ವಾಹನ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

0

ಯಲ್ಲಾಪುರ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ಮಾಗೋಡ ಕ್ರಾಸ್ ಬಳಿ ಗುರುವಾರ ಬೆಳಗ್ಗೆ ನಡೆದಿದೆ.

Join Our Whatsapp Group

ಮೃತ ಯುವಕನನ್ನು ಪಟ್ಟಣದ ನಾರಾಯಣಪುರದ ರಾಘು ಮಿರಾಶಿ (22) ಎಂದು ಗುರುತಿಸಲಾಗಿದೆ.

ರಘು ಹಾಗೂ ಇನ್ನೋರ್ವ ಬೈಕ್ ನಲ್ಲಿ ಮಾಗೋಡು ಕ್ರಾಸ್ ಬಳಿ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಹೋಗಿದೆ. ಇದರ ಪರಿಣಾಮ ರಾಘು ಮಿರಾಶಿ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬ ಸಹ ಸವಾರ ವೆಂಕಟರಮಣ ಸಿದ್ದಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನನಿಗದಿತ ತೂಕಕ್ಕಿಂತಲೂ ಕಡಿಮೆ ಬಿಸ್ಕೆಟ್ ಮಾರಾಟ: ಬ್ರಿಟಾನಿಯಾಗೆ ₹60 ಸಾವಿರ ದಂಡ ವಿಧಿಸಿದ ಕೇರಳದ ಗ್ರಾಹಕ ವೇದಿಕೆ
ಮುಂದಿನ ಲೇಖನಕರ್ನಾಟಕದಲ್ಲಿ ನಾಲ್ಕಕ್ಕಿಂತ ಹೆಚ್ಚು ಸ್ಥಾನ ಕಾಂಗ್ರೆಸ್ ಬರುವುದಿಲ್ಲ: ಪ್ರಹ್ಲಾದ್ ಜೋಶಿ