ಮನೆ ಅಂತಾರಾಷ್ಟ್ರೀಯ ವಿಶ್ವಸಂಸ್ಥೆ: ಉಕ್ರೇನ್‌’ನಲ್ಲಿ ಶಾಂತಿ ಸ್ಥಾಪನೆ ನಿರ್ಣಯದಿಂದ ದೂರ ಉಳಿದ ಭಾರತ

ವಿಶ್ವಸಂಸ್ಥೆ: ಉಕ್ರೇನ್‌’ನಲ್ಲಿ ಶಾಂತಿ ಸ್ಥಾಪನೆ ನಿರ್ಣಯದಿಂದ ದೂರ ಉಳಿದ ಭಾರತ

0

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ತತ್ವಗಳಿಗೆ ಅನುಗುಣವಾಗಿ ಉಕ್ರೇನ್‌’ನಲ್ಲಿ ‘ಸಮಗ್ರ, ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿ’ಯನ್ನು ಆದಷ್ಟು ಬೇಗ ಸ್ಥಾಪಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಮಂಡಿಸಲಾಗಿದ್ದು, ಈ ನಿರ್ಣಯದಿಂದ ಭಾರತವು ದೂರ ಉಳಿದಿದೆ.

ಉಕ್ರೇನ್ ಮತ್ತು ಮಿತ್ರರಾಷ್ಟ್ರಗಳು ಈ ನಿರ್ಣಯವನ್ನು ಮಂಡಿಸಿದವು. ‘ಉಕ್ರೇನ್‌’ನಲ್ಲಿ ಸಮಗ್ರ, ನ್ಯಾಯಯುತ ಮತ್ತು ಶಾಶ್ವತ ಶಾಂತಿಗೆ ಆಧಾರವಾಗಿರುವ ವಿಶ್ವಸಂಸ್ಥೆಯ ತತ್ವಗಳು’ ಎಂಬ ಶೀರ್ಷಿಕೆಯುಳ್ಳ ಈ ನಿರ್ಣಯವನ್ನು 193 ಸದಸ್ಯ ಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿತು.

ನಿರ್ಣಯದ ಪರವಾಗಿ 141 ಮತಗಳು ಬಂದರೆ, ವಿರುದ್ಧವಾಗಿ 7 ಮತಗಳು ಬಿದ್ದವು. ಭಾರತವೂ ಸೇರಿದಂತೆ ಒಟ್ಟು 32 ದೇಶಗಳು ನಿರ್ಣಯದಿಂದ ದೂರ ಉಳಿದಿದ್ದವು.

ರಷ್ಯಾ ವಿರುದ್ಧದ ನಿರ್ಣಯದಿಂದ ಭಾರತ ದೂರ ಉಳಿಯುತ್ತಿರುವುದು ಇದು ಎರಡನೇ ಬಾರಿ.

ಉಕ್ರೇನ್‌ ಮೇಲೆ ಆಕ್ರಮಣ ನಡೆಸುವ ಮೂಲಕ ಅಂತರರಾಷ್ಟ್ರೀಯ ಕಾನೂನು ಉಲ್ಲಂಘಿಸಿರುವುದಕ್ಕೆ ರಷ್ಯಾವನ್ನು ಹೊಣೆ ಮಾಡುವ ಹಾಗೂ ಯುದ್ಧದಿಂದ ಉಕ್ರೇನ್‌’ಗೆ ಆಗಿರುವ ನಷ್ಟ ಹಾಗೂ ಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆ ದೇಶದ ಮೇಲೆ ಒತ್ತಡ ಹೇರುವ ಕರಡು ನಿರ್ಣಯವನ್ನು 2022ರ ನವೆಂಬರ್‌’ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಈ ನಿರ್ಣಯದಿಂದ ಭಾರತವು ದೂರ ಉಳಿದಿತ್ತು.

ಹಿಂದಿನ ಲೇಖನಬಿಜೆಪಿ ಸರ್ಕಾರ ರೈತರ ಆದಾಯ ವೃದ್ಧಿಗೆ ಕಟಿಬದ್ಧವಾಗಿದೆ: ಬಿ ಸಿ ಪಾಟೀಲ್
ಮುಂದಿನ ಲೇಖನಸ್ಮಾರ್ಟ್​​’ಫೋನ್​ನ ಬ್ಯಾಟರಿ​ ಚಾರ್ಜ್​ ಬೇಗನೆ ಖಾಲಿಯಾಗದಂತೆ ಮಾಡಲು ಇಲ್ಲಿದೆ ಟಿಪ್ಸ್​