ಮನೆ ರಾಜಕೀಯ ಉತ್ತರಪ್ರದೇಶ ಚುನಾವಣೆ: 4ನೇ ಹಂತದ ಮತದಾನ ಆರಂಭ

ಉತ್ತರಪ್ರದೇಶ ಚುನಾವಣೆ: 4ನೇ ಹಂತದ ಮತದಾನ ಆರಂಭ

0

ಲಖನೌ: ಉತ್ತರ ಪ್ರದೇಶದ 9 ಜಿಲ್ಲೆಗಳ ವ್ಯಾಪ್ತಿಯ 59 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ಆರಂಭಗೊಂಡಿದ್ದು, 4ನೇ ಹಂತದಲ್ಲಿ ಮತದಾನ ನಡೆಯುತ್ತಿದೆ.

ಈ ಕ್ಷೇತ್ರಗಳಲ್ಲಿ ಬಿಜೆಪಿ, ಎಸ್ ಪಿ, ಕಾಂಗ್ರೆಸ್, ಬಿಎಸ್ ಪಿ ಸೇರಿ 625 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.

ಲಖಿಂಪುರ ಜಿಲ್ಲೆ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ 4ನೇ ಹಂತದ ಚುನಾವಣೆ ನಡಯಲಿದೆ. ಬಳಿಕ ಇನ್ನೂ 3 ಹಂತದ ಚುನಾವಣೆ ಬಾಕಿ ಉಳಿಯಲಿವ. ಮಾ.10ಕ್ಕೆ ಮತ ಎಣಿಕೆ ನಡೆಯಲಿದೆ.

ಕೋವಿಡ್19 ಸುರಕ್ಷತೆಯ ಮಾರ್ಗಸೂಚಿಗಳ ಪ್ರಕಾರ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭಗೊಂಡಿದ್ದು, ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ.