ಕ್ಷೇತ್ರ – ಧನು ರಾಶಿಯಲ್ಲಿ 26 ಡಿಗ್ರಿ 40 ಕಲೆಯಿಂದ 30 ಡಿಗ್ರಿಯವರಿಗೆ ರಾಶಿಸ್ವಾಮಿ – ಗುರು, ನಕ್ಷತ್ರಸ್ವಾಮಿ – ಸೂರ್ಯ, ಗಣ – ಮನುಷ್ಯ, ನಾಡಿ – ಅಂತ್ಯ, ಯೋನಿ – ನಕುಲ, ನಾಮಾಕ್ಷರ – ಭೆ, ಶರೀರಭಾಗಗಳು – ತೊಡೆಗಳು, ತೊಡೆಎಲುಬು, ಧಮನಿಗಳು ನಾಡಿಗಳು.
ರೋಗಗಳು :- ಅಂಗಗಳ ಶಿಥಿಲತೆ, ಅಂಗಘಾತ, ಗಂಟು, ಸಂಧಿವಾತ, ಕಣ್ಗುಳ್ಳೆ, ಪುಪ್ಪಸ ರೋಗಗಳು.
ಸಂರಚನೆ :- ಉಚ್ಚ ಆದರ್ಶಗಳ, ಶ್ರೇಷ್ಠ ವ್ಯಕ್ತಿತ್ವವಿರುವುದು. ಮಹತ್ವಕಾಂಕ್ಷೆ, ಉದಾರತೆ, ಲೋಕೋಪಕಾರ, ಧಾರ್ಮಿಕತೆ, ಕಾನೂನು ಪಾಂಡಿತ್ಯ, ವ್ಯಯಶೀಲ, ಪ್ರಸಿದ್ಧ ವ್ಯಕ್ತಿಯಾಗುವನು, ಉತ್ತಮ ಶಿಕ್ಷಣ ಪಡೆಯುವವನು, ಮನೆಯ ಮುಖ್ಯಸ್ಥರಾಗುವವರು, ಭಾಷಾ ಶಾಸ್ತ್ರಜ್ಞತೆ, ರಾಜನೀತಿ, ನಿಪುಣರಾಗಗಳು, ವೈದ್ಯ, ಸರಳ ಪ್ರಸನ್ನ ಚಿತ್ತರಾಗಿರುವನು.
ಉದ್ಯೋಗ, ವಿಶೇಷತೆಗಳು :- ಕುದುರೆಯುಳ್ಳ, ಶ್ರೀಮಂತರು, ಈಶ್ವರ ಭಕ್ತ, ಯೋಗಭ್ಯಾಸಿ, ಭೋಗವಿಲಾಸಿ, ವಿಚಾರಶೀಲ, ಸದ್ ವ್ಯವಹಾರಿ, ಅಧಿಕಾರಿ, ಪ್ರೇಮಿ, ಹಣಕಾಸಿನ ವ್ಯವಹಾರ ಮಾಡುವವರು, ಬ್ಯಾಂಕ್ ನೌಕರ, ಅಂತರಾಷ್ಟ್ರೀಯ ವ್ಯಾಪಾರಿ, ಹಡಗು ಉದ್ಯಮಿ, ಪ್ರಕಾಶಕ, ಆಸ್ಪತ್ರೆ, ಧಾರ್ಮಿಕ ಸಂಸ್ಥೆಗಳ ಸ್ಥಾಪಕ, ನ್ಯಾಯಾಧೀಶ, ಜಿಲ್ಲಾಧಿಕಾರಿ, ಆಯುರ್ವೇದ ತಜ್ಞ ನಿರ್ದೇಶಕರಾಗಬಹುದು.
ಬೃಹಸ್ಪತಿ ರಾಶಿಯಲ್ಲಿ ಸೂರ್ಯ ನಕ್ಷತ್ರದಲ್ಲಿ ಜನಿಸಿದವರು ವಿದ್ಯಾವಂತರು, ಅಧ್ಯಯನಶೀಲರು, ಕಲಾನಿ ಪುಣರು ಹಾಗೂ ಅವರು ಉತ್ತಮ ಶರೀರ ಹೊಂದುವರು, ಶ್ರೇಷ್ಠ ಬುದ್ಧಿ ಹೊಂದಿರುವವರು, ಅಭಿಮಾನಿ, ಆಲ್ಭಾಯುಷಿ, ಉತ್ತಮ ಸ್ಮರಣ ಶಕ್ತಿ ಹೊಂದಿರುವವರು. ಸೂರ್ಯನು ಈ ನಕ್ಷತ್ರ ಪಾದದಲ್ಲಿ ಪುಷ್ಯ ಮಾಸದಲ್ಲಿ ಮೂರುವರೆ ದಿನವಿರುವನನು. ಚಂದ್ರನು ಕೇವಲ ಆರು ಗಂಟೆಯಿರುವನು.