ಮನೆ ದೇವಸ್ಥಾನ ಮಾಡಾಯಿ ಕಾವಿಲಮ್ಮ ಶ್ರೀ ಕ್ಷೇತ್ರದಲ್ಲಿ ಪ್ರಧಾನ ಉತ್ಸವಗಳು

ಮಾಡಾಯಿ ಕಾವಿಲಮ್ಮ ಶ್ರೀ ಕ್ಷೇತ್ರದಲ್ಲಿ ಪ್ರಧಾನ ಉತ್ಸವಗಳು

0

ಈ ಕ್ಷೇತ್ರದಲ್ಲಿ ಒಂದು ವರ್ಷದಲ್ಲಿ ́144 ವಿಶೇಷ ಆರಾಧನಾ ವೇಳೆಗಳು ಎಂಬ ಪೂಜಾ ಸಂಪ್ರದಾಯದಲ್ಲಿ ನಿತ್ಯ ನೈಮಿತ್ತಿಕ ಆರಾಧನೆಗಳು ನಡೆಯುತ್ತಿದೆ.

1.  ಮೇಷ ಮಾಸ (ಏಪ್ರಿಲ್-ಮೇ ತಿಂಗಳು) :-

ಮೇಷಮಾಸ 1ಕ್ಕೆ ವಿಷು ಕಣಿ ಉತ್ಸವ. ಭಗವತಿಯ ಉತ್ಸವ ಬಿಂಬವನ್ನು ತಿರುವಾಭರಣಗಳಿಂದ ಅಲಂಕರಿಸಿ ಮುಖ ಮಂಟಪದಲ್ಲಿರಿಸುವುದಾಗಿದೆ. ಕಣಿ ಸಾಧನಗಳನ್ನೆಲ್ಲಾ ಇಟ್ಟು ಮುಂಜಾನೆ ಕಣಿ ಕಾಣುವುದಾಗಿದೆ. ಅಂದಿನಿಂದ 11 ದಿನಗಳ ಕಾಲ ವಿಶೇಷವಾದ ವಿಷು ಪೂಜೆಗಳು ಇರುತ್ತದೆ. ಸಂಧ್ಯೆಗೆ ಅಲಂಕರಿತ ಉತ್ಸವ ಮೂರ್ತಿಯ ಸುತ್ತುಬಲಿಯಿರುವುದಾಗಿದೆ.

2. ವೃಷಭ ಮಾಸ (ಮೇ-ಜೂನ್ ತಿಂಗಳು) :-

ವೃಷಭ ಮಾಸದ ಸಂಕ್ರಮಣ ದಿನದಿಂದಾರಂಭಿಸಿ ತೆಯ್ಯಂಗಳು ಪೆರುಂಕಳಿಯಾಟ ಜರುಗುವವರೆಗೆ ಎಲ್ಲಾ ಆದಿತ್ಯ, ಮಂಗಳ, ಶುಕ್ರವಾರಗಳಲ್ಲಿ ಕ್ಷೇತ್ರದ ಬಡಗು ದಿಕ್ಕಿನಲ್ಲಿರುವ ಹೊರಾಂಗಣದಲ್ಲಿ ಕಣಿಯಾಂಬಳ್ಳಿ ಮಾಡಕ್ಕೆ ತಾಗಿಕೊಂಡಿರುವ ತೆಯ್ಯಾಂಗಣದಲ್ಲಿ ತೆಯ್ಯಾಂ ಕೋಲಧಾರಿಗಳಾದ ವಣ್ಣಾನ್ ಸಮುದಾಯದವರಿಂದ ತೋತ್ತಂಪಾಟು ಇರುವುದು. ಈ ಎಲ್ಲಾ ದಿನಗಳಲ್ಲೂ ನಿಶ್ಚಿತ ಸಮುದಾಯದವರು ತಂದೋಪ್ಪಿಸುವ ಮೀನುಗಳನ್ನು ಭಗವತಿಗೆ ನಿವೇದಿಸುವ ʼಮೀನಾಮೃತʼ ಸೇವೆಯಿರುವುದಾಗಿದೆ.

ವೃಷಭ ಮಾಸ 10ರಂದು ದೈವಗಳ ಕಳಿಯಾಟ ದಿನವನ್ನು ನಿಗದಿಗೊಳಿಸುವುದಾಗಿದೆ. ಕಳಿಯಾಟದ ದಿನ ಬೆಳಗ್ಗೆ ತೆಯ್ಯಾಂಗಣದಲ್ಲಿ ಕಲಶ ಪಾತ್ರೆಯಿಟ್ಟು (ಮಧು ತುಂಬಿದ ಕಲಶ ಪಾತ್ರೆ) ತೋತ್ತಂಪಾಟ್ಟುಗಳನ್ನ ಹಾಡಲಾಗುತ್ತದೆ. ಸಾಯಂಕಾಲಕ್ಕೆ ಹತ್ತಿರದ ನಿಶ್ಚಿತ ಪ್ರವಾಸಿಗಳು ತಂದೊಪ್ಪಿಸುವ ಕಲಶತಟ್ಟು ಘೋಷಯಾತ್ರೆಯಲ್ಲಿ ತೆಯ್ಯಾಂಗಣಕ್ಕೆ ಆಗಮಿಸುವುದಾಗಿದೆ. ನಿಶ್ಚಿತ ವಿಧಿ ವಿಧಾನಗಳ ನಿರ್ವಹಣೆಯ ನಂತರ ಮಾಡಾಯಿ ಕಾವಿಲಮ್ಮನನ್ನೊಳಗೊಂಡ 7 ತೆಯ್ಯಾಂಗಳನ್ನು ಕಡ್ಡಿ ಆಡುವುದಾಗಿದೆ. ತಿರುವಾರ್ ಕಾಡ್ ಭಗವತಿ, ಕ್ಷೇತ್ರ ಪಾಲನ್, ಮಾಂಞಾಳಮ್ಮ, ವೇಟುವಚೇಕ್ಕವನ್, ಚುಅಳಂ ಭಗವತಿ, ಕಾಳರಾತ್ರಿ, ಸೋಮೇಶ್ವರಿ ಎಂಬೀ ತೆಯ್ಯಾಂಗಳನನು ಕೋಲಸ್ವರೂಪದಲ್ಲಿ ವಣ್ಣಾನ್

ಸಮುದಾಯದ ಕೋಲಧಾರಿಗಳು ಒಟ್ಟಿಗೆ ಕಟ್ಟಿ ಹಾಡುವುದಾಗಿದೆ. ಶ್ರೀ ತಿರುವರ್ ಕಾಟ್ ಭಗವತಿ ಭದ್ರಕಾಳಿಯ ಕೋಲ ಸ್ವರೂಪವಾಗಿದೆ. ಈ ಶಕ್ತಿಯನ್ನು ತಿರುಮುಡಿ ಏರಿಸಿ ಕೊಂಡಾಡುವುದಾಗಿದೆ. ಪ್ರಸಾದ ವಿತರಣೆಯೊಂದಿಗೆ ಕಳಿಯಾಟವು ಸಮಾಪ್ತಿಗೊಳ್ಳುವುದಾಗಿದೆ.

 3. ಮಿಥುನ ಮಾಸ (ಜೂನ್-ಜುಲಾಯಿ ತಿಂಗಳು) :-

ಮಿಥುನ ಮಾಸ 13 ಭಗವತಿ ದೇವಿಯ ಪ್ರತಿಷ್ಠ ದಿನಗಳಾಗಿವೆ. ಆ ದಿವಸ ಕ್ಷೇತ್ರದಲ್ಲಿ ಶಾಕ್ತೇಯ ಪೂಜೆಗಳಿರುವುದಿಲ್ಲ. ಕ್ಷೇತ್ರ ತಂತ್ರಿಗಳಿಂದ ವೈದಿಕ ಕ್ರಮದಲ್ಲಿ ವಿಶೇಷ ಪೂಜೆಗಳು ಜರುಗುತ್ತದೆ.

4. ಕರ್ಕಾಟಕ ಮಾಸ (ಜುಲಾಯಿ-ಆಗೋಸ್ತು ತಿಂಗಳು) :-

 ಕರ್ಕಾಟಕ ಮಾಸದಲ್ಲಿ ಎಲ್ಲಾ ದೇವರುಗಳಿಗೂ ಹೊದಳು ನೈವೇದ್ಯ ಪ್ರಾಧಾನ್ಯವಾಗಿದೆ. ಎಲ್ಲಾ ದಿನಗಳಲ್ಲಿಯೂ ಭಗವತಿ ಹೊದಳು ನೈವೇದ್ಯ ಇರುವುದಾದರೂ, ಕರ್ಕಾಟಕ ಮಾಸದ ಹೊದಳು ನೈವೇದ್ಯಕ್ಕೆ ಪ್ರಾಧ್ಯಾನತೆ ಇರುವುದಾಗಿದೆ. ಈ ತಿಂಗಳಲ್ಲಿ ಎಲ್ಲಾ ದೇವರುಗಳಿಗೂ ಹೊದಳು ನೈವೇದ್ಯ ಇರುವುದು. ಹಿಂದೆ ನೈವೇದ್ಯಕ್ಕೆ ಹೊದಳವನ್ನು ಮನೆಗಳಲ್ಲಿ ಶುದ್ಧಾಚಾರದಲ್ಲಿ ತಯಾರಿಸಿ ಕ್ಷೇತ್ರಕ್ಕೆ ಒಪ್ಪಿಸಲಾಗುತ್ತಿತ್ತು. ಈ ಹೊದಳು ನಿವೇದಿತ ಪ್ರಸಾದವನ್ನು ಭಕ್ತಾದಿಗಳು ಮನೆಗೆ ಒಯ್ಯುವುದಾಗಿದೆ.

ಕರ್ನಾಟಕ ಮಾಸದಲ್ಲಿ ಶುಭ ಮಹೂರ್ತದ ದಿನ ʼನೀರ ಉತ್ಸವʼ ಅಂದರೆ ಕದಿರ್ ತುಂಬಿಸುವ ಉತ್ಸವವನ್ನು ಜರುಗಿಸಲಾಗುತ್ತದೆ. ಕದಿರುಕಟ್ಟೆಯಿಂದ ಕದಿರುಸಾಧನಗಳನ್ನ ವಾದ್ಯ ಘೋಷಣೆದೊಂದಿಗೆ ತಂದು ಕ್ಷೇತ್ರ ನಡೆಯಲ್ಲಿಡುವುದಾಗಿದೆ. ಅನಂತ ಇದನ್ನು ಪೂಜಿಸಿ ಗುಡಿಗಳಿಗೆಲ್ಲಾ ಕಟ್ಟುವುದಾಗಿದೆ.

ಕರ್ಕಾಟಕ 16ರಂದು ಪೂರ್ವಾಹ್ನ ʼಮಾರಿ ತೆಯ್ಯಾಟಂʼ ಉತ್ಸವ ಜರುಗುತ್ತದೆ. ನಾಡಿನ ಜನರಿಗೂ, ಜಾನುವಾರಗಳಿಗೂ ಬರುವಂತಹ ದುರಿತಗಳನ್ನ ನೀಗಿಸಲಿಕ್ಕಾಗಿ ಮಾರಿ ತೆಯ್ಯಾಟಂ ಜರಗಿಸುವುದಾಗಿದೆ. ಕ್ಷೇತ್ರದ ಬಡಗು ದಿಕ್ಕಿಗೆ ಅನತಿ ದೂರದಲ್ಲಿರುವ ಮಾರಿ ತೆಯ್ಯಾಟಂ ತರ ಎಂಬ ವಿಶಾಲ ಪ್ರದೇಶದಲ್ಲಿ ಮಾರಿದೈವಗಳಾದ ಮಾರಿ ಕುಲವನ್- ಮಾಮಾಯಿ ಕುಲವನ್, ಮಾರಿಕಲಿಚ್ಚಿ – ಮಾಮಾಯಿಕಲಿಚ್ಚಿ, ಮಾರಿಗುಳಿಗನ್ – ಮಾಮಾಯಿಗುಳಿಗನ್ ಎಂಬಿ ತೆಯ್ಯಾಂಗಳನ್ನು ಒಟ್ಟಿಗೆ ಕಟ್ಟಿ ಆಡುವುದಾಗಿದೆ. ಈ ತೆಯ್ಯಾಂಗಲನ್ನು ಮಲಯಾಳ ಕೋಪಾಳ (ಪೊಳ್ಲ) ಸಮುದಾಯದವರು ಕಟ್ಟುವುದಾಗಿದೆ.

ಮುಂದುವರೆಯುತ್ತದೆ.

ಹಿಂದಿನ ಲೇಖನಉತ್ತರಾಷಾಢ (ಪ್ರಥಮ ಚರಣ)
ಮುಂದಿನ ಲೇಖನಕೂಗಿ ಕರೆದೇನೋ ನಿನ್ನ