ಮನೆ ಸುದ್ದಿ ಜಾಲ ವಾರಣಾಸಿ : ಬಿಯ‌ರ್ ಕುಡಿಯುತ್ತಾ ಗಂಗಾ ಸ್ನಾನ ಮಾಡಿದ ಯುವಕನ ವಿರುದ್ಧ ಪ್ರಕರಣ

ವಾರಣಾಸಿ : ಬಿಯ‌ರ್ ಕುಡಿಯುತ್ತಾ ಗಂಗಾ ಸ್ನಾನ ಮಾಡಿದ ಯುವಕನ ವಿರುದ್ಧ ಪ್ರಕರಣ

0

ವಾರಣಾಸಿ: ಬಿಯ‌ರ್ ಕುಡಿಯುತ್ತಾ ಗಂಗಾ ನದಿಯಲ್ಲಿ ಸ್ನಾನ ಮಾಡಿದ ಬಿಹಾರ ಮೂಲದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿವೆ. ಆನ್‌ಲೈನ್‌ನಲ್ಲಿ ವಿಡಿಯೊ ಕಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಅತುಲ್ ಅಂಜನ್‌ ತ್ರಿಪಾಠಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ.

ಈ ಕುರಿತು ಬಿಹಾರ ಮೂಲದ ಯುವಕನನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಬಿಜೆಪಿಯ ಸ್ಥಳೀಯ ನಾಯಕ ಶಶಾಂತ್ ತ್ರಿಪಾಠಿ ಅವರ ದೂರಿನ ಅನ್ವಯ ಬಿಎನ್‌ಎಸ್ ಸೆಕ್ಷನ್ 196 (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 299 (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪವಿತ್ರ ಗಂಗಾ ಸ್ನಾನದ ವೇಳೆ ಬಿಯರ್ ಕುಡಿಯುವ ಮೂಲಕ ಕೋಟ್ಯಂತರ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆಪಾದಿಸಲಾಗಿದೆ. ಈ ಹಿಂದೆ ಗಂಗಾ ನದಿಯಲ್ಲಿ ಬಿರಿಯಾನಿ ಸೇವಿಸಿದ ಪ್ರಕರಣದಲ್ಲಿ ಪೊಲೀಸರು 14 ಮಂದಿ ವಿರುದ್ಧ ಎಫ್‌ಐಆ‌ರ್ ದಾಖಲಿಸಿದ್ದರು ಎಂದು ಮಾಹಿತಿ ತಿಳಿದುಬಂದಿದೆ.