ಮನೆ ಸುದ್ದಿ ಜಾಲ ಟಿವಿಕೆಗೆ ಬೇಷರತ್‌ ಬೆಂಬಲ ಸೂಚಿಸಿದ ವಿಸಿಕೆ – ನಂಬರ್‌ ಗೇಮ್‌ನಲ್ಲಿ ವಿಜಯ್‌ ಸೇಫ್..!

ಟಿವಿಕೆಗೆ ಬೇಷರತ್‌ ಬೆಂಬಲ ಸೂಚಿಸಿದ ವಿಸಿಕೆ – ನಂಬರ್‌ ಗೇಮ್‌ನಲ್ಲಿ ವಿಜಯ್‌ ಸೇಫ್..!

0

ಚೆನ್ನೈ : ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಬಹುಮತಕ್ಕೆ ನಡೆಯುತ್ತಿದ್ದ ಕಸರತ್ತಿಗೆ ಕೊನೆಗೂ ತೆರೆ ಬಿದ್ದಿದೆ. ಟಿವಿಕೆಗೆ ವಿಸಿಕೆ ಬೇಷರತ್‌ ಬೆಂಬಲ ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ವಿಜಯ್‌ಗೆ 118 ಶಾಸಕರ ಬೆಂಬಲ ಸಿಕ್ಕಿದೆ.

ವಿಸಿಕೆ ಇಬ್ಬರು ಶಾಸಕರು ಟಿವಿಕೆಗೆ ಬೆಂಬಲ ಪತ್ರ ನೀಡಿದ್ದಾರೆ ಎನ್ನಲಾಗಿದೆ. ಸರಳ ಬಹುಮತ ಬೆನ್ನಲ್ಲೇ ವಿಜಯ್‌ ಚೆನ್ನೈ ನಿವಾಸದಿಂದ ನಿರ್ಗಮಿಸಿದ್ದಾರೆ. ಇಂದು ಸಂಜೆ ರಾಜ್ಯಪಾಲ ಅರ್ಲೇಕರ್‌ ಅಲಭ್ಯರಾಗಿದ್ದಾರೆ. ಸಂಜೆ 7:10ಕ್ಕೆ ರಾಜ್ಯಪಾಲರು ಕೇರಳದ ತಿರುವನಂತಪುರಕ್ಕೆ ತೆರಳಲಿದ್ದಾರೆ. ಹೀಗಾಗಿ, ಅದಕ್ಕೂ ಮುನ್ನ ರಾಜ್ಯಪಾಲರ ಭೇಟಿಗೆ ವಿಜಯ್‌ ಮುಂದಾಗಿದ್ದಾರೆ ಎನ್ನಲಾಗಿದೆ.

ಬೆಂಬಲದ ಕುರಿತು ವಿಸಿಕೆ ಇನ್ನೂ ಅಧಿಕೃತವಾಗಿ ಹೇಳಿಲ್ಲ. ವಿಸಿಕೆ ಬೆಂಬಲವು ಟಿವಿಕೆ ಬಹುಮತಕ್ಕೆ ನಿರ್ಣಾಯಕವಾಗಿದೆ. ವಿಜಯ್ ನೇತೃತ್ವದ ಒಕ್ಕೂಟವು ಈಗಾಗಲೇ 116 ಚುನಾಯಿತ ಶಾಸಕರ ಬೆಂಬಲವನ್ನು ಹೊಂದಿದ್ದು, ಇದರಲ್ಲಿ ಕಾಂಗ್ರೆಸ್‌ನ ಐದು ಮತ್ತು ಎಡ ಪಕ್ಷಗಳ ನಾಲ್ಕು ಸ್ಥಾನಗಳು ಸೇರಿವೆ. ವಿಸಿಕೆಯ ಎರಡು ಸ್ಥಾನಗಳನ್ನು ಸೇರಿಸಿದಾಗ, ಅದರ ಬಲವು 118 ಕ್ಕೆ ಏರುತ್ತದೆ. ಇದು ರಾಜ್ಯದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ ಶಾಸಕರ ಸಂಖ್ಯೆಯಾಗಿದೆ.