ಮನೆ ಮನರಂಜನೆ ರಶ್ಮಿಕಾ ಮಂದಣ್ಣ ಜೊತೆ ಮದುವೆ ವಿಚಾರ ತಳ್ಳಿ ಹಾಕಿದ ವಿಜಯ್ ದೇವಕೊಂಡ

ರಶ್ಮಿಕಾ ಮಂದಣ್ಣ ಜೊತೆ ಮದುವೆ ವಿಚಾರ ತಳ್ಳಿ ಹಾಕಿದ ವಿಜಯ್ ದೇವಕೊಂಡ

0

ಟಾಲಿವುಡ್‌ನ ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ರಶ್ಮಿಕಾ ಮಂದಣ್ಣ ನಡುವಿನ ’ಮದುವೆ’ಯ ಗಾಳಿ ಸುದ್ದಿ ಬಗ್ಗೆ ವಿಜಯ್‌ ದೇವರಕೊಂಡ ಕೊನೆಗೂ ಮೌನ ಮುರಿದಿದ್ದು, ಅಂತಹ ವರದಿಗಳು ಅಸಂಬದ್ಧ’ ಎಂದು ಟ್ವೀಟ್‌ ಮಾಡಿದ್ದಾರೆ.

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ಕಳೆದೊಂದು ವಾರದಲ್ಲಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ಮದುವೆ ಸುದ್ದಿ ವ್ಯಾಪಕವಾಗಿ ಹರಡಿತ್ತು. ಸಿನಿಮಾ ಪತ್ರಿಕೆಗಳು, ಸಾಮಾಜಿಕ ಮಾಧ್ಯಮಗಳು ಹಾಗೂ ಟಿ.ವಿಗಳಲ್ಲೂ ಮದುವೆ ವಿಚಾರದ ಸುದ್ದಿಗಳು ಪ್ರಸಾರವಾಗಿದ್ದವು.

ಅಂತಿಮವಾಗಿ ಈ ಬಗ್ಗೆ ವಿಜಯ್‌ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದು, ಮದುವೆಯ ಕುರಿತ ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಇನ್ನು ಈ ಬಗ್ಗೆ ರಶ್ಮಿಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಅವರು ’ಗೀತ ಗೋವಿಂದಂ’ ಸಿನಿಮಾದ ಬಳಿಕ ಜೊತೆಯಾಗಿ ಪದೇ ಪದೇ ಕಾಣಿಸಿಕೊಳ್ಳುವುದು. ಇಬ್ಬರ ಬೇರೆ ಬೇರೆ ಸಿನಿಮಾಗಳ ಪ್ರಚಾರ ಕಾರ್ಯದ ಸಮಾರಂಭಗಳಲ್ಲಿ ಭಾಗಿಯಾಗುತ್ತಿರುವುದು. ಗೋವಾದಲ್ಲಿ ಜೊತೆಯಾಗಿ ಹೊಸ ವರ್ಷ ಆಚರಣೆ ಮಾಡಿದ್ದು, ಇಬ್ಬರ ಕುಟುಂಬದ ಸದಸ್ಯರು ಒಟ್ಟಾಗಿ ಪ್ರವಾಸ ಮಾಡಿರುವುದು, ವಿಜಯ್‌ ದೇವರಕೊಂಡ ಮನೆಯಲ್ಲಿ ರಶ್ಮಿಕಾ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದು ಈ ಎಲ್ಲಾ  ಘಟನೆಗಳನ್ನು ಇಟ್ಟುಕೊಂಡು ಅಭಿಮಾನಿಗಳು ವಿಜಯ್‌ ಮತ್ತು ರಶ್ಮಿಕಾ ಲವ್‌ ಮಾಡುತ್ತಿದ್ದು,  ಇವರು ಡಿಸೆಂಬರ್‌ ಅಂತ್ಯದ ಒಳಗೆ ಮದುವೆಯಾಗುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.

ಮದುವೆಯ ವಿಚಾರವನ್ನು ತಳ್ಳಿಹಾಕಿರುವ ವಿಜಯ್‌ ದೇವರಕೊಂಡ ಗಾಸಿಪ್‌ಗಳಿಗೆ ಬ್ರೇಕ್ ಹಾಕಿದ್ದಾರೆ.

ಸದ್ಯ ವಿಜಯ್‌ ಲೈಗರ್‌ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ.

ಹಿಂದಿನ ಲೇಖನವೈರಮುಡಿ ಉತ್ಸವ: ಅಗತ್ಯ ಸೌಲಭ್ಯ ಕಲ್ಪಿಸಲು ಡಿಸಿ ಸೂಚನೆ
ಮುಂದಿನ ಲೇಖನಪತಿ ನಿಂದನೆಗೆ ಮನನೊಂದು ಪತ್ನಿಆತ್ಮಹತ್ಯೆ