ಮನೆ ಅಪರಾಧ ಪತಿ ನಿಂದನೆಗೆ ಮನನೊಂದು ಪತ್ನಿಆತ್ಮಹತ್ಯೆ

ಪತಿ ನಿಂದನೆಗೆ ಮನನೊಂದು ಪತ್ನಿಆತ್ಮಹತ್ಯೆ

0

ನೀನು ಕುರೂಪಿ,ಸುಂದರವಾಗಿಲ್ಲ‌ ಎಂದು ಪದೇ ಪದೇ  ಪತಿ ಪತ್ನಿಯನ್ನ ನಿಂದನೆ ಮಾಡಿದ ಕಾರಣ ಮನನೊಂದ ಮಹಿಳೆ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು,ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಡಿಜೆ ಹಳ್ಳಿಯ ಈದ್ಗಾ ಮೊಹಲ್ಲಾದಲ್ಲಿ ನಡೆದಿದೆ.

ಇದೇ ತಿಂಗಳ 18  ರಂದು  ಬೆಳಗ್ಗೆ 12.30 ಕ್ಕೆ ಈ ಘಟನೆ ನಡೆದಿದ್ದು, ಅನಿಶಾ (33) ಆತ್ಮಹತ್ಯೆ ಯತ್ನಿಸಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮೂರು ವರ್ಷದ ಹಿಂದೆ ನಿಜಾಮುದ್ದೀನ್ ಜೊತೆಗೆ ಎರಡನೇ ಮದುವೆಯಾಗಿದ್ದ ಅನಿಶಾಗೆ ಪ್ರತಿದಿನ ಕಿರುಕುಳ ನೀಡಲಾಗುತ್ತಿತ್ತು, ದಂಪತಿಗೆ ಎರಡು ವರ್ಷ ಹಾಗೂ 6 ತಿಂಗಳ ಇಬ್ಬರು ಮಕ್ಕಳಿದ್ರೂ ಗಂಡ ಹಾಗೂ ಅತ್ತೆ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ವಿಫಲವಾಗಿ ಕೊನೆಯುಸಿರೆಳೆದಿದ್ದಾರೆ.

ಘಟನೆ ಸಂಬಂಧ ಡಿ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.

ಹಿಂದಿನ ಲೇಖನರಶ್ಮಿಕಾ ಮಂದಣ್ಣ ಜೊತೆ ಮದುವೆ ವಿಚಾರ ತಳ್ಳಿ ಹಾಕಿದ ವಿಜಯ್ ದೇವಕೊಂಡ
ಮುಂದಿನ ಲೇಖನತಾಯಿ ಮಗಳ ಕೊಲೆ: ಆರೋಪಿ ಬಂಧನ