ಚಾಮರಾಜನಗರ: ಬಿ.ಎಸ್.ಯಡಿಯೂರಪ್ಪ ನಮ್ಮ ರಾಜಾಹುಲಿ. ವಿಜಯೇಂದ್ರ ನಮ್ಮ ಸೂಪರ್ ಸ್ಟಾರ್. ಅವರು ಸಣ್ಣ ಹುಲಿ ಅಲ್ಲ, ಹೆಬ್ಬುಲಿಯಾಗಿ ಬೆಳೆದಿದ್ದಾರೆ ಎಂದು ಶಾಸಕ ರಾಜುಗೌಡ ಹೇಳಿದರು.
ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ಪಕ್ಷವನ್ನು ಅಧಿಕಾರಕ್ಕೆ ತರಲು ವಿಜಯೇಂದ್ರ ಸಂಘಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ 70 ವರ್ಷ ಆಳ್ವಿಕೆ ಮಾಡಿದರು ಮೀಸಲಾತಿ ಹೆಚ್ಚಿಸಲಿಲ್ಲ. ಆದರೆ ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದೆ. ಪರಿವಾರ ಸಮುದಾಯಕ್ಕೆ ಮೀಸಲಾತಿ ಜಾಸ್ತಿ ಮಾಡಿದ್ದಾರೆ ಎಂದರು.
ಶಾಸಕ ನಿರಂಜನ್ ಕುಮಾರ್ ರನ್ನು ಅತಿ ಹೆಚ್ಚು ಮತದಿಂದ ಗೆಲ್ಲಿಸಿ. ವಿಜಯೇಂದ್ರರನ್ನು ಪವರ್ ಪುಲ್ ಲೀಡರ್ ಆಗಲೂ ಬೆಂಬಲಿಸಿ. ಎಲ್ಲರನ್ನೂ ಒಂದಾಗಿ ತೆಗೆದುಕೊಂಡು ಹೋಗುವ ಪಕ್ಷ ಬಿಜೆಪಿ. ನಮ್ಮ ಉಸಿರುವವರೆಗೂ ನಮ್ಮ ಸಮಾಜದ ಬಂಧುಗಳು ಮರೆಯಬಾರದು. ಯಡಿಯೂರಪ್ಪ ಕಮಲ ಗೆಲ್ಲಿಸಿದ್ದಾರೆ, ಅದನ್ನು ಹೆಮ್ಮರ ಮಾಡಿ ಎಂದು ಹೇಳಿದರು.
ಗುಂಡ್ಲುಪೇಟೆ ನಗರಕ್ಕೆ ಪ್ರತಿ ಮನೆಗೂ ಕುಡಿಯುವ ನೀರು ಕೊಡಲು 127 ಕೋಟಿ ಕಾಮಗಾರಿ ತಂದಿದ್ದಾರೆ. ನಾಳೆ ಈ ಕಾಮಗಾರಿಯ ಗುದ್ದಲಿ ಪೂಜೆ ನಡೆಯುತ್ತೆ. ಬಿಜೆಪಿ ಪಕ್ಷ ಅಂದ್ರೆ ಲಿಂಗಾಯತರ ಪಕ್ಷ ಅಂತಾ ಹೇಳಿತ್ತಿದ್ದರು ಎಂದು ಕಿಡಿಕಾರಿದರು.