ಮನೆ ಆರೋಗ್ಯ ದಿನಪೂರ್ತಿ ಆಕ್ಟೀವ್ ಆಗಿರಲು ಬಯಸುತ್ತೀರಾ ? ಹಾಗಿದ್ದರೆ ಈ ಟ್ರಿಕ್ ಫಾಲೋ ಮಾಡಿ

ದಿನಪೂರ್ತಿ ಆಕ್ಟೀವ್ ಆಗಿರಲು ಬಯಸುತ್ತೀರಾ ? ಹಾಗಿದ್ದರೆ ಈ ಟ್ರಿಕ್ ಫಾಲೋ ಮಾಡಿ

0

ಈಗಿನ ಬ್ಯುಸಿ ಜೀವನ ಶೈಲಿಯಲ್ಲಿ ಫಿಟ್ನೆಸ್ ಬಹಳ ಮುಖ್ಯ. ಸಾಕಾಷ್ಟು ಮಂದಿ ಫಿಟ್ ಆಗಿರಲು ಜಿಮ್, ವ್ಯಾಯಾಮ, ಡಯಟ್ ನಂತಹ ಸಾಕಷ್ಟು ಕಸರತ್ತುಗಳು ಮಾಡುತ್ತಾರೆ.

Join Our Whatsapp Group

ಇದೆಲ್ಲದರ ಜೊತೆಗೆ ವಾಕಿಂಗ್ ಮಾಡುವುದು ಫಿಟ್ ಆಗಿರಲು ಸಹಾಯ ಮಾಡುತ್ತದೆ. ಹಾಗಾದರೆ ವಾಕಿಂಗ್ ನಿಂದ ಆಗುವ ಉಪಯೋಗಗಳ ಬಗ್ಗೆ ತಿಳಿಯಲು ಮುಂದಿನ ಈ ಲೇಖನ ಓದಿ.

ಪ್ರತಿನಿತ್ಯ ನಾವು ಮಾಡುವ ಅರ್ಧ ಗಂಟೆ ವಾಕಿಂಗ್ ಆರೊಗ್ಯಕರವಾದ ಜೀವನ ಸಾಗಿಸಲು ಸಹಕಾರಿಯಾಗುತ್ತೆ. ಸಂಧಿವಾತ ಸೇರಿ ಅನೇಕ ಸಮಸ್ಯೆಗಳಿಂದ ಬಳಲುತ್ತಿರುವವರು ದಿನಕ್ಕೆ 30 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ವಾಕಿಂಗ್ ಮಾಡುವುದರಿಂದ ನೋವು ನಿವಾರಣೆಯ ಅನುಭವವನ್ನು ಪಡೆಯಬಹುದು.

ವ್ಯಕ್ತಿಯು  ದಿನಕ್ಕೆ ಕನಿಷ್ಠ 30 ನಿಮಿಷ ನಡೆಯುವುದರಿಂದ ಕೀಲುಗಳು, ಸ್ನಾಯುಗಳು ಮತ್ತು ಮೂಳೆಗಳನ್ನು ಬಲವಾಗುತ್ತದೆ. ಹಾಗೆ  ಚಯಾಪಚಯ ಕ್ರೀಯೆಯೂ ಸರಾಗವಾಗಿ ನಡೆಯುತ್ತದೆ.

ಹೃದಯದ ಆರೋಗ್ಯಕ್ಕೆ ವಾಕಿಂಗ್

ವಾಕಿಂಗ್ ಹೃದ್ರೋಗವನ್ನು ನಿವಾರಿಸುತ್ತದೆ, ಅದಲ್ಲದೆ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಹಾಗೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ  ಮತ್ತು ಹೃದಯವನ್ನು ಬಲಪಡಿಸುತ್ತದೆ. ದಿನಕ್ಕೆ 30 ನಿಮಿಷ ನಡೆಯುವ ಮಹಿಳೆಯರು ಪಾರ್ಶ್ವವಾಯು ಅಪಾಯವನ್ನು 20% ಮತ್ತು ವೇಗವನ್ನು ಹೆಚ್ಚಿಸಿದಾಗ 40% ರಷ್ಟು ಕಡಿಮೆ ಮಾಡಬಹುದು. ಅಧಿಕ ಕೊಲೆಸ್ಟ್ರಾಲ್, ಮಧುಮೇಹದಂತಹ ಸಮಸ್ಯೆಗಳು ಸುಧಾರಿಸುತ್ತವೆ.

ದೀರ್ಘ ಆಯಸ್ಸು:

ಐವತ್ತು ಮತ್ತು ಅರವತ್ತರ ವಯಸ್ಸಿನಲ್ಲಿ ನಿಯಮಿತವಾಗಿ ವಾಕಿಂಗ್  ಮಾಡುವ ಜನರು ಮುಂದಿನ ಎಂಟು ವರ್ಷಗಳಲ್ಲಿ ಸಾಯುವ ಸಾಧ್ಯತೆ 35% ರಷ್ಟು ಕಡಿಮೆ. ಅದಲ್ಲದೆ ಉತ್ತಮ ಆರೋಗ್ಯ ಹೊಂದಿರುವುದರ ಜೊತೆ ದಿನವು ವಾಕಿಂಗ್ ಮಾಡುವವರ ಸಾಯುವ ಸಾಧ್ಯತೆ  45% ರಷ್ಟು ಕಡಿಮೆ ಇರುತ್ತದೆ.

ತೂಕ ನಷ್ಟಕ್ಕೆ ಸಹಕಾರಿ:

ದಿನನಿತ್ಯ ಚುರುಕಾದ 30 ನಿಮಿಷಗಳ ನಡಿಗೆಯುನ್ನು ಮಾಡುವುದರಿಂದ 200 ಕ್ಯಾಲೊರಿಗಳನ್ನು  ಕಳೆದುಕೊಳ್ಳಬಹುದು. ಇದರಿಂದ ದೇಹದಲ್ಲಿನ ಕೊಬ್ಬು ಕಡಿಮೆಯಾಗಿ ಸ್ನಾಯು ಶಕ್ತಿ ಹೆಚ್ಚುತ್ತದೆ.

ಉತ್ತಮ ಉಸಿರಾಟ

ನಡೆಯುವಾಗ ಉಸಿರಾಟದ ಪ್ರಮಾಣವು ಅಧಿಕಗೊಂಡು ಆಮ್ಲಜನಕವು ರಕ್ತದಲ್ಲಿ  ವೇಗವಾಗಿ ಚಲಿಸುತ್ತದೆ. ಹಾಗೇ ತ್ಯಾಜ್ಯ ಉತ್ಪನ್ನಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಶಕ್ತಿಯ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಮಾನಸಿಕ ಆರೋಗ್ಯದಲ್ಲಿ ಚೇತರಿಕೆ

ಮಾನಸಿಕ ಸ್ಥಿರತೆಯು ವ್ಯಕ್ತಿಯ ನರಮಂಡಲ, ಪಾಲನೆ, ಅನುಭವ, ಅಭಿವೃದ್ಧಿಯ ಮಟ್ಟ ಇತ್ಯಾದಿಗಳಂತಹ ಅಂಶಗಳನ್ನು ಅವಲಂಬಿಸಿರುತ್ತದೆ. ನಿರಂತರ ನಡಿಗೆಯ ಮೂಲಕ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯಕ. ನಿರಂತರವಾಗಿ ವಾಕಿಂಗ್ ಮಾಡುವ 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ ವಯಸ್ಸಿಗೆ ಸಂಬಂಧಿಸಿದ ನೆನಪಿನ ಕ್ಷೀಣತೆ ಕಡಿಮೆಯಾಗಿದೆ.