ಮನೆ ರಾಜ್ಯ ಲೋಕಸಭಾ ಚುನಾವಣೆಯಲ್ಲಿ 28 ಸೀಟ್ ಗೆಲ್ಲುತ್ತೇವೆ: ಕೆ.ಎಸ್.ಈಶ್ವರಪ್ಪ

ಲೋಕಸಭಾ ಚುನಾವಣೆಯಲ್ಲಿ 28 ಸೀಟ್ ಗೆಲ್ಲುತ್ತೇವೆ: ಕೆ.ಎಸ್.ಈಶ್ವರಪ್ಪ

0

ಹಾವೇರಿ: ಯಾವುದೇ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ಬಂದರು 28 ಸೀಟ್ ಗೆಲ್ಲುತ್ತೇವೆ, ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಮಾಡುತ್ತೇವೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.

ಹಾವೇರಿಯ ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಯಾರು, ವಿಪಕ್ಷ ನಾಯಕ ಯಾರು ಎಂದು ಪ್ರಶ್ನೆ ಕೇಳುತ್ತಿದ್ದಾರೆ. ಯಾರಾದರೂ ಆಗುತ್ತಾರೆ. ಲಕ್ಷಾಂತರ ಕಾರ್ಯಕರ್ತರಿದ್ದಾರೆ, ಸಂಘಟನೆಯ ಕೆಲಸ ನಿಂತಿಲ್ಲ. ಕೇಂದ್ರದ ನಾಯಕರು ನಮಗಿಂತ ಬುದ್ದಿವಂತರು. ಯಾವ ಕಾರಣ ನಿಲ್ಲಿಸಿದ್ದಾರೆ ಎನ್ನುವು‌ದನ್ನ ಆಲೋಚನೆ ಮಾಡಿರುತ್ತಾರೆ ಎಂದರು.

ಸೂರ್ಯ ಚಂದ್ರ ಮತ್ತೆ ಮತ್ತೆ ಹುಟ್ಟಿಬಂದರೂ 17 ಜನರನ್ನು ಮತ್ತೆ ಕರೆದುಕೊಳ್ಳಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಬರ್ರಿ ಕಾಂಗ್ರೆಸ್ ಗೆ ಎಂದು ಈಗ ಎಲ್ಲರ ಮನೆಗೆ ಹೋಗಿ ಕೈಕಾಲು ಹಿಡಿಯುತ್ತಿದ್ದಾರೆ. ಒಬ್ಬರಾದರೂ ಬಂದರಾ? ಇದು ಕಾಂಗ್ರೆಸ್ ಹಣೆ ಬರಹ, ಗ್ಯಾರಂಟಿ ಹೆಸರಲ್ಲಿ ಒಂದು ಸಲ ಮೋಸ ಮಾಡಿದರು. ಮತ್ತೆ ಮತ್ತೆ ಮೋಸ ಮಾಡಲು ಆಗಲ್ಲ. ಕಾಂಗ್ರೆಸ್ ಮೋಸಗಾರರ ಪಕ್ಷವೆಂದು ರಾಜ್ಯದ ಜನತೆಗೆ ಗೊತ್ತಾಗಿದೆ ಎಂದರು.

ಹಾವೇರಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ವಾತಾವರಣ ಕೆಡಿಸುವ ಪ್ರಶ್ನೆ ಇಲ್ಲ. ಬಿಜೆಪಿ ಗೆಲ್ಲುತ್ತದೆ, ಕುಳಿತು ಮಾತನಾಡುತ್ತೇವೆ ಎಂದರು.

ಹಿಂದಿನ ಲೇಖನದಸರಾ ಉದ್ಘಾಟನೆಗೆ ಆಯ್ಕೆ: ಕನ್ನಡದ ಉಳಿವಿಗೆ, ಶಾಂತಿಮಂತ್ರವನ್ನು ಜಗತ್ತಿಗೆ ಸಾರಲು ಸ್ಫೂರ್ತಿಯಾಗಿ ತೆಗೆದುಕೊಳ್ಳೋಣ ಎಂದ ಹಂಸಲೇಖ
ಮುಂದಿನ ಲೇಖನಗಡಿ ವಿಚಾರದಲ್ಲಿ ಚೀನಾ ಮತ್ತೆ ತಗಾದೆ: ಅರುಣಾಚಲ ಪ್ರದೇಶ ಸೇರಿಸಿ ನಕ್ಷೆ ಬಿಡುಗಡೆ