ಮನೆ ರಾಜ್ಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತೇವೆ: ಕಿಮ್ಮನೆ ರತ್ನಾಕರ್ ವಿಶ್ವಾಸ

ಲೋಕಸಭಾ ಚುನಾವಣೆಯಲ್ಲಿ ಗೆಲ್ಲುತ್ತೇವೆ: ಕಿಮ್ಮನೆ ರತ್ನಾಕರ್ ವಿಶ್ವಾಸ

0

ತೀರ್ಥಹಳ್ಳಿ: ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ, ಒಳ್ಳೆಯ ವಾತಾವರಣ ಇದೆ. ಬಿಜೆಪಿಯವರು ಶ್ರೀಮಂತರ ಪರ ಇದ್ದಾರೆ, ನಾವು ಬಡವರ ಪರ ಇದ್ದೇವೆ. ಖಂಡಿತವಾಗಿ ಈ ಬಾರಿ ಯಶಸ್ವಿಯಾಗುತ್ತೇವೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ಪಟ್ಟಣದ ರಥಬೀದಿಯಲ್ಲಿರುವ ಸಮಗೋಡು ಕೋದಂಡರಾಮನ ದೇವಸ್ಥಾನದಲ್ಲಿ ದೇವಸ್ಥಾನದ ಅಭಿವೃದ್ಧಿಗಾಗಿ ಸರ್ಕಾರ 25 ಲಕ್ಷ ಹಣ ಬಿಡುಗಡೆ ಮಾಡಿರುವ ಕಾರಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ  ಮಾತನಾಡಿದರು.

ಶಿವಮೊಗ್ಗದಲ್ಲಿ ಈಶ್ವರಪ್ಪ ಅವರ ಬಂಡಾಯದ ಬಗ್ಗೆ ಈಗಲೇ ಹೇಳಲು ಆಗುವುದಿಲ್ಲ, ಅವರು ನಾಮಪತ್ರ ಸಲ್ಲಿಸಿ ವಾಪಾಸ್ ಪಡೆಯದಿದ್ದಾಗ ಅದರ ಬಗ್ಗೆ ಮಾತನಾಡುತ್ತೇನೆ ಎಂದರು.

ಈ ದೇಶದಲ್ಲಿ ಹಣ ಇದ್ದರೆ ಏನು ಬೇಕಾದರೂ ಮಾಡಬಹುದು. ಈ ಹತ್ತು ವರ್ಷದಲ್ಲಿ ಒಬ್ಬ ಬಿಜೆಪಿಯವನ ಮೇಲೆ ಇ.ಡಿ ಅಥವಾ ಸಿಬಿಐ ಕೇಸ್ ಆಗಿಲ್ಲ. ಅವರೆಲ್ಲಾ ಏನು ಶ್ರೀ ರಾಮನ ವ್ಯಕ್ತಿತ್ವದವರ? ಅವರ ಮನೆಯಲ್ಲಿ ಹಣ, ಬಂಗಾರ, ಬೆಳ್ಳಿ ಇಲ್ಲವೇ? ಅವರೆಲ್ಲಾ ಪರಿಶುದ್ಧರ? ಭಾರತೀಯ ಜನತಾ ಪಾರ್ಟಿ ಎಂದರೆ ಅದೊಂದು ವಾಷಿಂಗ್ ಮೆಷಿನ್ ಎಂದು ವಾಗ್ದಾಳಿ ನಡೆಸಿದರು.

ತೀರ್ಥಹಳ್ಳಿಯಲ್ಲೂ ಬಡವ ಎಂದುಕೊಂಡು ಎಷ್ಟು ರಿಯಲ್ ಎಸ್ಟೇಟ್ ಮಾಡಿದ್ದಾರೆ, ಯಾರೆಲ್ಲರ ಹೆಸರಲ್ಲಿ ಮಾಡುತ್ತಿದ್ದಾರೆ ಎನ್ನುವುದನ್ನು, ತೀರ್ಥಹಳ್ಳಿ ಸುತ್ತಮುತ್ತ ಜಾಗವನ್ನು ಯಾರು ಕಟ್ಟಿಸುತ್ತಿದ್ದಾರೆ ಎಂದು ಕಾಣಿಸುತ್ತಿದೆ. ನಾನು 10 ವರ್ಷ ಶಾಸಕ, ಆದರೆ ಸೈಟ್ ಮಂಜೂರು ಮಾಡಿಸಿಕೊಂಡಿಲ್ಲ. ಜ್ಞಾನೇಂದ್ರ ಅವರು 15 ವರ್ಷದ ಹಿಂದೆ ಸೈಟ್ ಮಂಜೂರು ಮಾಡಿಸಿಕೊಂಡಿದ್ದಾರೆ. 10 ಕೋಟಿ ಮೌಲ್ಯದ್ದು ಬೇಡ 50 ಕೋಟಿ ಮೌಲ್ಯದ ಬದಲಾವಣೆ ಬೇಕು ಎಂದು ಸುಪ್ರೀಂ ಕೋರ್ಟ್ ಗೆ ಹೋಗಿದಕ್ಕೆ ಕಪಾಳಕ್ಕೆ ಹೊಡೆದು ವಾಪಾಸ್ ಕಳುಹಿಸಿದರು ಎಂದು ಆರಗ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದಿನ ಲೇಖನಚುನಾವಣಾ ಬಾಂಡ್ ಎನ್ನುವುದು ಬಿಜೆಪಿಯ ಕೈಯಲ್ಲಿರುವ ರಾಜಕೀಯ ಸುಲಿಗೆಯ ಬ್ರಹ್ಮಾಸ್ತ್ರವೇ?: ಸಿದ್ದರಾಮಯ್ಯ
ಮುಂದಿನ ಲೇಖನಬ್ಯಾಂಕ್‌ ಗೆ ವಂಚನೆ ಪ್ರಕರಣ: ತನಿಖೆಗೆ ಸಹಕರಿಸಲು ಶಾಸಕ ರಮೇಶ್‌ ಜಾರಕಿಹೊಳಿಗೆ ಹೈಕೋರ್ಟ್‌ ನಿರ್ದೇಶನ