ಮನೆ ಆರೋಗ್ಯ ದೇಹಕ್ಕೆ ಉತ್ತಮ ಓಟ್ಸ್ ಯಾವುದು? ಇಲ್ಲಿದೆ ಮಾಹಿತಿ

ದೇಹಕ್ಕೆ ಉತ್ತಮ ಓಟ್ಸ್ ಯಾವುದು? ಇಲ್ಲಿದೆ ಮಾಹಿತಿ

0

ನೀವು ಓಟ್ಸ್ ನಿಂದ ಮಾಡಬಹುದಾದ ತಿನಿಸುಗಳನ್ನು ಹುಡುಕುವ ಮೊದಲು, ಓಟ್ಸ್ ಅನ್ನು ಫೈಬರ್ ಸಮೃದ್ಧವಾಗಿರುವ ಸಂಕೀರ್ಣ ಕಾರ್ಬೋಹೈಡ್ರೇಟ್ ಎಂದು ವರ್ಗೀಕರಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಓಟ್ಸ್ ನಲ್ಲಿ ಕರಗುವ ಫೈಬರ್ ಇರುವುದರಿಂದ ಆಹಾರಗಳ ಗ್ಲೈಸೆಮಿಕ್ ಸೂಚ್ಯಂಕವನ್ನು (ಜಿಐ) ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Join Our Whatsapp Group

ನೀವು ಪ್ರಯತ್ನಿಸಬಹುದಾದ ಓಟ್ಸ್ ಗಳ ಪಟ್ಟಿ

ಶುದ್ಧ ಓಟ್ಸ್ ಕೂಡ ಗ್ಲುಟೆನ್ ಮುಕ್ತವಾಗಿದೆ, ಆದ್ದರಿಂದ ಇದನ್ನು ಸೀಲಿಯಾಕ್ ರೋಗ( ಈ ರೋಗ ಇರುವವವರು ಗ್ಲುಟೆನ್ ಅಂಶವಿರುವ ಆಹಾರ ಸೇವಿಸಬಾರದು) ಇರುವವರು ಕೂಡ ಸೇವಿಸಬಹುದು ಎಂದು ತಜ್ಞರು ಹೇಳುತ್ತಾರೆ. ಓಟ್ಸ್ ಮೆಗ್ನೀಸಿಯಮ್ನನ ಉತ್ತಮ ಮೂಲವಾಗಿದೆ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾದರೆ ಓಟ್ಸ್ ನ ವಿಧಗಳಾವವು? ಯಾವುದು ಉತ್ತಮ? ಇಲ್ಲಿದೆ ಮಾಹಿತಿ.

ಸಂಪೂರ್ಣ ಓಟ್ಸ್ ಗ್ರೋಟ್ಸ್ (ಶುದ್ಧ ರೂಪದ ಧಾನ್ಯ) ಈ ಓಟ್ಸ್ ಅದರ ಶುದ್ಧ ರೂಪದಲ್ಲಿದೆ. ಅಂದರೆ ಯಾವುದೇ ರೀತಿಯ ಪೋಲಿಶ್​ಗಳಿಗೆ ಒಳಗಾಗಿರುವುದಿಲ್ಲ. ಆದ್ದರಿಂದ, ಇದನ್ನು ಬೇಯಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ. ಸಂಪೂರ್ಣ ಓಟ್ ಗ್ರೋಟ್ಸ್ ಬಳಸಿ ಯಾವುದಾದರೂ ಆಹಾರ ತಯಾರಿಸಲು ಸರಿ ಸುಮಾರು 30 ರಿಂದ 45 ನಿಮಿಷಗಳು ಬೇಕಾಗುತ್ತದೆ. ನೀವು ಮಾರುಕಟ್ಟೆಯಲ್ಲಿ ಓಟ್ಸ್ ಬ್ರಾನ್ ಅನ್ನು ನೋಡಿರಬಹುದು. ಇದು ವಾಸ್ತವವಾಗಿ ಓಟ್ ಗ್ರೋಟ್ಸ್ ನ ಹೊರ ಪದರವಾಗಿದೆ, ಆದರೆ ಇದನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುತ್ತದೆ.

ರೋಲ್ಡ್ ಓಟ್ಸ್ ಇವು ಹಳೆಯ ಶೈಲಿಯ ಓಟ್ಸ್ ಗಳಾಗಿದ್ದು, ಅವು ಹಬೆಯಲ್ಲಿ ಬೇಯುತ್ತದೆ ಜೊತೆಗೆ ಸೌಮ್ಯ ಪರಿಮಳವನ್ನು ಹೊಂದಿವೆ ಮತ್ತು ಅವುಗಳನ್ನು ಭಾಗಶಃ ಬೇಯಿಸಿರುವುದರಿಂದ, ತಯಾರಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಅಂದರೆ ಕೇವಲ ಎರಡರಿಂದ ಮೂರು ನಿಮಿಷಗಳು ಸಾಕಾಗುತ್ತದೆ.

ಸ್ಟೀಲ್ ಕಟ್ ಓಟ್ಸ್ ಅವು ಸಂಸ್ಕರಿಸದ ಓಟ್ಸ್ ಗೆ ನಿಕಟ ಸಂಬಂಧ ಹೊಂದಿವೆ. ಸ್ಟೀಲ್ ಕಟ್ ಓಟ್ಸ್ ತಯಾರಿಸಲು, ದೊಡ್ಡ ಸ್ಟೀಲ್ ಬ್ಲೇಡ್​​ಗಳನ್ನು ಬಳಸುವುದರಿಂದ ಈ ಹೆಸರು ಬಂದಿದೆ ಎನ್ನುತ್ತಾರೆ ಚಾವ್ಲಾ. ಇವು ರೋಲ್ಡ್ ಓಟ್ಸ್ ಗಿಂತ ಒರಟಾಗಿದ್ದು ತುಂಬಾ ಜಗಿಯು ಬೇಕಾಗುತ್ತದೆ. ಸ್ಟೀಲ್ ಕಟ್ ಓಟ್ಸ್ ನ ಸರಾಸರಿ ಅಡುಗೆ ಸಮಯ ಸುಮಾರು 15 ರಿಂದ 30 ನಿಮಿಷಗಳು.

ಇನ್ಸ್ಟಂಟ್ ಓಟ್ಸ್ ಇನ್ಸ್ಟಂಟ್ ಓಟ್ಸ್, ರೋಲ್ಡ್ ಓಟ್ಸ್ ನ ಅತ್ಯಂತ ಸಂಸ್ಕರಿಸಿದ ರೂಪವಾಗಿದೆ. ಏಕೆಂದರೆ ಅವುಗಳನ್ನು ಮೊದಲೇ ಬೇಯಿಸಲಾಗುತ್ತದೆ ಮತ್ತು ಒಣಗಿಸಲಾಗುತ್ತದೆ ಹಾಗೂ ಸಣ್ಣ ತುಂಡುಗಳಾಗಿ ಕತ್ತರಿಸಲಾಗುತ್ತದೆ. ನೀವು ಬೇಕಾದಲ್ಲಿ ಹಬೆಯಲ್ಲಿ ಬೇಯಿಸಿಕೊಳ್ಳಿ ಆಗ ರುಚಿ ಇನ್ನಷ್ಟು ಹೆಚ್ಚುತ್ತದೆ. ಅಥವಾ ತಿನ್ನುವ ಮೊದಲು ಅದನ್ನು ಬಿಸಿ ನೀರಿನಲ್ಲಿ ನೆನೆಸಿ ಬಳಿಕ ಸೇವಿಸಬಹುದು. ನಿಮ್ಮ ರುಚಿಗೆ ತಕ್ಕಂತೆ ಮಾಡಿಕೊಳ್ಳಿ.

ತ್ವರಿತವಾಗಿ ಮಾಡಿಕೊಳ್ಳುವ ಓಟ್ಸ್ ಅವು ರೋಲ್ಡ್ ಓಟ್ಸ್ ಆಗಿದ್ದು, ಅಡುಗೆಯ ಸಮಯವನ್ನು ಕಡಿಮೆ ಮಾಡಲು ಹೆಚ್ಚಿನ ಸಂಸ್ಕರಣೆಯ ಮೂಲಕ ತಯಾರಿಸಲಾಗುತ್ತದೆ. ಅಂದರೆ ಅವುಗಳನ್ನು ಭಾಗಶಃ ಬೇಯಿಸಲಾಗುತ್ತದೆ ಹಾಗಾಗಿ ಅವುಗಳನ್ನು ತಯಾರಿಸಲು ನಿಮಗೆ ಸಾಕಷ್ಟು ಸಮಯ ವ್ಯಯಿಸಬೇಕೆಂದಿಲ್ಲ. ಇದನ್ನು ಹಬೆಯಲ್ಲಿ ಬೇಯಿಸುವುದರಿಂದ ಹಳೆಯ ಶೈಲಿಯ ಓಟ್ಸ್ ಗಿಂತ ತೆಳುವಾಗುತ್ತದೆ. ತಿನ್ನಲು ಖುಷಿ ಕೊಡುತ್ತದೆ.

ಇವೆಲ್ಲದರಲ್ಲಿ ಚಾವ್ಲಾ ಅವರ ಪ್ರಕಾರ, ಉತ್ತಮವಾದ ಓಟ್ಸ್ ಎಂದರೆ ಸ್ಟೀಲ್ ಕಟ್ ಓಟ್ಸ್. ಇದು ಅತ್ಯುತ್ತಮ ಮತ್ತು ಆರೋಗ್ಯಕರ ರೀತಿಯ ಓಟ್ಸ್ ಆಗಿದೆ. ಏಕೆಂದರೆ ಅವು ಹೆಚ್ಚು ಸಂಸ್ಕರಣೆಗೆ ಒಳಗಾಗುವುದಿಲ್ಲ. ಈ ರೀತಿಯ ಓಟ್ಸ್ ದೇಹಕ್ಕೆ ದೊಡ್ಡ ಪ್ರಮಾಣದ ಫೈಬರ್ ಅನ್ನು ನೀಡುತ್ತದೆ, ಕಡಿಮೆ ಜಿಐ ಅನ್ನು ಹೊಂದಿರುತ್ತದೆ ಆದ್ದರಿಂದ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯಾ ಕ್ರಿಯೆ ಹಾಗೂ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಓಟ್ಸ್ ಅನ್ನು ಬೆಳಗಿನ ಉಪಾಹಾರದಲ್ಲಿ ಬಳಸಿಕೊಳ್ಳುವುದು ಉತ್ತಮ ಏಕೆಂದರೆ ಅವು ನಿಮ್ಮನ್ನು ದೀರ್ಘಕಾಲದವರೆಗೆ ಹಸಿವಾಗದಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಹಿಂದಿನ ಲೇಖನರಾಜ್ಯದಲ್ಲಿ ‘ಕೈ’ ಸರ್ಕಾರ ಹೆಚ್ಚು ದಿನ ಇರಲ್ಲ: ಕೆ.ಎಸ್ ಈಶ್ವರಪ್ಪ ಭವಿಷ್ಯ
ಮುಂದಿನ ಲೇಖನಶಾಲಾ ಮಕ್ಕಳಿಗೆ ಮತ್ತೆ ಬೈಸಿಕಲ್: ಸಿ.ಎಂ. ಸಿದ್ದರಾಮಯ್ಯ