ಮನೆ ರಾಜಕೀಯ ಸಿದ್ದರಾಮಯ್ಯ ಎಲ್ಲೇ ನಿಂತರೂ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ: ಎಂ ಬಿ ಪಾಟೀಲ್

ಸಿದ್ದರಾಮಯ್ಯ ಎಲ್ಲೇ ನಿಂತರೂ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ: ಎಂ ಬಿ ಪಾಟೀಲ್

0

ಬೆಳಗಾವಿ: ಸಿದ್ಧರಾಮಯ್ಯ ಎಲ್ಲೇ ನಿಂತರೂ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ಧರಾಮಯ್ಯ ಕೋಲಾರದಿಂದ ಸ್ಪರ್ಧಿಸದಂತೆ ರಾಹುಲ್ ಗಾಂಧಿ ಸಲಹೆ ನಂತರ ಬಿಜೆಪಿ ನಾಯಕರ ಟೀಕೆಗಳಿಗೆ ಟಾಂಗ್ ನೀಡಿದ ಎಂ.ಬಿ ಪಾಟೀಲ್,  ಸಿದ್ಧರಾಮಯ್ಯ ಕೋಲಾರ, ವರುಣ, ಬಾದಾಮಿ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ. ವರುಣಾ ಸಿದ್ದರಾಮಯ್ಯ ಕ್ಷೇತ್ರವೇ ಆಗಿದೆ. ಅವರು ಎಲ್ಲೇ ನಿಂತರೂ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದರು.

ಉರಿಗೌಡ ನಂಜೇಗೌಡ ಸಿನಿಮಾ ನಿರ್ಮಾಣ ಕೈಬಿಟ್ಟ ವಿಚಾರ ಕುರಿತು ವ್ಯಂಗ್ಯವಾಡಿ, ಮಾಡೋದಕ್ಕೆ ಬೇರೆ ಕೆಲಸ ಇಲ್ಲ ಯಾವುದ್ರೀ ಅದು ಉರಿಗೌಡ ನಂಜೇಗೌಡ . ಹೀಗಂತಾ ಬಿಜೆಪಿ ನಾಯಕರೇ ಕಿಡಿಕಾರಿದ್ದಾರೆ. ಬಹುಶಃ ನಿರ್ಮಲಾನಂದನಾಥ ಶ್ರೀಗಳು ಸರಿಯಾಗಿ ಕ್ಲಾಸ್ ತೆಗೆದಕೊಂಡಿರಬೇಕು. ಅದಕ್ಕೆ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ ಎಂದು ಕುಟುಕಿದರು.

ಹಿಂದಿನ ಲೇಖನಮುಚ್ಚಿದ ಲಕೋಟೆ ಪದ್ಧತಿ ಅಂತ್ಯಗೊಳಿಸಿ: ಸುಪ್ರೀಂ
ಮುಂದಿನ ಲೇಖನಕ್ಷೇತ್ರ ಇಲ್ಲದ ನತದೃಷ್ಟ ನಾಯಕ ಸಿದ್ದರಾಮಯ್ಯ: ನಳೀನ್ ಕುಮಾರ್ ಕಟೀಲ್ ವ್ಯಂಗ್ಯ