ಮನೆ ಆರೋಗ್ಯ ತೂಕ ಇಳಿಕೆಗೆ ಯಾವ ಆಹಾರ ಸೇವನೆ ಉಪಯುಕ್ತ?

ತೂಕ ಇಳಿಕೆಗೆ ಯಾವ ಆಹಾರ ಸೇವನೆ ಉಪಯುಕ್ತ?

0
https://www.youtube.com/channel/UCmDoYGj_oDaxpT_t7Pa9iEQ

ತೂಕ ಇಳಿಸಿಕೊಳ್ಳಲು ಯಾವ ರೀತಿಯ ಆಹಾರವನ್ನು ಕಡಿಮೆ ಸೇವನೆ ಮಾಡಬೇಕು, ಯಾವ ಆಹಾರದ ಬದಲಿಗೆ ಯಾವ ಆಹಾರವನ್ನು ಸೇವಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

ಅನ್ನದ ಬಳಕೆ ಕಡಿಮೆಯಿರಲಿ

ಅಕ್ಕಿ ಕೂಡ ಒಂದು ರೀತಿಯ ಧಾನ್ಯವಾಗಿದ್ದರೂ, ಇದು ಸಂಸ್ಕರಿಸಿದ ಮತ್ತು ಪಾಲಿಶ್ ಮಾಡಿದ ಧಾನ್ಯವಾಗಿ ಬಳಕೆಗೆ ದೊರೆಯುತ್ತದೆ. ಇದರಿಂಧ ಅನ್ನ ಮಾಡಿದಾಗ ಫೈಬರ್‌ ಅಂಶ ಸಂಪೂರ್ಣವಾಗಿ ಕಳೆದುಹೋಗಿರುತ್ತದೆ. ಜೊತೆಗೆ ಕಾರ್ಬೋಹೈಡ್ರೇಟ್ಸ್‌ಗಳು ಹೆಚ್ಚಾಗಿರುತ್ತವೆ. ಹೀಗಾಗಿ ಅನ್ನವನ್ನು ಸೇವಿಸಿದಾಗ ದೇಹಕ್ಕೆ ಕಾರ್ಬೋಹೈಡ್ರೇಟ್ಸ್‌ಗಳು ಸಿಗುತ್ತವೆ. ಇದಕ್ಕಾಗಿಯೇ ದೇಹದ ತೂಕ ಇಳಿಸಿಕೊಳ್ಳುವವರು ಅನ್ನವನ್ನು ಕಡಿಮೆ ಸೇವನೆ ಮಾಡಬೇಕು ಎನ್ನುವುದು.

ಬ್ರೌನ್‌ ರೈಸ್‌ ಬಳಸಿ

ಪಾಲಿಷ್‌ ಮಾಡಿದ ಅಕ್ಕಿಯನ್ನು ಅನ್ನ ಮಾಡಿ ಸೇವನೆ ಮಾಡಿದಾಗ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ಸ್‌ಗಳು ದೊರಕುತ್ತವೆ. ಆದರೆ ಬ್ರೌನ್‌ ರೈಸ್‌ ಸೇವನೆ ದೇಹಕ್ಕೆ ಒಳ್ಳೆಯದು. ದೇಹವನ್ನು ತಂಪಾಗಿಡಲು ಕೂಡ ಸಹಾಯ ಮಾಡುತ್ತದೆ. ಕಂದು ಅಕ್ಕಿಯಲ್ಲಿ ನಾರಿನಂಶ, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಕಾರಣ. ಮಧುಮೇಹಿಗಳಿಗೂ ಉತ್ತಮ ಆಹಾರವಾಗಲಿದೆ.

​ಹಣ್ಣುಗಳನ್ನು ಸೇವಿಸಿ

ಕೆಲವರಿಗೆ ಆಗಾಗ ಏನಾದರೂ ಸಿಹಿ ತಿನ್ನಬೇಕು ಎನಿಸುತ್ತದೆ. ಆಗ ಸಕ್ಕರೆ ಅಥವಾ ಇನ್ನಿತರ ಕೃತಕ ಸಿಹಿಕಾರಗಳ ಸ್ವೀಟ್‌ ತಿನ್ನುವ ಬದಲುಹಣ್ಣುಗಳನ್ನು ಸೇವಿಸಿ. ವಿಟಮಿನ್‌ಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಫೈಬರ್ ಭರಿತ ಹಣ್ಣುಗಳನ್ನು ಸೇವಿಸಿ. ಇದು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನೂ ನೀಡುತ್ತದೆ. ಇದು ತೂಕ ನಷ್ಟವನ್ನು ವೇಗಗೊಳಿಸುತ್ತದೆ.

​ಮೈದಾ ಬಳಕೆಯ ಬ್ರೆಡ್‌ಗಳ ಸೇವನೆ ಬೇಡ

ವೇಗದ ಜೀವನ ಪದ್ಧತಿಯಲ್ಲಿ ಬ್ರೆಡ್‌ ಅನೇಕರ ಬೆಳಗ್ಗಿನ ತಿಂಡಿಯಾಗಿರುತ್ತದೆ. ಖಾಲಿ ಹೊಟ್ಟೆಯಲ್ಲಿ ಈ ಬ್ರೆಡ್‌ ಸೇವನೆ ದೇಹದ ತೂಕವನ್ನು ಹೆಚ್ಚು ಮಾಡುತ್ತದೆ. ಏಕೆಂದರೆ ಬಿಳಿ ಬ್ರೆಡ್ ಅನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಬ್ರೆಡ್‌ನಲ್ಲಿ ಫೈಬರ್ ಮತ್ತು ವಿಟಮಿನ್‌ಗಳಂತಹ ಯಾವುದೇ ಪೋಷಕಾಂಶಗಳು ಇರುವುದಿಲ್ಲ. ಬದಲಾಗಿ ಹೆಚ್ಚಿನ ಕ್ಯಾಲೋರಿಗಳು ಅಡಕವಾಗಿರುತ್ತವೆ. ಹೀಗಾಗಿ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

​ಗೋಧಿ ಅಥವಾ ಧಾನ್ಯಗಳ ಬ್ರೆಡ್‌

ಮೈದಾದಿಂದ ತಯಾರಿಸಿದ ಬ್ರೆಡ್ ಬದಲಿಗೆ ಬ್ರೌನ್ ಬ್ರೆಡ್ ತೆಗೆದುಕೊಳ್ಳಬಹುದು. ಧಾನ್ಯಗಳಿಂದ ತಯಾರಿಸಿದ ಬ್ರೆಡ್ ಅನ್ನು ಸೇವಿಸಿದಾಗ, ಫೈಬರ್ ಮತ್ತು ಇತರ ಪೋಷಕಾಂಶಗಳನ್ನು ಪಡೆಯಬಹುದು. ಇದರಲ್ಲಿ ಕ್ಯಾಲೋರಿಯೂ ಕಡಿಮೆ. ಹೀಗಾಗಿ ತೂಕ ಇಳಿಸಲು ಇದು ಸಹಕಾರಿ. ಧಾನ್ಯಗಳು ಸಾಮಾನ್ಯವಾಗಿ ಹಸಿವನ್ನು ನಿಗ್ರಹಿಸುತ್ತವೆ. ಹೀಗಾಗಿ ಪದೇ ಪದೇ ತಿನ್ನುವ ಬಯಕೆಯಾಗದೇ ದೇಹದ ತೂಕವನ್ನು ಹೆಚ್ಚಾಗದಂತೆ ನೋಡಿಕೊಳ್ಳಬಹುದು.

​ಉಪ್ಪಿನ ಬಳಕೆಗೆ ಮಿತಿ ಇರಲಿ

ಉಪ್ಪು ರುಚಿಗೆ ತಕ್ಕಷ್ಟಿದ್ದರೆ ಒಳ್ಳೆಯದು. ಹೆಚ್ಚಾದರೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಧುಮೇಹ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡದಂತಹ ಚಯಾಪಚಯ ಸಮಸ್ಯೆಗಳಿರುವವರು ಕಡಿಮೆ ಉಪ್ಪನ್ನು ಸೇವಿಸಬೇಕು. ಅಲ್ಲದೆ, ನಾವು ನೈಸರ್ಗಿಕವಾಗಿ ಸೇವಿಸುವ ಹಸಿರು ಮತ್ತು ಕೆಲವು ತರಕಾರಿಗಳಲ್ಲಿ ಅದಾಗಲೇ ಸ್ವಲ್ಪ ಉಪ್ಪಿನ ಅಂಶವಿರುತ್ತದೆ. ಇದೆಲ್ಲದರ ಹೊರತಾಗಿ ಸಂಸ್ಕರಿಸಿದ ಆಹಾರಗಳು, ದೋಸೆ, ಉಪ್ಪಿನಕಾಯಿ ಮುಂತಾದ ಆಹಾರಗಳಲ್ಲಿ ಹೆಚ್ಚು ಉಪ್ಪನ್ನು ಸೇರಿಸಲಾಗುತ್ತದೆ. ಇವುಗಳನ್ನು ತಿಂದಾಗ ಮಾತ್ರ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇವುಗಳನ್ನು ಕಡಿಮೆ ಮಾಡುವ ಮೂಲಕ ನಿಮ್ಮ ತೂಕ ಇಳಿಸುವ ಪ್ರಯತ್ನಗಳಲ್ಲಿ ನೀವು ಯಶಸ್ವಿಯಾಗಬಹುದು.

​ಉಪ್ಪಿನ ಬದಲು

ದಾಲ್ಚಿನ್ನಿ, ಸೋಂಪು, ಜೀರಿಗೆ, ಲವಂಗದಂತಹ ಗಿಡಮೂಲಿಕೆಗಳು ಮತ್ತು ಆರೋಗ್ಯಕರ ಮಸಾಲೆಗಳನ್ನು ಆಹಾರಕ್ಕೆ ಸೇರಿಸಿದಾಗ, ಆಹಾರದ ಸುವಾಸನೆಯು ಹೆಚ್ಚಾಗುತ್ತದೆ. ಇದರಿಂದ ಉಪ್ಪನ್ನು ಕಡಿಮೆ ಮಾಡಬಹುದು. ಅವು ಸೌಮ್ಯವಾದ ಸಿಹಿ ಮತ್ತು ಉಪ್ಪನ್ನು ಸಹ ಹೊಂದಿರುತ್ತವೆ. ವಿಶೇಷವಾಗಿ ಓರೆಗಾನೊ, ತುಳಸಿ, ಒಣಗಿದ ಥೈಮ್ ಮತ್ತು ರೋಸ್ಮರಿ ಎಲೆಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಬಹುದಾಗಿದೆ.

​ಆಲೂಗಡ್ಡೆ ತಿನ್ನುವಾಗ ಎಚ್ಚರ

ಪಿಷ್ಟದ ಅಂಶ ಹೊಂದಿರುವ ಆಲೂಗಡ್ಡೆಗಳನ್ನು ಆದಷ್ಟು ಅವೈಡ್‌ ಮಾಡಿ. ಅದರ ಬದಲು ವಿವಿಧ ರೀತಿಯ ತರಕಾರಿಗಳನ್ನು ಸೇವನೆ ಮಾಡಿ. ಅವು ಆರೋಗ್ಯಕರ ಪರ್ಯಾಯ ಆಹಾರ ಮಾತ್ರವಲ್ಲ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.