ಮನೆ ರಾಜ್ಯ ನಮಗೆ ಯಾವ ಸಚಿವರು ಕಮಿಷನ್ ಕೇಳಿಲ್ಲ: ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

ನಮಗೆ ಯಾವ ಸಚಿವರು ಕಮಿಷನ್ ಕೇಳಿಲ್ಲ: ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ

0

ಬೆಂಗಳೂರು: ಸರ್ಕಾರದ ವಿರುದ್ಧ ನಾವು ಯಾರೂ ಕಮಿಷನ್ ಆರೋಪ ಮಾಡಿಲ್ಲ. ಯಾರೋ ಮೂರನೇ ವ್ಯಕ್ತಿ ಆರೋಪ ಮಾಡಿರಬಹುದು. ನಮಗೆ ಯಾವ ಸಚಿವರು ಕಮಿಷನ್ ಕೇಳಿಲ್ಲ. ಕಮಿಷನ್​ ಕೇಳಿದ್ದಾರೆ ಎಂದು ಗುತ್ತಿಗೆದಾರರು ನನ್ನ ಬಳಿ ಹೇಳಿಲ್ಲ ಎಂದು ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸ್ಪಷ್ಟಪಡಿಸಿದರು.

ಬೆಂಗಳೂರಿನಲ್ಲಿ ಇಂದು ಸುದ್ದಿಗರರೊಂದಿಗೆ ಮಾತನಾಡಿದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಈಗಾಗಲೇ ಏಳು ತಿಂಗಳಿಂದ ಬಾಕಿ ಬರಬೇಕು. ಈಗಾಗಲೇ ಕೆಲವಷ್ಟು ಹಣ ಬಿಡುಗಡೆ ಆಗಿದೆ. ನೂರು ಕೋಟಿ ರೂ. ಸಾಲಲ್ಲ. ಸಿಎಂ ಬಳಿ ಮನವಿ ಮಾಡಿದ್ದೇವೆ. ಅವರು ಎಷ್ಟು ತಿಂಗಳು ಅಂತ ಕೇಳಿದ್ರು. ಅದಕ್ಕೆ ಮೂರು ವರ್ಷದಿಂದ ಅಂತ ಹೇಳಿದ್ದೇವೆ. ಅದಕ್ಕೆ ಅವರು ನಾನು ಬಂದು ಮೂರು ತಿಂಗಳಾಗಿದೆ. ನಮ್ಮ ಕುತ್ತಿಗೆ ಮೇಲೆ ಕೂತಿದ್ದೀರಿ ಅಂದ್ರು. ಕಂಟ್ರಾಕ್ಟರ್ಸ್ ಸೂಸೈಡ್ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಅಂತ ಹೇಳಿದ್ದೇವೆ. ಯಾವ ಸಚಿವರು ಕಮಿಷನ್ ಕೇಳಿಲ್ಲ. ನಮಗೆ ರಾಜ್ಯಾದ್ಯಂತ ಮಾಹಿತಿ ಬಂದಿದೆ‌. ಯಾರೋ ಮೂರನೇ ವ್ಯಕ್ತಿ ಹೇಳುತ್ತಿರುವುದು ಸಂಬಂಧವಿಲ್ಲ ಎಂದು ಹೇಳಿದರು.

ನಾವು ಮೊದಲು ಆರಂಭ ಮಾಡಿದಾಗ ಸಿಎಂ ಯಡಿಯೂರಪ್ಪಗೆ ಪತ್ರ ಕೊಟ್ಟೆವು. ಬಳಿಕ ಪ್ರಧಾನಿ ಗೆ ಪತ್ರ ಕೊಟ್ಟೆವು. ಸಿದ್ದರಾಮಯ್ಯ, ಕುಮಾರಸ್ವಾಮಿ ಹೀಗೆ ಹಲವರಿಗೆ ಪತ್ರ ಕೊಟ್ಟೆವು. ಕುಮಾರಸ್ವಾಮಿ ನಮ್ಮ ಕೇಸ್ ತೆಗೆದುಕೊಳ್ಳಲಿಲ್ಲ. ಸಿದ್ದರಾಮಯ್ಯ ಕೂಡ ಕೇಸ್ ತೆಗೆದುಕೊಳ್ಳಲಿಲ್ಲ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿ ಕರೆದಿದ್ದಕ್ಕೆ ಹೋಗಿದ್ದೆ. ಈಗ ವಿಪಕ್ಷ ನಾಯಕ ಕರೆದ್ರೆ ಹೋಗಲ್ಲ ಎನ್ನುವುದಕ್ಕೆ ಆಗಲ್ಲ. ಬಿಜೆಪಿ ವಿಪಕ್ಷ ನಾಯಕ ಕರೆಯಲಿ ಹೋಗುತ್ತೇನೆ. ನಾವು ಕಂಟ್ರಾಕ್ಟರ್ಸ್, ನಾನು ಕಂಟ್ರಾಕ್ಟರ್ಸ್ ಪರವಾಗಿ ಮಾತ್ರ ಮಾತನಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಬೊಮ್ಮಾಯಿಗೆ ಎಷ್ಟು ಬಾರಿ ಭೇಟಿಯಾಗಿ ಮಾತನಾಡಿದ್ದೆವು. ಆದರೆ ಅವರು ನಮಗೆ ಭೇಟಿಗೆ ಅವಕಾಶವೇ ಕೊಡಲಿಲ್ಲ. ಅವರಿಗೆ ಚೀಟಿ ಕೊಟ್ಟೆವು, ಜೇಬಲ್ಲಿ ಇಟ್ಟುಕೊಂಡ್ರು. ಆದರೆ ಕರೆದು ಮಾತಾಡೋ ಕೆಲಸ ಮಾಡಲಿಲ್ಲ. ಬದಲಿಗೆ ಅವರಿಗೆ ಬೇಕಾದವರಿಗೆ ಮಾತ್ರ ಹಣ ಬಿಡುಗಡೆ ಮಾಡಿದ್ದರು. ಆದರೂ ನಮಗೆ ಈಗಲೂ ಅವರ ಮೇಲೆ ಗೌರವ ಇದೆ ಎಂದರು.

ನಮ್ಮ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಿದ್ದೇವೆ. 25 ಸಾವಿರ ಕೋಟಿ ರೂ. ಬಾಕಿ ಇದೆ. ಸರ್ಕಾರ ಎಲ್ಲರಿಗೂ ಭಾಗ್ಯಗಳನ್ನು ಕೊಡುತ್ತಿದೆ. ನಾವು ಕೆಲಸ ಮಾಡಿರುವುದಕ್ಕೆ ನಮಗೂ ಭಾಗ್ಯ ಕೊಡಿ, ಸರ್ಕಾರ ಬಂದು ಮೂರು ತಿಂಗಳಾದರೂ ಯಾಕೆ ಹಣ ಬಿಡುಗಡೆ ಮಾಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇವೆ. ನಾವು ಡೆಡ್ ಲೈನ್ ಕೊಡುತ್ತಿಲ್ಲ. ನಮಗೆ ಈಗಲೇ ಹಣ ಬಿಡುಗಡೆ ಆಗಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.