ಮನೆ ರಾಜಕೀಯ ಸುಡುಗಾಡು ಸಿದ್ದ ಮಾಡಿದ್ದನ್ನು ಸರಿ ಮಾಡಿದ್ದೇವೆ: ಸಿದ್ದರಾಮಯ್ಯಗೆ ಸೋಮಣ್ಣ ಟಾಂಗ್

ಸುಡುಗಾಡು ಸಿದ್ದ ಮಾಡಿದ್ದನ್ನು ಸರಿ ಮಾಡಿದ್ದೇವೆ: ಸಿದ್ದರಾಮಯ್ಯಗೆ ಸೋಮಣ್ಣ ಟಾಂಗ್

0

ಮೈಸೂರು: ವಸತಿ ಇಲಾಖೆಯಲ್ಲಿ ಸುಡುಗಾಡು ಸಿದ್ದ ಮಾಡಿದ್ದನ್ನು ನಾವು ಸರಿ ಮಾಡಿದ್ದೇವೆ. ಅವರ ಕಾಲದಲ್ಲಿ ಕೇವಲ ಘೋಷಣೆ ಆಗಿತ್ತು, ನಾವು ಮನೆಗಳನ್ನು ಕಟ್ಟಿಕೊಡುತ್ತಿದ್ದೇವೆ. ಇದು ನಿರಂತರ ಪ್ರಕ್ರಿಯೆ. ರಾಜಕಾರಣಕ್ಕಾಗಿ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಒಂದೂ ಮನೆಯನ್ನು ನೀಡಿಲ್ಲವೆಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಕೆಂಡಾಮAಡಲರಾದ ವಿ. ಸೋಮಣ್ಣ, ಪದೇಪದೇ ನನ್ನನ್ನು ಕೆಣಕಬೇಡಿ. ನೂರು ಬಾರಿ ಸುಳ್ಳು ಹೇಳಿದರೂ ಅದು ಸತ್ಯ ಆಗಲ್ಲ. ಈ ವಿಚಾರವಾಗಿ ನಿಮ್ಮ ಕ್ಷೇತ್ರ ಬಾದಾಮಿಗೆ ಬಂದು ಚರ್ಚೆ ಮಾಡಲು ನಾನು ಸಿದ್ಧ. ನೀವು ಸಿದ್ದರಿದ್ದೀರಾ? ನಾನು ನಿಮ್ಮ ಗರಡಿಯಲ್ಲೇ ಇದ್ದವನು. ಸುಳ್ಳು ಆರೋಪಗಳನ್ನು ಮಾಡಿ ಜನರಲ್ಲಿ ಗೊಂದಲ ಮೂಡಿಸಬೇಡಿ ಎಂದು ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು.
ನನಗೂ ಅರ್ಹತೆ ಇದೆ, ಆದರೆ ನಿಮಗೆ ಅದೃಷ್ಟ ಇತ್ತು
ನಿಮಗೆ ಅದೃಷ್ಟ ಇತ್ತು ಮುಖ್ಯಮಂತ್ರಿ ಆಗಿ ಆಡಳಿತ ಮಾಡಿದ್ದೀರಿ.ನನಗೆ ಅದೃಷ್ಟ ಇಲ್ಲ. ಆದರೆ, ನನಗೂ ಎಲ್ಲಾ ಅರ್ಹತೆ ಇದೆ. ಹಳೆಯದನ್ನು ಮರೆಯದೆ ಮೆಲುಕು ಹಾಕುತ್ತೀರಿ. ನಾಲಿಗೆ ಮೇಲೆ ಹಿಡಿತವಿರಲಿ. ಎಲ್ಲರನ್ನೂ ಒಂದೇ ರೀತಿ ನೋಡಬೇಡಿ ಎಂದು ವಾಗ್ದಾಳಿ ನಡೆಸಿದರು.
ಮನೆಗಳನ್ನು ನಾವು ಕೊಟ್ಟಿದ್ದು, ನೀವು ಕೊಟ್ಟಿದ್ದು ಎನ್ನುವುದಲ್ಲ. ಅರ್ಹ ಪಲಾನುಭವಿಗಳಿಗೆ ಮನೆಗಳು ಸಿಗಬೇಕು. ಸಿದ್ದರಾಮಯ್ಯ ಸಹ ಅವರ ಮನೆಯಿಂದ ತಂದು ಕೊಟ್ಟಿಲ್ಲ. ನಾನು ಸಹ ನನ್ನ ಮನೆಯಿಂದ ತಂದು ಕೊಡಲ್ಲ. ಇನ್ನು ಮುಂದೆಯಾದರೂ ಸೋಮಣ್ಣನನ್ನು ಟಾರ್ಗೆಟ್ ಮಾಡುವುದನ್ನು ಬಿಡಿ ಎಂದರು.
ಕಾನೂನು ಮೀರಿದವರನ್ನು ಬಗ್ಗು ಬಡಿಯುತ್ತೇವೆ
ವಸ್ತç ಸಂಹಿತೆ ವಿಚಾರದಲ್ಲಿ ಹೈಕೋರ್ಟ್, ಸುಪ್ರೀಂಕೊರ್ಟ್ ನೀಡಿರುವ ನಿರ್ದೇಶನವನ್ನು ಪಾಲಿಸಬೇಕು. ಹಿಜಾಬ್ ವಿಚಾರವಾಗಿ ನ್ಯಾಯಾಲಯದ ಆದೇಶವನ್ನು ಗೌರವಿಸಬೇಕು. ಒಂದು ವೇಳೆ ಸಮಾಜದ ಸ್ವಾಸ್ಥ÷್ಯ ಹಾಳುವ ಮಾಡಲು ಯತ್ನಿಸಿದರೆ ಅಂತಹ ಸಂಘಟನೆಗಳನ್ನು ಬಗ್ಗುಬಡಿಯಲು ಸರ್ಕಾರ ಕಠಿಣ ಕ್ರಮ ಜರುಗಿಸಲಿದೆ ಎಂದು ಸೋಮಣ್ಣ ಹೇಳಿದರು. ಹಿಜಾಬ್ ವಿಚಾರವಾಗಿ ಹೈಕೋರ್ಟ್ ಹಲವು ನಿರ್ದೇಶನಗಳನ್ನು ನೀಡಿದೆ. ಸರ್ಕಾರ ಅದೇ ರೀತಿ ಗಮನಹರಿಸಲಿದೆ. ಕಾನೂನಿಗಿಂತ ತಮ್ಮದೇ ವಿಚಾರ ಪಾಲನೆ ಮಾಡುತ್ತೇವೆಂದು ಹೊರಟರೆ ಸರ್ಕಾರ ಸುಮ್ಮನೇ ಕೂರುವುದಿಲ್ಲ ಎಂದು ಎಚ್ಚರಿಸಿದರು.
ಹಿಜಾಬ್ ವಿಚಾರ ಮುಂದಿಟ್ಟುಕೊAಡು ಯಾರ್ಯಾರು ಏನು ಮಾಡುತ್ತಿದ್ದಾರೆ ಎನ್ನುವುದನ್ನು ಸರ್ಕಾರ ಗಂಭೀರವಾಗಿ ಗಮನಿಸುತ್ತಿದೆ. ಧರ್ಮಗಳನ್ನು ಎತ್ತಿಕಟ್ಟಿ ಮಕ್ಕಳ ಭವಿಷ್ಯದ ಜತೆಗೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳ ವಿರುದ್ಧ ಕಿಡಿಕಾರಿದರು.

ಹಿಂದಿನ ಲೇಖನಐಪಿಎಲ್ 2022 ಹರಾಜು: ಶ್ರೇಯಸ್ ಅಯ್ಯರ್ ಕೆಕೆಆರ್ ತೆಕ್ಕೆಗೆ; ಫಾಫ್ ಡುಪ್ಲೆಸಿಸ್ ಆರ್ ಸಿಬಿಗೆ
ಮುಂದಿನ ಲೇಖನಖೋಟಾ ನೋಟ ಜಾಲದ ಶಂಕೆ: ೪೦ ಲಕ್ಷಕ್ಕೆ ಒಂದು ಕೋಟಿ ಆಫರ್: ವಂಚನೆ