ಬಯಲು ಸೀಮೆಯಲ್ಲಷ್ಟೇ ಬೆಳೆಯುವ ಪೊದರು ಸಸಿಯಾಗಿದೆ. ಕರಾವಳಿ ಪಶ್ಚಿಮ ಘಟ್ಟ ಸಾಲಿನಲ್ಲಿ ಬೆಳೆಯಲಾಗುತ್ತದೆ. ನಾಲ್ಕು ಅಡಿ ಎತ್ತರವಾಗಿ ಬೆಳೆಯುತ್ತದೆ. ಮೆಣಸಿನ ಕಾಯಿ ಎಲೆಯ ಹಾಗೆ ಆಕಾರವಿರುವ ಎಲೆ ಆದರೆ ಮೆದುಗುದಲೂ ತುಂಬಿದೆ. ಎಲೆ ಕಂಕುಳಲ್ಲಿ ಹಸಿರು, ಹಳದಿ ಹೂ ಗೊಂಚಲಲ್ಲಿ ಗಣಿಗೆ ಕಾಯಿ ಗಾತ್ರದ ಕೆಂಪನೆ ಹಣ್ಣು, ಬಲಿತ ಹಣ್ಣು ಒಳಗೆ ಬದನೆ ಬೀಜಾಕಾರದ ಚಪ್ಪಟೆ ಬೀಜಗಳು. ನೆಲದಡಿ ಬೇರು ಒಂದಡಿ ಮೀರಿ ಆಳಕ್ಕಿಳಿದಿತು. ಜೀರಿಗೆ ಕುದುರೆ ಗಂಜಳ ವಾಸನೆಯಿರುತ್ತದೆ.
ಔಷಧೀಯ ಗುಣಗಳು :-
* ಬಿಳಿ ಸೆರಗು, ತತ್ಸಂಬಂಧಿ ಸೊಂಟ ನೋವಿಗೆ ಅಶ್ವಗಂಧ ಪುಡಿ ಸೇವನೆ ರಾಮಬಾಣವಾಗಿದೆ. ಇದು ಸ್ತ್ರೀಯರಿಗೆ ಒಂದು ಪ್ರಕಾರ ಟಾನಿಕ್ ವಾಗಿದೆ.
* ಬೇರಿನ ಪುಡಿ ಸಕ್ಕರೆ, ಹಾಲಿನ ಸಂಗಡ ಬೆರೆಸಿ ಕುಡಿದರೆ ಮೈಯಲ್ಲಿ ವಿಶೇಷ ಶಕ್ತಿ ಬರುತ್ತದೆ.
* ಬೆಳೆಯುವ ಮಕ್ಕಳಿಗೆ ಹಾಲಿನ ಸಂಗಡ ಪುಡಿ ಸೇರಿಸಿ ಕುಡಿದರೆ ಮಕ್ಕಳ ಶರೀರವು ದಷ್ಟಪುಷ್ಟವಾಗಿ ಬೆಳೆಯುತ್ತದೆ.
* ಲೈಂಗಿಕ ಶಕ್ತಿ ಸಾಮರ್ಥ್ಯ ಹಾಗೂ ಉತ್ಸಾಹಕ್ಕೆ ಅಶ್ವಗಂಧದ ಪುಡಿಯು ಬಳಕೆಯಿಂದ ತುಂಬಾ ಪರಿಣಾಮಕಾರಿಯಾಗಿದೆ.
* ಕುರು, ಗಂಟು, ಬಾವು, ಹಳೆಗಾಯ ಪರಿಹರಿಸಲು ಬೇರು ಅರೆದು ಲೇಪಿಸಬೇಕು.