ಮನೆ ಅಪರಾಧ ಮಗನೊಂದಿಗೆ ಸೇರಿ ಗಂಡನನ್ನು ಕೊಂದ ಮಹಿಳೆ: ದೇಹ 10 ಭಾಗ ತುಂಡು

ಮಗನೊಂದಿಗೆ ಸೇರಿ ಗಂಡನನ್ನು ಕೊಂದ ಮಹಿಳೆ: ದೇಹ 10 ಭಾಗ ತುಂಡು

0

ದೆಹಲಿ: ಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಕರ್‌ ಹತ್ಯೆಯನ್ನು ಹೋಲುವ ಮತ್ತೊಂದು ಬರ್ಬರ ಕೊಲೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿದೆ.

ವ್ಯಕ್ತಿಯೊಬ್ಬನನ್ನು ಆತನ ಹೆಂಡತಿ ಹಾಗೂ ಮಗ ಸೇರಿಕೊಂಡು ಕೊಲೆ ಮಾಡಿ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಬೀಸಾಕಿರುವ ಘಟನೆ ವರದಿಯಾಗಿದೆ.

ಕಳೆದ ಮೇ 30 ರಂದು ದೆಹಲಿಯ ಪಾಂಡವ್ ನಗರದ ಅಂಜನ್ ದಾಸ್ ಎನ್ನುವ ವ್ಯಕ್ತಿ ಈ ರೀತಿ ಭೀಕರವಾಗಿ ಕೊಲೆಯಾದವ. ಅಂಜನ್ ದಾಸ್ ದೇಹದ ಭಾಗಗಳು ಇರುವ ಮೂಟೆಯನ್ನು ಜೂನ್ 5 ರಂದು ರಾಮಲೀಲಾ ಮೈದಾನದ ಬಳಿ ಪೊಲೀಸರು ಪತ್ತೆ ಹಚ್ಚಿದ್ದರು.

ಪ್ರಕರಣವನ್ನು ಬೆನ್ನತ್ತಿದಾಗ ಅಂಜನ್ ದಾಸ್‌ನನ್ನು ಕೊಲೆ ಮಾಡಿದ್ದು ಆತನ ಹೆಂಡತಿ ಪೂನಮ್ ಹಾಗೂ ಮಗ ದೀಪಕ್ ಎಂದು ತಿಳಿದು ಬಂದಿದೆ.

ಅಂಜನ್‌ನನ್ನು ಈ ಇಬ್ಬರು ಕೊಲೆ ಮಾಡಿ ಕತ್ತರಿಸಿ ಹಾಕಿದ್ದರು. ಬಳಿಕ ಹತ್ತೂ ಭಾಗಗಳನ್ನು ಬೇರೆ ಬೇರೆ ಕಡೆ 4 ದಿನ ಎಸೆದಿದ್ದರು. ಈ ವೇಳೆ ತಲೆ ಬುರುಡೆಯನ್ನು ಸುಟ್ಟು ಹಾಕಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಕೊಲೆಗೆ ಅನೈತಿಕ ಸಂಬಂಧ ಕಾರಣ. ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪಾಂಡವ ನಗರ ಪೊಲೀಸರು ಹೇಳಿದ್ದಾರೆ