ಮನೆ ರಾಜಕೀಯ ನನ್ನ ಮಗುವಿಗೆ ಶಾಸಕ ಬಸವರಾಜ ತೇಲ್ಕೂರ್ ಅವರೇ ತಂದೆ: ಮಹಿಳೆ ಆರೋಪ

ನನ್ನ ಮಗುವಿಗೆ ಶಾಸಕ ಬಸವರಾಜ ತೇಲ್ಕೂರ್ ಅವರೇ ತಂದೆ: ಮಹಿಳೆ ಆರೋಪ

0

ಬೆಂಗಳೂರು:  ನನ್ನ ಹೊಟ್ಟೆಯಲ್ಲಿ ಹುಟ್ಟಿರುವ ಮಗುವಿಗೆ ಕಲಬುರಗಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರೇ ತಂದೆ  ಎಂದು ಮಹಿಳೆಯೊಬ್ಬರು ಗಂಭೀರವಾಗಿ ಆರೋಪ ಮಾಡಿದ್ದಾರೆ.

ಮತ್ತೊಂದೆಡೆ ಮಹಿಳೆ ವಿರುದ್ಧ ಶಾಸಕರೂ ಸಹ ಗಂಭೀರ ಆರೋಪ ಮಾಡಿದ್ದರು. ಆ ಮಹಿಳೆ ಹಣಕ್ಕಾಗಿ ಸುಮ್ಮನೆ ಆರೋಪ ಮಾಡುತ್ತಿದ್ದಾಳೆ ಎಂದಿದ್ದು, ಬೆಂಗಳೂರಿನ ವಿಧಾನಸೌಧ ಠಾಣೆಗೆ ತೆರಳಿ, ಮಹಿಳೆ ವಿರುದ್ದ ಶಾಸಕರು ದೂರು ನೀಡಿದ್ದರು. ಇದೀಗ ಠಾಣೆಯೆದುರೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ, “ನನ್ನ ಮಗುವಿಗೆ ಶಾಸಕರೇ ತಂದೆ” ಅಂತ ಹೇಳಿದ್ದಾಳೆ. ಅಲ್ಲದೇ “ನನ್ನ ಹಾಗೂ ಮಗನ ಜೀವನಕ್ಕಾಗಿ ಶಾಸಕರು ಜೀವನಾಂಶ” ನೀಡಬೇಕು ಅಂತ ಮನವಿ ಮಾಡಿದ್ದಾಳೆ.
ವಕೀಲ ಜಗದೀಶ್ ಎನ್ನುವವರಲ್ಲಿ ಮಹಿಳೆ ತನ್ನ ದುಃಖ ತೋಡಿಕೊಂಡಿದ್ದಳು, ಅದು ಫೇಸ್‌ಬುಕ್‌ನಲ್ಲಿ ವೈರಲ್ ಆಗಿತ್ತು.
ಶಾಸಕ ರಾಜ್​ಕುಮಾರ್ ಒಬ್ಬ ದೊಡ್ಡ ಫ್ರಾಡ್. ನನ್ನ ಮಗನಿಗೂ, ಸೇಡಂ ಶಾಸಕನಿಗೂ ತಂದೆ-ಮಗನ ಸಂಬಂಧವಿದೆ” ಎಂದು ಹೇಳಿಕೆ ನೀಡಿದ್ದಳು. ಮಹಿಳೆಗೆ ಈ ಹಿಂದಿನಿಂದಲೂ ಶಾಸಕರ ಜೊತೆ ಸಂಬಂಧವಿತ್ತು. ನನ್ನ ಮಗನಿಗೆ 14 ವರ್ಷ, ಆತ ತನ್ನದೇ ಮಗ ಅಂತ ಶಾಸಕ ರಾಜ್‌ಕುಮಾರ್ ಒಪ್ಪಿಕೊಳ್ಳಲಿ ಅಂತ ಆಗ್ರಹಿಸಿದ್ದಳು.
ಪೊಲೀಸರ ವಿರುದ್ಧವೂ ಆ ಮಹಿಳೆ ಗಂಭೀರ ಆರೋಪ ಮಾಡಿರುವ ಮಹಿಳೆ, ವಿಧಾನಸೌದ ಠಾಣೆ ಪೊಲೀಸರು ನನ್ನನ್ನ ಕೂಡಿ ಹಾಕಿದ್ದರು. ನನ್ನ ಜೀವನವನ್ನೆಲ್ಲಾ ಹಾಳು ಮಾಡಿದ. ನನಗೆ ಜೀವನಾಂಶ ಕೊಡುವಂತೆ ನಾನು ಶಾಸಕರನ್ನ ಕೇಳಿದೆ. ರಾತ್ರಿ 9 ಗಂಟೆ ತನಕ ಪೊಲೀಸ್ ಠಾಣೆಯಲ್ಲೇ ಇದ್ದೆ. 9 ಗಂಟೆಯಾದ ಮೇಲೆ ನನ್ನನ್ನ ಠಾಣೆಯಿಂದ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಳು.
ಇತ್ತ ಮಹಿಳೆ ವಿರುದ್ಧವೂ ಶಾಸಕರು ಗಂಭೀರ ಆರೋಪ ಮಾಡಿದ್ದರು. “ಆಕೆ ನನಗೆ ಪರಿಚಯ ಇದ್ದಿದ್ದು ನಿಜ. ಆದರೆ ನಾನು ಯಾವುದೇ ರೀತಿಯ ಅನ್ಯಾಯ ಮಾಡಿಲ್ಲ. ಈಕೆ ಕೋಟಿ ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಳು. ಆದರೆ ನಾನು ಕೊಡುವುದಕ್ಕೆ ಒಪ್ಪಿರಲಿಲ್ಲ. ಹೀಗಾಗಿ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾಳೆ” ಅಂತ ಹೇಳಿದ್ದರು. ಆರೋಪ ಮಾಡಿದ ಮಹಿಳೆ ವಿರುದ್ಧ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್‌ ದೂರು ನೀಡಿದ್ದರು. ವಿಧಾನಸೌಧ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಅವರ ದೂರನ್ನು ಆಧರಿಸಿ ಸಂತ್ರಸ್ತ ಮಹಿಳೆ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಹಿಂದಿನ ಲೇಖನಅರುಣಾಚಲ ಪ್ರದೇಶದಲ್ಲಿ ಹಿಮಪಾತಕ್ಕೆ ಸಿಲುಕಿದ 7 ಸೈನಿಕರು, ತೀವ್ರಗೊಂಡ ಶೋಧ
ಮುಂದಿನ ಲೇಖನಸಿದ್ದರಾಮಯ್ಯರಿಂದ ಸಿ.ಎಂ.ಇಬ್ರಾಹಿಂ ಮನವೊಲಿಕೆ ಯತ್ನ