ಮೈಸೂರು: ಆಗಸ್ಟ್ 30ರಂದು ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ, ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಚಾಲನೆ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಫಲಾನುಭವಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದು, ಕಾರ್ಯಕ್ರಮದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತಲಿನ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ಮತ್ತು ವಾಹನಗಳ ನಿಲುಗಡೆಗೆ ನಿರ್ಬಂಧವನ್ನು ವಿಧಿಸಲು ಹಾಗೂ ಹುಣಸೂರು ಮಾರ್ಗವಾಗಿ ಆಗಮಿಸುವ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗವನ್ನು ಕಲ್ಪಿಸಲಾಗಿದೆ.
ಕೆ.ಎಸ್.ಆರ್.ಟಿ.ಸಿ ಬಸ್ ಗಳ ಮಾರ್ಗ ಬದಲಾವಣೆ: ಬೆಳಗ್ಗೆ 8 ಗಂಟೆಯಿoದ ಸಂಜೆ 6 ಗಂಟೆಯವರೆಗೆ ಮಡಿಕೇರಿ, ಹುಣಸೂರು, ಹಾಸನ ಕಡೆಯಿಂದ ಹುಣಸೂರು ರಸ್ತೆ ಮಾರ್ಗವಾಗಿ ಮೈಸೂರು ನಗರಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಹಿನ್ಕಲ್ ಪ್ಲೈ ಓವರ್ ಜಂಕ್ಷನ್‌ನಿಂದ –ಎಡ ತಿರುವು -ರಿಂಗ್ ರಸ್ತೆ – ರಾಯಲ್ ಇನ್ ಜಂಕ್ಷನ್ – ಬಲ ತಿರುವು – ಕೆ,ಆರ್,ಎಸ್ ರಸ್ತೆ ಮೂಲಕ ವಿವಿ ಪುರಂ – ಆಕಾಶವಾಣಿ ವೃತ – ದಾಸಪ್ಪ ವೃತ – ಮೇಟ್ರೋಪೋಲ್ ವೃತ್ತ – ಮುಡಾ ವೃತದಿಂದ ಬಲ ತಿರುವು ಪಡೆದು ರಮಾವಿಲಾಸ ರಸ್ತೆ – ಬನುಮಯ್ಯ ಜಂಕ್ಷನ್ – ಬಿ ರಾಜಯ್ಯ ವೃತ – ಪುರಂದರ ರಸ್ತೆ – ಕುಸ್ತಿ ಅಖಾಡ ಜಂಕ್ಷನ್ – ಹಾರ್ಡಿಂಜ್ ವೃತದ ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ತೆರಳುವಂತೆ ತಿಳಿಸಲಾಗಿದೆ.
ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಿಂದ ಹುಣಸೂರು ಮಾರ್ಗವಾಗಿ ಚಲಿಸುವ ಬಸ್ ಗಳು ಇರ್ವಿನ್ ರಸ್ತೆ ಮೂಲಕ – ನೆಹರು ವೃತ – ಆಯುರ್ವೇದಿಕ್ ಕಾಲೇಜು ವೃತ – ರೈಲ್ವೇ ನಿಲ್ದಾಣ ವೃತ – ದಾಸಪ್ಪ ವೃತ – ಆಕಾಶವಾಣಿ ವೃತ – ವಿವಿ ಪುರಂ – ಕೆ,ಆರ್,ಎಸ್ ರಸ್ತೆ ಮೂಲಕ ರಾಯಲ್ ಇನ್ ಜಂಕ್ಷನ್ – ಎಡ ತಿರುವು – ರಿಂಗ್ ರಸ್ತೆ – ಹಿನ್ಕಲ್ ಫ್ಲೈ ಓವರ್ ಜಂಕ್ಷನ್ ನಿಂದ ಹುಣಸೂರು ರಸ್ತೆ ಮೂಲಕ ಸಂಚರಿಸುವoತೆ ತಿಳಿಸಲಾಗಿದೆ.
ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿರುವ ಮಾರ್ಗಗಳು : (ಕಾರ್ಯಕ್ರಮಕ್ಕೆ ಆಗಮಿಸುವ ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ಹೊರತುಪಡಿಸಿ) ಜಿಲ್ಲಾಧಿಕಾರಿಗಳ ಕಚೇರಿ ಆರ್ಟ್ ಗೇಟ್ ಜಂಕ್ಷನ್ ನಿಂದ ಕೋರ್ಟ್ ಜಂಕ್ಷನ್ ವರಗೆ ಕೆ.ಆರ್.ಬಿ. ರಸ್ತೆಯ ಎರಡು ಕಡೆಗಳಲ್ಲಿ ಸಂಚಾರಿಸುವು ಎಲ್ಲಾ ಮಾದರಿಯ ವಾಗನಗಳ ಸಂಚಾರವನ್ನು ಹಾಗೂ ರಸ್ತೆಯ ಎರಡು ಭಾಗಗಳಲ್ಲೂ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ಸೇಂಟ್ ಜೋಸೆಫ್ ಜಂಕ್ಷನ್ ನಿಂದ ಮೇಟ್ರೋ ಪೋಲ್ ವೃತದವರೆಗಿನ ಹುಣಸೂರು ರಸ್ತೆಯ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಭಂದಿಸಲಾಗಿದೆ.
ಮುಡ ಜಂಕ್ಷನ್ ನಿಂದ ಬಿ.ಎಂ.ಡಿ ಜಂಕ್ಷನ್ ವರೆಗೆ ರಸ್ತೆ ಹಾಗೂ ರಾಮಸ್ವಾಮಿ ವೃತದಿಂದ ಅಗ್ನಿಶಾಮಕ ಠಾಣೆ ವರೆಗೆ ರಸ್ತೆ, ಕಲಾಮಂದಿರ ಜಂಕ್ಷನ್ ನಿoದ ರೈಲ್ವೆ ಗೇಟ್ ಜಂಕ್ಷನ್ ವರೆಗೆ, ಡಾ. ಪದ್ಮಾವೃತದಿಂದ ಚಂದ್ರಮೌಳೇಶ್ವರ ದೇವಸ್ಥಾನ ಜಂಕ್ಷನ್ ವರೆಗಿನ ರಸ್ತೆಯಲ್ಲಿ ಎರಡು ಕಡೆಗಳಲ್ಲಿ, ಸರಸ್ವತಿಪುರಂ ಐದನೇ ಕ್ರಾಸ್ ಜಂಕ್ಷನ್ ನಿoದ ಟಿ.ಟಿ.ಎಲ್ ಕಾಲೇಜು ಜಂಕ್ಷನ್‌ವರೆಗೆ, ರಮ್ಯಾ ಹೋಟೆಲ್ ಜಂಕ್ಷನ್ ನಿoದ ಕುಕ್ಕರಹಳ್ಳಿ ಗ್ರಾಮದ ಅರಳಿಕಟ್ಟೆ ಜಂಕ್ಷನ್ ವರೆಗಿನ ಸ್ವಿಮ್ಮಿಂಗ್ ಪೂಲ್ ರಸ್ತೆಯವರೆಗೆ ಎರಡು ಕಡೆಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದು, ರಸ್ತೆ ಎರಡು ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.
ರೋಟರಿ ಜಂಕ್ಷನ್ ನಿಂದ ಕೆ ಆರ್ ಬಿ ರಸ್ತೆ ಜಂಕ್ಷನ್ ವರೆಗೆ ಎರಡು ಕಡೆಗಳಲ್ಲಿ ಸಂಚರಿಸುವ ಹಾಗೂ ಜೆ.ಎಲ್.ಬಿ ಜಂಕ್ಷನ್ ನಿಂದ ಕೆ. ಆರ್.ಬಿ ರಸ್ತೆ ಜಂಕ್ಷನ್ ವರೆಗೆ, ವಿಜಯ ಬ್ಯಾಂಕ್ ವೃತದಿಂದ ವಿ.ಎಂ.ಡಿ ವೃತ್ತದ ಅವರಿಗೆ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳನ್ನು ಸಂಚಾರವನ್ನು ನಿರ್ಬಂಧಿಸಲಾಗಿದೆ
ಬದಲಿ ಮಾರ್ಗವಾಗಿ:- ಹಾಸನ ಮಡಿಕೇರಿ ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಸೇಂಟ್ ಜೋಸೆಫ್ ಜಂಕ್ಷನ್ ನಲ್ಲಿ ಎಡತಿರುವ ಪಡೆದು ಟೆಂಪಲ್ ರಸ್ತೆ- ಬಿ.ಸಿ ಲಿಂಗಯ್ಯ ವೃತ್ತ- ಕೆ.ಆರ್.ಎಸ್. ರಸ್ತೆ ಮೂಲಕ ಹಾಗೂ ಹಾಸನ, ಮಡಿಕೇರಿ, ಹುಣಸೂರು ಕಡೆಯಿಂದ ಮೈಸೂರು ನಗರಕ್ಕೆ ಆಗಮಿಸುವ ವಾಹನಗಳು ಚದುರಂಗ ವೃತ್ತದ ಬಳಿ ಬಲತಿರುವು ಪಡೆದು ಚದುರಂಗ ರಸ್ತೆ ಮೂಲಕ ಚಾಮರಾಜ ಜೋಡಿ ರಸ್ತೆಯಿಂದ ಆಗಮಿಸುವ ವಾಹನಗಳು ಆರ್.ಟಿ.ಓ ವೃತ್ತದ ಮೂಲಕ ಮತ್ತು ಜೆ.ಎಲ್.ಬಿ ರಸ್ತೆಯಿಂದ ಹುಣಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ದಾಸಪ್ಪ ವೃತ, ವಿವಿಪುರಂ ವೃತ್ತದ ಮೂಲಕ, ಬೋಗಾದಿ ರಸ್ತೆ ಕಡೆಯಿಂದ ಆಗಮಿಸುವ ವಾಹನಗಳು ವಿ.ಎಂ.ಡಿ ಜಂಕ್ಷನ್ ಬಳಿ ಬಲತಿರುವ ಪಡೆದು ಮುಂದೆ ನಿಗಧಿಪಡಿಸಿರುವ ಮಾರ್ಗಗಳ ಮೂಲಕ ಸಾಗಬಹುದಾಗಿದೆ ಎಂದು ನಗರದ ಪೊಲೀಸ್ ಆಯುಕ್ತರಾದ ರಮೇಶ್ ಬಾನೋತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾನ್ಯ ಶ್ರೀ ಪ್ರದೀಪ್ ಕುಮಾರ್ ರವರ ಹುಟ್ಟು ಹಬ್ಬದ ಆಚರಣೆ
ಊರು ಬಿಟ್ಟು ದೂರದ ಊರಿಗೆ ಹೋಗಿರುವ ಮಕ್ಕಳು ತಂದೆ- ತಾಯಿಯ ನೋವನ್ನ ಅರ್ಥ ಮಾಡಿಕೊಳ್ಳಬೇಕು
ಸವಾಲ್ ಪತ್ರಿಕೆಯ ಸಂಪಾದಕರು HRAC ಸ್ಥಾಪಕರು ಆದ ಪ್ರದೀಪ್ ಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 16-06-2023
ಅದ್ಬುತ ಮಾತುಗಳು ದಯವಿಟ್ಟು ಎಲ್ಲ ತಂದೆ ತಾಯಿ ಮಕ್ಕಳು ಇದನ್ನ ನೋಡಲೇ ಬೇಕು ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.