ಮನೆ ರಾಜಕೀಯ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಿ: ಪ್ರತಾಪ್ ಸಿಂಹ

ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಿ: ಪ್ರತಾಪ್ ಸಿಂಹ

0

ಮೈಸೂರು: ನಾವು ಕೆಲವೊಮ್ಮೆ ಕಾರ್ಯಕರ್ತರಿಗೆ ಸ್ಪಂದಿಸದಿರಲೂಬಹುದು. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಪಕ್ಷವನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಎಂದು ಸಂಸದ ಪ್ರತಾಪ ಸಿಂಹ ಮನವಿ ಮಾಡಿದರು.

ಇಲ್ಲಿನ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಗುರುವಾರ ನಡೆದ ಪಕ್ಷದ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

ಸಣ್ಣ ಪುಟ್ಟ ಅಸಮಾಧಾನದಿಂದಲೋ, ಉದಾಸೀನದಿಂದಲೋ ಸ್ವಲ್ಪ ಮೈಮರೆತರೂ ರಾಜ್ಯದಲ್ಲಿ ಮುಂದೆ ತಾಲಿಬಾನಿ ಸರ್ಕಾರ ಬರಲಿದೆ ಎನ್ನುವುದನ್ನು ನಮ್ಮ ಕಾರ್ಯಕರ್ತರು ನೆನಪಿಟ್ಟುಕೊಳ್ಳಬೇಕು. ರಾಷ್ಟ್ರವಾದಿ ಸರ್ಕಾರವನ್ನು ಮತ್ತೊಮ್ಮೆ ತರಲು ಶ್ರಮಿಸಬೇಕು

2015ರಲ್ಲಿ ಇಲ್ಲಿ ರಾಜು ಕೊಲೆಯಾಯ್ತು. ಆರೋಪಿಯನ್ನು ಪೊಲೀಸರು ಬಂಧಿಸಿದರು. ಆದರೆ, ನಗರ ಪೊಲೀಸ್ ಆಯುಕ್ತರನ್ನು ಎರಡೇ ತಿಂಗಳಲ್ಲೇ ವರ್ಗಾಯಿಸಲಾಯಿತು. ಆರೋಪಿಗೆ ಶಿಕ್ಷೆಯೇ ಆಗಲಿಲ್ಲ. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜು ಕುಟುಂಬದರಿಗೆ ಸಾಂತ್ವನ ಹೇಳುವ ಕೆಲಸವನ್ನೂ ಮಾಡಲಿಲ್ಲ. ಕೆಎಫ್‌’ಡಿ, ಪಿಎಫ್‌’ಐ ಸಂಘಟನೆಯವರ ಮೇಲಿದ್ದ 175 ಕ್ರಿಮಿನಲ್‌ ಪ್ರಕರಣಗಳನ್ನು ವಾಪಸ್ ತೆಗೆದುಕೊಂಡು, ನಮ್ಮ ಎರಡು ಡಜನ್ ಕಾರ್ಯಕರ್ತರ ಸಾವಿಗೆ ಕಾರಣವಾದರು. ಅಂತಹ ಸಿದ್ದರಾಮಯ್ಯ ಮತ್ತೊಮ್ಮೆ ಅಧಿಕಾರ ಹಿಡಿಯಬೇಕು ಎಂದು ಹವಣಿಸುತ್ತಿದ್ದಾರೆ ಎಂದು ಟೀಕಿಸಿದರು.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನಕಾರ್ಯದರ್ಶಿಯಾಗಿ ಪಳನಿಸ್ವಾಮಿ ಅಭಾದಿತ; ಮದ್ರಾಸ್ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ