ಮನೆ ರಾಜಕೀಯ ಸಿಎಸ್ ​ಆರ್ ಫಂಡ್ ವಿಚಾರವಾಗಿ ಯತೀಂದ್ರ ಮಾತನಾಡಿದ್ದಾರೆ: ಡಿ.ಕೆ ಶಿವಕುಮಾರ್

ಸಿಎಸ್ ​ಆರ್ ಫಂಡ್ ವಿಚಾರವಾಗಿ ಯತೀಂದ್ರ ಮಾತನಾಡಿದ್ದಾರೆ: ಡಿ.ಕೆ ಶಿವಕುಮಾರ್

0

ಬೆಂಗಳೂರು: ಬಿಜೆಪಿ,ಜೆಡಿಎಸ್ ಅವರಿಗೆ ಕೆಲಸ ಇಲ್ಲ. ಯತೀಂದ್ರ ಆಶ್ರಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಜನ ಸಂಪರ್ಕ ಸಭೆ ನಡೆಸಿದ್ದಾರೆ. ಸಿಎಸ್​ಆರ್ ಫಂಡ್ ವಿಚಾರವಾಗಿ ಮಾತನಾಡಿದ್ದಾರೆ. ಸ್ಕೂಲ್​ಗಳ ವಿಚಾರವಾಗಿ ಮಹದೇವ್ ಅವರ ಜೊತೆ ಮಾತನಾಡಿದ್ದಾರೆ ಎಂದು ವೈರಲ್ ವಿಡಿಯೋದ ಬಗ್ಗೆ ಸ್ಪಷ್ಟನೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಯತೀಂದ್ರ ಅವರು ಎಲ್ಲಿ ಅಧಿಕಾರಿಗಳ ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ? ಅವರ ಬಗ್ಗೆ ಮಾತಾಡಿ ಯತೀಂದ್ರ ಅವರನ್ನ ದೊಡ್ಡವರನ್ನಾಗಿ ಮಾಡುತ್ತಿದ್ದಾರೆ, ಮಾಡಲಿ ಬಿಡಿ. ಬೇರೆ ಕೆಲಸ ಇಲ್ಲ ಇವರಿಗೆ ಎಂದು ಬಿಜೆಪಿ ಜೆಡಿಎಸ್ ವಿರುದ್ಧ ಆಕ್ರೋಶ ಹೊರ ಹಾಕಿದರು.

ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಕುಮಾರಸ್ವಾಮಿ ಅವರಿಗೆ ಅನುಭವ, ಅದಕ್ಕೆ ಹಾಗೆ ಟ್ವೀಟ್ ಮಾಡಿದ್ದಾರೆ. ಮಾಡಲಿ ಬಿಡಿ. ಯತೀಂದ್ರ ಎಲ್ಲಿ ವರ್ಗಾವಣೆ ಬಗ್ಗೆ ಮಾತಾಡಿದ್ದಾರೆ ಹೇಳಿ? ವಿಡಿಯೋ ನಾನು ನೋಡಿದ್ದೇನೆ. ಒಬ್ಬ ಮಾಜಿ ಶಾಸಕ ನಾಲ್ಕೈದು ಅಧಿಕಾರಿಗಳ ವರ್ಗಾವಣೆ ಕೇಳಿದರೆ ಏನ್ ತಪ್ಪು? ಎಂದು ಪ್ರಶ್ನಿಸಿದ್ದಾರೆ.

ನನ್ನ ಕ್ಷೇತ್ರದಲ್ಲಿ ನನ್ನ ಸಹೋದರ ಕೆಲವು ಕೆಲಸ ಅಟೆಂಡ್ ಮಾಡುತ್ತಾರೆ. ಜನ ಮನೆ, ಹಸು ಕುರಿ ಬೇಕಾಂತಾರೆ. ಅದನ್ನು ಸುರೇಶ್ ಅಟೆಂಡ್ ಮಾಡುತ್ತಾರೆ. ನಾನು‌ ನಂತರ ಸಹಿ ಹಾಕುತ್ತೇನೆ. ನಾನು ಬಗುರ್ ಹುಕುಂ ಸಮಿತಿ ಅಧ್ಯಕ್ಷ ಆಗಿದ್ದೇನೆ. ಎಲ್ಲಾ ನೋಡೋದಕ್ಕೆ ಆಗಲ್ಲ ಎಂದರು.

ಯತೀಂದ್ರ ಸಿದ್ದರಾಮಯ್ಯ ಅವರು ಸಿಎಂಗೆ ದಾರಿ ತಪ್ಪಿಸುತ್ತಿದ್ದಾರೆ ಅನ್ನೋ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಅವರಿಗೆ 40 ವರ್ಷಗಳ ರಾಜಕೀಯ ಅನುಭವ ಇದೆ. ಯಾರು ದಾರಿ ತಪ್ಪಿಸಲು ಆಗಲ್ಲ ಎಂದರು.

ಹಿಂದಿನ ಲೇಖನವರ್ಗಾವಣೆ ದಂಧೆ ಮಾಡಿದ್ದರೆ ರಾಜಕೀಯದಿಂದ ನಿವೃತ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ 
ಮುಂದಿನ ಲೇಖನಎರಿಕ್ ಸನ್’ನ 8 ಹಂತಗಳ ಸಿದ್ಧಾಂತ