Saval TV on YouTube
ಇಂಗ್ಲೀಷ್
ಮೇಷ್ಟ್ರು: “ನಿಮ್ಮಪ್ಪನ ಹೆಸರು ಇಂಗ್ಲೀಷ್’ನಲ್ಲಿ ಬರೆ..”
ತಿಮ್ಮನು “ಟೆಂಪಲ್ ಸ್ಟೆಪ್ ವಾಟರ್’ಕಿಂಗ್” ಅಂತ ಬರೆದಿರುವುದನ್ನು ನೋಡಿ ಕೇಳಿದ್ರು-
“ಏನು ತಮಾಷೆ ಮಾಡಿರುವೆಯಾ?”
ತಿಮ್ಮ ಹೇಳಿದ: “ನನ್ನಪ್ಪನ ಹೆಸರು ಗುಡಿಮೆಟ್ಟಿಲು ಗಂಗರಾಜು”
*************
ಇಷ್ಟ
ಹುಡುಗಿ: “ನನ್ನಮ್ಮನಿಗೆ ನೀವು ತುಂಬಾ ಹಿಡಿಸಿದ್ರಾ…”
ಹುಡುಗ (ನಾಚಿಕೆಯಿಂದ): “ಏನೇ ಆಗ್ಲಿ ನಾನು ಮದುವೆಯಾಗುವುದು ನಿನ್ನನ್ನೇ. ನಿಮ್ಮ ಅಮ್ಮನಿಗೆ ನನ್ನ ಮರೆಯಲು ಹೇಳು..”
*************
ಮಾರುತಿ
ತಿಮ್ಮ: “ಸುಮಾರು ೮೦೦ ವರ್ಷದ ಹಿಂದಿನ ಹನುಮಂತ ದೇವಸ್ಥಾನವನ್ನು ಶಾರ್ಟ್ ಅಂಡ್ ಸ್ವೀಟಾಗಿ ಹೇಗೆ ಹೇಳ್ತಿ..”
ಶೀಲಾ: “ಮಾರುತಿ ೮೦೦”














