“ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು ಅಂತಾರಲ್ಲ, ಅವುಗಳಲ್ಲಿ ಒಂದನ್ನು ಮುರಿದರೆ ಏನಾಗುತ್ತದೆ?”
“ಆಗೋದೇನು? ಬಾಕಿ ಹನ್ನೊಂದು ಸೂತ್ರಗಳು ಮಾತ್ರ ಉಳಿಯುತ್ತೆ, ಅಷ್ಟೇ”
ಮುನ್ನೂರು ಪೌಂಡು ತೂಕದ ಧಡಿಯ ಕುಸ್ತಿಪಟು ಬಸ್ಸಿನಲ್ಲಿ ಎಲ್ಲಿ ಕುಳಿತುಕೊಳ್ಳುತ್ತಾನೆ?
ಖಾಲಿ ಸೀಟು ಇದ್ದ ಕಡೆ
ವರದಿಗಾರ: ಕುಮಾರ್, ನೀವು ವೇಗದ ಓಟದಲ್ಲಿ ಯಾವಾಗಲೂ ಫಸ್ಟ್ ಬರೀರಲ್ಲಾ. ನಿಮ್ಮ ವೇಗದ ಗುಟ್ಟೇನು?
ಕುಮಾರ್: ನನ್ನ ಹೆಂಡತಿ ನನ್ನನ್ನು ಅಟ್ಟಿಸಿಕೊಂಡು ಬರುತ್ತಿರುವ ದೃಶ್ಯವನ್ನು ಊಹಿಸಿಕೊಳ್ಳುತ್ತೇನೆ”.