ಮನೆ ರಾಜಕೀಯ ನಿತಿನ್ ಗಡ್ಕರಿಗೆ ಮತ್ತೆ ಕೋವಿಡ್

ನಿತಿನ್ ಗಡ್ಕರಿಗೆ ಮತ್ತೆ ಕೋವಿಡ್

0

ನವದೆಹಲಿದೇಶದಲ್ಲಿ ಕೊರೋನಾ ಸೋಂಕು ಮತ್ತೆ ಉಲ್ಬಣಗೊಂಡಿದ್ದು, ಹಿಂದೆ ಸೋಂಕಿನಿಂದ ಚೇತರಿಸಿಕೊಂಡಿದ್ದ ನಿತಿನ್ಗಡ್ಕರಿ ಅವರಿಗೆ ಮತ್ತೊಮ್ಮೆ ಕೋವಿಡ್ಪಾಸಿಟಿವ್ಆಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಅವರು, ತಮಗೆ ಸೋಂಕಿನ ಸೌಮ್ಯ ಲಕ್ಷಣಗಳು ಕಂಡು ಬಂದಿದ್ದು, ವರದಿಯಲ್ಲಿ ಕೋವಿಡ್​ ಪಾಸಿಟಿವ್ ಆಗಿದೆ. ಈ ಹಿನ್ನಲೆ ಮನೆಯಲ್ಲಿಯೇ ಐಸೋಲೇಷನ್ಗೆ ಒಳಗಾಗುತ್ತಿದ್ದೇನೆ. ತಮ್ಮ ಸಂಪರ್ಕಕ್ಕೆ ಒಳಗಾದವರು ಸುರಕ್ಷೆ ವಹಿಸುವಂತೆ ಸೂಚಿಸಲಾಗಿದೆ.

ಪಂಜಾಬ್​ ಮಾಜಿ ಸಿಎಂಗೆ ಸೋಂಕು: ಇನ್ನು ಪಂಜಾಬ್​ ಮಾಜಿ ಸಿಎಂ ಅಮರಿಂದರ್​ ಸಿಂಗ್​ ಕೂಡ ತಮಗೆ ಸೋಂಕು ದೃಢವಾಗಿರುವ ಸಂಬಂಧ ಇಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ. ಪಂಜಾಬ್​ ವಿಧಾನಸಭಾ ಚುನಾವಣೆಗೆ ಒಂದು ತಿಂಗಳು ಇರಬೇಕಾದರೆ ಅವರು ಸೋಂಕಿಗೆ ತುತ್ತಾಗಿದ್ದು, ಚುನಾವಣಾ ಪ್ರಚಾರ ಸಮಾವೇಶದಿಂದ ಹೊರಗುಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಇದೇ ವೇಳೆ ಪಂಜಾಬ್ ಸಾರಿಗೆ ಸಚಿವ ಅಮರಿಂದರ್ ಸಿಂಗ್​ ರಾಜಾ ಕೂಡ ಸೋಂಕಿಗೆ ತುತ್ತಾಗಿದ್ದು. ಮನೆಯಲ್ಲಿಯೇ ಐಸೋಲೇಷನ್​​ಗೆ ಒಳಗಾಗಿದ್ದಾರೆ


ಚೇತರಿಸಿಕೊಳ್ಳುತ್ತಿರುವ ರಾಜನಾಥ್​ ಸಿಂಗ್​: ಕಳೆದ ಮೂರು ದಿನಗಳ ಹಿಂದೆ ಅಂದರೆ ಸೋಮವಾರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಕೂಡ ಸೋಂಕಿಗೆ ತುತ್ತಾಗಿದ್ದರು. ಈ ಸಂಬಂಧ ಟ್ವೀಟ್​ ಮೂಲಕ ದೃಢ ಪಡಿಸಿದ್ದರು. ಸದ್ಯ ಅವರು ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸೇನಾ ಆಸ್ಪತ್ರೆ ವೈದ್ಯರ ತಂಡ ತಿಳಿಸಿದೆ. ಇದೇ ವೇಳೆ ಪಂಜಾಬ್ ಕಾಂಗ್ರೆಸ್​​ ಸಂಸದ ಪಟಿಯಾಲ ಕೂಡ ಸೋಂಕಿಗೆ ತುತ್ತಾಗಿದ್ದಾರೆ.

ಹಿಂದಿನ ಲೇಖನಯುವಕನನ್ನು ಬೆತ್ತಲುಗೊಳಿಸಿ ಅತಿರೇಕದ ವರ್ತನೆ
ಮುಂದಿನ ಲೇಖನಕೊರೊನಾ ಅಬ್ಬರ: ಇಂದು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಭೆ