ಮನೆ ಅಪರಾಧ ಕಳ್ಳತನಕ್ಕೆ ಬಂದಿದ್ದಾನೆಂದು 16 ವರ್ಷದ ಬಾಲಕನ ಹತ್ಯೆ!

ಕಳ್ಳತನಕ್ಕೆ ಬಂದಿದ್ದಾನೆಂದು 16 ವರ್ಷದ ಬಾಲಕನ ಹತ್ಯೆ!

0

ಬೆಳಗಾವಿ : ಅಥಣಿ ಪಟ್ಟಣದ ಹೊರವಲಯದ ಖಾಲಿ ನಿವೇಶನದಲ್ಲಿ ಮೇ 01 ರಂದು ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಬಾಲಕನ ಶವ ಸಿಕ್ಕಿತ್ತು. ಅನಾಥ ಶವ ಎಂದು ಪೊಲೀಸರು ಶವ ಸಂಸ್ಕಾರ ಮಾಡಿದ್ದರು. ಶವ ಸಂಸ್ಕಾರ ನಡೆದ ಎರಡು ದಿನಗಳ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಬಾಲಕನ ಗುರುತು ಪತ್ತೆಯಾಗಿದೆ. ಅಥಣಿ ತಾಲೂಕಿನ ಅರಳಿಹಟ್ಟಿ ಗ್ರಾಮದ ವಿಕಾಸ ಶಿವದಾಸ ಕೋಷ್ಠಿ (16) ಮೃತ ಬಾಲಕ.

ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಬಾಲಕನದ್ದು ಸಹಜ ಸಾವಲ್ಲ, ಕೊಲೆ ಎಂದು ತಿಳಿದಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಾದ ಅಬ್ದುಲ್ ಬಾರಿ ಮುಲ್ಲಾ (36), ಜೂಬೇರ ಅಹಮದ್ ಮೌಲ್ವಿ(34), ಬಿಲಾಲ್ ಅಹಮದ್ ಮೌಲ್ವಿ (25), ಹಜರತ್ ಬಿಲಾಲ್ ನಾಲಬಂದ್(27), ಮಹೇಶ ಕಾಳೆ (36) ​ಬಂಧಿತರು.

ಅಥಣಿ ಪಟ್ಟಣದ ಹೊರವಲಯದಲ್ಲಿರುವ ಕಾಳೆ ಫರ್ನಿಚರ್ಸ್​​​ನಲ್ಲಿ ವಿಕಾಸ ಕಳ್ಳತನ ಮಾಡಲು ಬಂದಿದ್ದಾನೆಂದು ತಿಳಿದು, ಆತನನ್ನು ರಾತ್ರಿ ಶೇಡ್​ನಲ್ಲಿ ಕಟ್ಟಿ ಹಾಕಿ ಹಲ್ಲೆ ಮಾಡಿ ಹತ್ಯೆಗೈಯಲಾಗಿದೆ. ಕೃತ್ಯ ಮುಚ್ಚಿಹಾಕಲು ವಿಕಾಸ ಶವದ ಮೇಲೆ ಆ್ಯಸಿಡ್​ ಹಾಕಿ ಚರಂಡಿಗೆ ಬಿಸಾಕಿ ಹಾಕಿದ್ದರು. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.