ಮನೆ ಕ್ರೀಡೆ ಇಂದಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭ

ಇಂದಿನಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭ

0

ರೋಸೌ (ಡೊಮಿನಿಕಾ): ಯಶಸ್ವಿ ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿಯುವುದನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಖಚಿತಪಡಿಸಿದ್ದಾರೆ.

Join Our Whatsapp Group

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023-25ರ ರುತುವಿನ ಮೊದಲ ಟೆಸ್ಟ್ ನಲ್ಲಿ ಭಾರತ ಹೊಸ ಆರಂಭಿಕ ಸಂಯೋಜನೆಗೆ ಒತ್ತು ನೀಡಿದೆ. ಹಿಟ್ ಮ್ಯಾನ್ ಶರ್ಮಾ ಜೊತೆಗೆ ಯಶಸ್ವಿ ಜೈಸ್ವಾಲ್ ಪಂದ್ಯಾರಂಭ ಮಾಡುತ್ತಾರೆ.

ಮೊದಲ ಟೆಸ್ಟ್ ಗೆ ಮುಂಚಿತವಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಂಡಿಯನ್ ಕ್ಯಾಪ್ಟನ್, “ಗಿಲ್ ಅವರು 3ನೇ ಕ್ರಮಾಂಕದಲ್ಲಿ ಆಡುತ್ತಾರೆ. ಏಕೆಂದರೆ ಗಿಲ್ ಸ್ವತಃ 3ನೇ ಕ್ರಮಾಂಕದಲ್ಲಿ ಆಡಲು ಬಯಸಿದ್ದಾರೆ. ನಾನು ನನ್ನೆಲ್ಲ ಕ್ರಿಕೆಟ್ ಗಳನ್ನು 3 ಮತ್ತು 4ರಲ್ಲಿ ಆಡಿದ್ದೇನೆ ಎಂದು ಗಿಲ್ ರಾಹುಲ್ ದ್ರಾವಿಡ್ ಜೊತೆ ಚರ್ಚಿಸಿದ್ದಾರೆ. ನಾನು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ ತಂಡಕ್ಕೆ ಉತ್ತಮ ಪ್ರದರ್ಶನ ನೀಡಬಹುದೆಂದು ಭಾವಿಸುತ್ತೇನೆ ಎಂದಿದ್ದಾರೆ.

ರೋಹಿತ್ ಪ್ರಕಾರ, ಭಾರತವು ಮೊದಲ ಟೆಸ್ಟ್ ನಲ್ಲಿ ಇಬ್ಬರು ಸ್ಪಿನ್ನರ್ ಗಳ ಜೊತೆ ತನ್ನ ಬೌಲಿಂಗ್ ತಂಡವನ್ನು ಹೊಂದಿರಲಿದೆ. ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಎರಡು ಸ್ಪಿನ್ನರ್ ಸ್ಥಾನಗಳನ್ನು ತುಂಬುವ ನಿರೀಕ್ಷೆಯಿದೆ. ಅಕ್ಷರ್ ಪಟೇಲ್ ಸ್ಥಾನ ಸಿಗುವುದು ಅನುಮಾನ. ಆದರೆ ರೋಹಿತ್ ಶರ್ಮಾ ಯಾರ ಹೆಸರನ್ನೂ ನಿರ್ದಿಷ್ಟವಾಗಿ ತೆಗೆದುಕೊಂಡಿರದ ಕಾರಣ ಟಾಸ್ ನಂತರವೇ ತಿಳಿಯಲಿದೆ.

ತಂಡದ ವಿವರ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಸ್. ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಸರ್ ಪಟೇಲ್, ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನದ್ಕತ್ ಮತ್ತು ನವದೀಪ್ ಸೈನಿ ಆಡಲಿದ್ದಾರೆ.

ಹಿಂದಿನ ಲೇಖನಏರೋನಿಕ್ಸ್‌ ಇಂಟರ್‌ ನೆಟ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕ, ಸಿಇಒ  ಹತ್ಯೆ ಪ್ರಕರಣ: ಮೂವರ ಬಂಧನ
ಮುಂದಿನ ಲೇಖನಬೌಲ್ಟ್ ನಿಂದ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ