ಮನೆ ರಾಜಕೀಯ ನನ್ನ ಮುಂದೆ ಮೂರು ಆಯ್ಕೆಗಳಿವೆ: ಸಿಎಂ ಇಬ್ರಾಹಿಂ

ನನ್ನ ಮುಂದೆ ಮೂರು ಆಯ್ಕೆಗಳಿವೆ: ಸಿಎಂ ಇಬ್ರಾಹಿಂ

0

ಹುಬ್ಬಳ್ಳಿ: ನನ್ನ ಮುಂದೆ ಜೆಡಿಎಸ್‌, ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಕ್ಷಗಳೆಂಬ ಮೂರು ಆಯ್ಕೆಗಳಿದ್ದು, ಶೀಘ್ರದಲ್ಲಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ  ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಅವರು, ‘ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ. ನಿರೀಕ್ಷೆಗಿಂತ ಎರಡರಷ್ಟು ಬೆಂಬಲ ಸಿಗುತ್ತಿದೆ. ಸದ್ಯಕ್ಕೆ ನನಗೆ ಜೆಡಿಎಸ್ ಹಾಗೂ ಟಿಎಂಸಿ ಮತ್ತು ಸಮಾಜವಾದಿ ಪಕ್ಷದವರು ನನ್ನನ್ನು ಸಂಪರ್ಕಿಸುತ್ತಿದ್ದಾರೆ. ವಿಳಂಬ ಮಾಡುವುದಿಲ್ಲ. ಶೀಘ್ರವೇ ನಿರ್ಧಾರವನ್ನು ಪ್ರಕಟಿಸುತ್ತೇನೆ’ ಎಂದರು.

ಕರ್ನಾಟಕದಲ್ಲಿ ಚುನಾವಣೆಗೆ ಮುನ್ನವೇ ಅನೇಕರು ಕಾಂಗ್ರೆಸ್ ತೊರೆಯುತ್ತಾರೆ ಎಂದು ಹೇಳಿದ ಅವರು, ಕೂಡಲಸಂಗಮದಿಂದ  ‘ಅಲಿಂಗ’(ಅಲ್ಪಸಂಖ್ಯಾತರು, ಲಿಂಗಾಯತ) ಸಮಾವೇಶ ಮಾಡಲಾಗುವುದು. ಅದು ಪಕ್ಷಾತೀತವಾಗಿ ನಡೆಯಲಿದ್ದು, ಸ್ವಾಮೀಜಿಗಳು, ಸೂಫಿ ಸಂತರು ಭಾಗವಹಿಸಲಿದ್ದಾರೆ

ಹಿಂದಿನ ಲೇಖನ2019ರ ಮಿಸ್ ಅಮೇರಿಕಾ ಚೆಸ್ಲಿ ಕ್ರಿಸ್ಟ್ ಆತ್ಮಹತ್ಯೆ
ಮುಂದಿನ ಲೇಖನವಿವಾಹಿತೆ ಜೊತೆ ಅಕ್ರಮ ಸಂಬಂಧ: ಯುವಕನ ಕುಟುಂಬದವರ ಮೇಲೆ ಹಲ್ಲೆ