ಮನೆ ರಾಜ್ಯ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 25 ಲಕ್ಷ ಹಣ ವಶಕ್ಕೆ

ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 25 ಲಕ್ಷ ಹಣ ವಶಕ್ಕೆ

0

ಬೆಂಗಳೂರು: ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 25 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ಬೆಂಗಳೂರಿನ ಹಲಸೂರು ಗೇಟ್ ಠಾಣಾ ವ್ಯಾಪ್ತಿಯ ಧರ್ಮರಾಯಸ್ವಾಮಿ ದೇವಸ್ಥಾನದ ಬಳಿ ಮಂಗಳವಾರ (ಮಾರ್ಚ್​.27) ರ ಸಂಜೆ ವಶಕ್ಕೆ ಪಡೆದುಕೊಂಡಿದ್ದಾರೆ.

ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

199 ಎಲ್ಇಡಿ ಟಿವಿಗಳು ಜಪ್ತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಲ್ಯಾಂಕೋ ಟೋಲ್ ​ನಲ್ಲಿ ಚುನಾವಣಾ ಅಧಿಕಾರಿಗಳು 199 ಎಲ್​ಇಡಿ ಟಿವಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಎಲ್​ಇಡಿ ಟಿವಿಗಳು ಇಸ್ಲಾಂಪುರ ಗ್ರಾಮದ ಬಾಬುಜಾನ್ ​ಗೆ ಸೇರಿವೆ.

ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಕಡಬ ತಾಲೂಕು ಪಂಚಾಯತ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಮುಂದಿನ ಲೇಖನಮೋದಿ ಅಲೆಗೆ ಹೆದರಿ ಕಾಂಗ್ರೆಸ್ ಸಚಿವರು ಸ್ಪರ್ಧಿಸಲು ಮುಂದೆ ಬರಲಿಲ್ಲ: ಬಿ ವೈ ವಿಜಯೇಂದ್ರ ಟೀಕೆ