ಮನೆ ಅಪರಾಧ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ 30 ವರ್ಷ ಜೈಲು

ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ 30 ವರ್ಷ ಜೈಲು

0
Hand about to bang gavel on sounding block in the court room

ಕೋಲಾರ: ಕೆಜಿಎಫ್‌ನಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ 30 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 22 ಸಾವಿರ  ರೂ, ದಂಡ ವಿಧಿಸಿ ಜಿಲ್ಲಾ ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶ ಬಿ.ಪಿ.ದೇವಮಾನೆ ಆದೇಶ ಹೊರಡಿಸಿದ್ದಾರೆ.

ಕೆಜಿಎಫ್‍ನ ರಾಬರ್ಟ್‍ಸನ್‍ಪೇಟೆಯ ಮಂಜುನಾಥ ನಗರದ ಕುಟ್ಟಿ ಅಲಿಯಾಸ್ ತಮಿಳರಸನ್ ಶಿಕ್ಷೆಗೆ ಗುರಿಯಾದವನು.

ಘಟನೆ ಹಿನ್ನೆಲೆ: ಬಾಲಕಿಯನ್ನು 2019ರ ಅ.10ರಂದು ರಾತ್ರಿ 7 ಗಂಟೆ ಸಮಯದಲ್ಲಿ ಮನೆಯಲ್ಲಿ ಒಬ್ಬಳೇ ಇದ್ದಾಗ ಅತ್ಯಾಚಾರವೆಸಗಿ ಪರಾರಿಯಾಗಿದ್ದನು. ರಾಬರ್ಟಸನ್‌ಪೇಟೆ ಸರ್ಕಲ್‌ ಇನ್‌ಸ್ಪೆಕ್ಟರ್ ಸೂರ್ಯಪ್ರಕಾಶ್ ಆತನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದರು.

ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಎಸ್‌.ಮುನಿಸ್ವಾಮಿ ಗೌಡ ವಾದ ಮಂಡಿಸಿದರು.

ಹಿಂದಿನ ಲೇಖನಚಕ್ರಕ್ಕೆ ಸಿಲುಕಿದ ಹುರುಳಿಸೊಪ್ಪು: ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ನಿಂತ ಆಂಬುಲೆನ್ಸ್
ಮುಂದಿನ ಲೇಖನಕೋವಿಡ್ ನಿಂದ ನಿರ್ದೇಶಕ ಪ್ರದೀಪ್ ರಾಜ್ ನಿಧನ