ಮನೆ ಕ್ರೀಡೆ ಬರೋಬ್ಬರಿ 324 ರನ್​: ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ

ಬರೋಬ್ಬರಿ 324 ರನ್​: ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ

0

ಇಂಗ್ಲೆಂಡ್​ ನಲ್ಲಿ ನಡೆದ ಟಿ20 ಚಾಂಪಿಯನ್ ​ಶಿಪ್ ಲೀಗ್ ​ನಲ್ಲಿ ಬರೋಬ್ಬರಿ 324 ರನ್ ಬಾರಿಸುವ ಮೂಲಕ ಸಸೆಕ್ಸ್ ತಂಡವು ಹೊಸ ಇತಿಹಾಸ ನಿರ್ಮಿಸಿದೆ.

Join Our Whatsapp Group

ಮಿಡ್ಲ್​ ಸೆಕ್ಸ್ 2ನೇ ಇಲೆವೆನ್​ ವಿರುದ್ಧ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಸೆಕ್ಸ್ 2ನೇ ಇಲೆವೆನ್ ತಂಡವು ಸ್ಪೋಟಕ ಬ್ಯಾಟಿಂಗ್ ನಡೆಸಿತು. ಎದುರಾಳಿ ಬೌಲರ್ ​ಗಳ ವಿರುದ್ಧ ಅಬ್ಬರಿಸಿದ ನಾಯಕ ರವಿ ಬೋಪರಾ ಕೇವಲ 12 ಭರ್ಜರಿ ಸಿಕ್ಸ್ ಹಾಗೂ 14 ಫೋರ್ ಸಿಡಿಸಿದರು.

ಈ ಸಿಡಿಲಬ್ಬರದ ಬ್ಯಾಟಿಂಗ್ ಪರಿಣಾಮ ಬೋಪಾರ ಬ್ಯಾಟ್ ​ನಿಂದ ಕೇವಲ 49 ಎಸೆತಗಳಲ್ಲಿ 144 ರನ್ ಮೂಡಿಬಂತು. ಮತ್ತೊಂದೆಡೆ ಟಾಮ್ ಅಲ್ಸೋಪ್ 27 ಎಸೆತಗಳಲ್ಲಿ 55 ರನ್ ಚಚ್ಚಿದರು. ಪರಿಣಾಮ 20 ಓವರ್​ಗಳ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡು ಸಸೆಕ್ಸ್ ತಂಡವು 324 ರನ್ ಪೇರಿಸಿತು.

325 ರನ್ ​ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಮಿಡ್ಲ್​ಸೆಕ್ಸ್ ತಂಡವು ಕೇವಲ 130 ರನ್‌ಗಳಿಗೆ ಆಲೌಟ್​ ಆದರು. ಇದರೊಂದಿಗೆ ಸಸೆಕ್ಸ್ ತಂಡವು 192 ರನ್​ಗಳ ಬೃಹತ್ ಅಂತರದಿಂದ ಜಯ ಸಾಧಿಸಿದೆ.

ಇದರೊಂದಿಗೆ ಇಂಗ್ಲೆಂಡ್ ಕೌಂಟಿ ಟಿ20 ಕ್ರಿಕೆಟ್ ​ನಲ್ಲಿ 300+ ರನ್​ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಸಸೆಕ್ಸ್ ಸೆಕೆಂಡ್ ಇಲೆವೆನ್ ಪಾತ್ರವಾಗಿದೆ. ಅಲ್ಲದೆ ಟಿ20 ಕ್ರಿಕೆಟ್​ನಲ್ಲಿ 300 ರನ್ ​ಗಳ ಹೊಸ ವಿಶ್ವ ದಾಖಲೆ ಕೂಡ ನಿರ್ಮಾಣವಾಗಿರುವುದು ವಿಶೇಷ.

ಹಿಂದಿನ ಲೇಖನಪೊನ್ನಿಯಿನ್ ಸೆಲ್ವನ್- 2 ಸಿನಿಮಾ ಜೂನ್ 2 ರಂದು ಒಟಿಟಿಯಲ್ಲಿ ಬಿಡುಗಡೆ
ಮುಂದಿನ ಲೇಖನIIT ಧಾರವಾಡದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ