ಮನೆ ಆರೋಗ್ಯ ಆರೋಗ್ಯ ಲಾಭಕ್ಕಾಗಿ ರೇನ್ ಬೋ ಡಯಟ್‌  ಅನುಸರಿಸಿ

ಆರೋಗ್ಯ ಲಾಭಕ್ಕಾಗಿ ರೇನ್ ಬೋ ಡಯಟ್‌  ಅನುಸರಿಸಿ

0

ಎಲ್ಲ ಬಗೆಯ ಬಣ್ಣಗಳು ಅಂದರೆ ಪ್ರಕೃತಿಯ ಏಳು ಬಣ್ಣಗಳನ್ನು ಹೊಂದಿರುವ ಆಹಾರವನ್ನು ಸೇವಿಸುವ ಮೂಲಕ ಎಲ್ಲ ಬಗೆಯ ಪೋಷಕಾಂಶಗಳು ನಿತ್ಯವೂ ದೇಹಕ್ಕೆ ಸೇರುವಂತೆ ಮಾಡುವುದು, ತೂಕವನ್ನು ಸಮತೋಲನದಲ್ಲಿರಿಸುವುದು ಇದರ ಮುಖ್ಯ ಉದ್ದೇಶ.

Join Our Whatsapp Group

ಹಾಗಾದರೆ ರೇನ್‌ ಬೋ ಅಥವಾ ಕಾಮನಬಿಲ್ಲು ಡಯಟ್‌ ನಲ್ಲಿ ಏನೇನು ತಿನ್ನಬೇಕು ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.

ಕೆಂಪು : ಕಾಮನಬಿಲ್ಲಿನ ಕೆಂಪು ಬಣ್ಣಕ್ಕೆ ತರಕಾರಿ/ಹಣ್ಣನ್ನು ಆರಿಸುವುದು. ಟೊಮೇಟೋ, ಸ್ಟ್ರಾಬೆರ್ರಿ, ಕಲ್ಲಂಗಡಿ ಹಣ್ಣು ಇತ್ಯಾದಿ. ತರಕಾರಿ/ಹಣ್ಣಿನ ಕೆಂಪು ಬಣ್ಣವು ಪೋಷಕಾಂಶಗಳು ಹೃದಯ, ಮೂತ್ರಕೋಶ ಹಾಗೂ ಮೂತ್ರನಾಳಗಳನ್ನು ಕಾಯುತ್ತದೆ ಎಂಬುದು ನಂಬಿಕೆ.

ಕೇಸರಿ : ಕೇಸರಿ ಅಥವಾ ಕಿತ್ತಳೆ ಬಣ್ಣ ಯಾವೆಲ್ಲ ತರಕಾರಿ ಹಣ್ಣುಗಳಲ್ಲಿವೆ ಎಂದು ಯೋಚಿಸಿ ನೋಡಿ. ಕಿತ್ತಳೆ ಹಣ್ಣು, ಸಿಹಿ ಗೆಣಸು, ಆಪ್ರಿಕಾಟ್‌, ಕ್ಯಾರೆಟ್‌ ಇತ್ಯಾದಿಗಳು ಸಿಕ್ಕಾವು. ಕೇಸರಿ ಬಣ್ಣ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆಯಂತೆ.

ಹಳದಿ : ಹಳದಿ ಬಣ್ಣವು ಕಣ್ಣಿಗೆ ಒಳ್ಳೆಯದು ಎನ್ನಲಾಗಿದೆ. ಅನನಾಸು, ಬಾಳೆಹಣ್ಣು, ಹಳದಿ ದೊಣ್ಣೆ ಮೆಣಸು, ನಿಂಬೆ, ಮುಸಂಬಿ ಇತ್ಯಾದಿಗಳು ಹಳದಿ ಬಣ್ಣದಲ್ಲಿರುತ್ತವೆ. ಕಣ್ಣಿನ ಆರೋಗ್ಯಕ್ಕೆ ಇವು ಒಳ್ಳೆಯದು.

ಹಸಿರು : ಹಸಿರು ಬಣ್ಣಕ್ಕೆ ಹೇರಳವಾಗಿ ಹಣ್ಣು ತರಕಾರಿಗಳು ಸಿಗುತ್ತವೆ. ಮುಖ್ಯವಾಗಿ ಬ್ರೊಕೋಲಿ, ಬೆಣ್ಣೆಹಣ್ಣು, ಕಿವಿ, ಹಾಗೂ ಹಸಿರು ಬಣ್ಣದ ಸೊಪ್ಪು ತರಕಾರಿಗಳು ಈ ವಿಭಾಗಕ್ಕೆ ಬರುತ್ತವೆ. ಗರ್ಭಿಣಿ ಸ್ತ್ರೀಯರಿಗೆ ಇವೆಲ್ಲ ಒಳ್ಳೆಯದು.

ನೀಲಿ ಹಾಗೂ ನೇರಳೆ : ಈ ಬಣ್ಣದ ಹಣ್ಣು ತರಕಾರಿಗಳಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಇವು ಅಧಿಕ ರಕ್ತದೊತ್ತಡವನ್ನು ಸಮತೋಲನಕ್ಕೆ ತರಲು ಅತ್ಯಂತ ಪ್ರಯೋಜನಕಾರಿ. ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ ಗಳಿಗೆ ಇವು ಒಳ್ಳೆಯದು.

ಬಿಳಿ : ನಾವು ಬಿಳಿ ಬಣ್ಣದ ತರಕಾರಿ ಹಣ್ಣುಗಳನ್ನೂ ಸೇವಿಸಬೇಕು. ಹೂಕೋಸು, ಈರುಳ್ಳಿ, ಬೆಳ್ಳುಳ್ಳಿ, ಅಣಬೆ ಇತ್ಯಾದಿಗಳನ್ನು ಆಹಾರದಲ್ಲಿ ಅಭ್ಯಾಸ ಮಾಡಿಕೊಳ್ಳಬಹುದು. ಈ ಬಣ್ಣದ ಆಹಾರ ಹಲ್ಲು ಹಾಗೂ ಎಲುಬಿನ ಆರೋಗ್ಯಕ್ಕೆ ಒಳ್ಳೆಯದು.

ಹಿಂದಿನ ಲೇಖನರಸ್ತೆಯಲ್ಲಿ ಮಹಿಳಾ ಕುಸ್ತಿಪಟುಗಳನ್ನು ಎಳೆದೊಯ್ದ ಪೊಲೀಸರು: ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗುತ್ತಿದೆ ಎಂದ ಸಾಕ್ಷಿ ಮಲಿಕ್
ಮುಂದಿನ ಲೇಖನಅಸ್ಸಾಂನಲ್ಲಿ 4.4 ತೀವ್ರತೆಯ ಭೂಕಂಪ