ನವದೆಹಲಿ: ನೇಪಾಳದಲ್ಲಿ ಇಂದು ಮದ್ಯಾಹ್ನ 1.45ರ ವೇಳೆಗೆ 4.8 ತೀವ್ರತೆಯ ಭೂಕಂಪ ಸಂಭವಿಸಿದೆ.
ಇದನ್ನು ನೇಪಾಳದ ಭೂಕಂಪ ಪರೀಕ್ಷಣಾ ಮತ್ತು ಸಂಶೋಧನಾ ಕೇಂದ್ರ ಖಾತ್ರಿ ಪಡಿಸಿದೆ.
ಈ ಭೂಕಂಪದ ತೀವ್ರತೆಗೆ ದೆಹಲಿ ಸೇರಿ ಉತ್ತರ ಭಾರತದ ಹಲವೆಡೆಯೂ ಭೂಮಿ ಕಂಪಿಸಿದ ಅನುಭವವಾಗಿದೆ. ಇತ್ತೀಚಗಷ್ಟೇ ಹಲವು ತಜ್ಙರು ಭಾರತದಲ್ಲೂ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದಿರುವಾಗಲೇ ಹಿಮಾಲಯದ ತಪ್ಪಲ ಪ್ರದೇಶಗಳಲ್ಲಿ ಈ ಭೂಕಂಪ ಸಂಭವಿಸಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.