ಮನೆ ಅಪರಾಧ ಚಾಮರಾಜನಗರ:  ರಸ್ತೆ ಅಪಘಾತದಲ್ಲಿ 6 ಮಂದಿಗೆ ತೀವ್ರ ಗಾಯ

ಚಾಮರಾಜನಗರ:  ರಸ್ತೆ ಅಪಘಾತದಲ್ಲಿ 6 ಮಂದಿಗೆ ತೀವ್ರ ಗಾಯ

0

ಚಾಮರಾಜನಗರ(Chamarajanagara):  ಊಟಿಗೆ ಸಂಪರ್ಕ ಕಲ್ಪಿಸುವ ಗುಂಡ್ಲುಪೇಟೆ ರಸ್ತೆಯ ತೊಂಡವಾಡಿ ಗೇಟಿನ ಬಳಿ ಟಿಟಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ  ಟಿಟಿ ಪಲ್ಟಿ ಹೊಡೆದು ಕಾರು ಸಂಪೂರ್ಣ ಜಖಂಗೊಂಡಿರುವ ಘಟನೆ ನಡೆದಿದೆ.

ಸದ್ಯ ಕಾರಿನಲ್ಲಿದ್ದ ಬೆಂಗಳೂರು ಮೂಲದ 6 ಮಂದಿ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಿಟಿಯು ತುರ್ತಾಗಿ ಟರ್ನ್ ತೆಗೆದುಕೊಳ್ಳುವ ಆತುರದಲ್ಲಿ ಈ ಅವಘಡ ಸಂಭವಿಸಿದೆ. ಟಿಟಿಯ ಚಾಲಕ ನಾಪತ್ತೆಯಾಗಿದ್ದಾನೆ. ಬೇಗೂರು ಠಾಣಾ ಪೊಲೀಸರು ವಾಹನಗಳನ್ನು ವಶಕ್ಕೆ ಪಡೆದಿದ್ದು,  ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಹಿಂದಿನ ಲೇಖನಪಿಎಸ್ಐ ನೇಮಕಾತಿ ಹಗರಣ: ಡಿವೈಎಸ್ಪಿ, ಇನ್ಸ್ ಪೆಕ್ಟರ್ ಅಮಾನತು
ಮುಂದಿನ ಲೇಖನ24ನೇ ಡೆಫಿಲಿಂಪಿಕ್: ಭಾರತದ ಧನುಷ್ ಶ್ರೀಕಾಂತ್ ಗೆ ಚಿನ್ನ