ಮನೆ ರಾಜ್ಯ 77 ವರ್ಷದ ಸಿದ್ದರಾಮಯ್ಯ, ಈಗ ದೇಶದ ಅತ್ಯಂತ ಹಿರಿಯ ಸಿಎಂ

77 ವರ್ಷದ ಸಿದ್ದರಾಮಯ್ಯ, ಈಗ ದೇಶದ ಅತ್ಯಂತ ಹಿರಿಯ ಸಿಎಂ

0

ನವದೆಹಲಿ/ಬೆಂಗಳೂರು : 77 ವರ್ಷದ ಸಿದ್ದರಾಮಯ್ಯ ಇದೀಗ ದೇಶದ ಅತ್ಯಂತ ಹಿರಿಯ ಸಿಎಂ ಆಗಿ ಹೊರಹೊಮ್ಮಿದ್ದಾರೆ. ಈ ಮೊದಲು 82 ವರ್ಷದ ಪಿಣರಾಯಿ ವಿಜಯನ್ ದೇಶದ ಅತ್ಯಂತ ಹಿರಿಯ ಸಿಎಂ ಆಗಿದ್ದರು. ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೇರಳ ಸಿಎಂ ಸೋಲನುಭವಿಸಿದ್ದರು. ಇದೀಗ ವಿಜಯನ್ ರಾಜೀನಾಮೆ ನೀಡಿದ್ದು, ಎರಡನೇ ಸ್ಥಾನದಲ್ಲಿ 77 ವರ್ಷದ ಸಿದ್ದರಾಮಯ್ಯ ಅವರು ಹಿರಿಯ ಸಿಎಂ ಆಗಿ ಅಗ್ರಸ್ಥಾನಕ್ಕೇರಿದ್ದಾರೆ.

ಇತ್ತೀಚೆಗಷ್ಟೇ `ಕರ್ನಾಟಕದಲ್ಲಿ ಸುದೀರ್ಘಾವಧಿ ಮುಖ್ಯಮಂತ್ರಿ’ ಎಂಬ ಪಟ್ಟವನ್ನು ಸಿದ್ದರಾಮಯ್ಯ (77) ಅವರು ಪಡೆದಿದ್ದರು. 2ನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಇವರು 2026ರ ಜ.6ರಂದು 2,792 ದಿನಗಳ ಕಾಲ ಸಿಎಂ ಆಗಿದ್ದ ದೇವರಾಜ ಅರಸ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಅದನ್ನು ಮೀರುವ ಮೂಲಕ ರಾಜ್ಯದಲ್ಲಿ ಸುದೀರ್ಘಾವಧಿ ಆಳ್ವಿಕೆ ನಡೆಸಿದವರು ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

ಈ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು (75), ಮಿಜೋರಂನ ಲಾಲ್ ದುಹೋಮಾ (74), ನಾಗಾಲ್ಯಾಂಡ್‌ನ ನೆಪ್ಪು ರಿಯೋ (74), ಪುದುಚೇರಿಯ ರಂಗಸ್ವಾಮಿ (74) ಇದ್ದಾರೆ. ಅರುಣಾಚಲ ಪ್ರದೇಶದ ಪೇಮಾ ಖಂಡು (46) ಅವರು ದೇಶದ ಅತಿ ಕಿರಿಯ ಸಿಎಂ ಆಗಿದ್ದಾರೆ. ಇನ್ನೂ ರಾಜ್ಯ ಆಳಿದ ಅತಿ ಹಿರಿಯ ನಾಯಕ ಎಂಬ ಖ್ಯಾತಿ ತಮಿಳುನಾಡು ಮಾಜಿ ಸಿಎಂ ದಿ.ಕರುಣಾನಿಧಿ (92) ಅವರಿಗಿದೆ.