ಮನೆ ಯೋಗಾಸನ ಭುಜಂಗಾಸನ

ಭುಜಂಗಾಸನ

0

 ‘ಭುಜಂಗ’ವೆಂದರೆ ಸರ್ಪ, ಹಾವು,ಈ ಭಂಗಿಯು ‘ರಾಜಕೋತಾಕಾಸನ’ದ ಭಂಗಿಗೆ ಹಿನ್ನಲೆ. ಮೇಲೆ ಬಿದ್ದು ಕಚ್ಚುವುದಕ್ಕೋಸ್ಕರ ಸಿದ್ಧಗೊಂಡ ಹಾವನ್ನು ಹೋಲುವುದರಿಂದ ಈ ಆಸನಕ್ಕೆ ಹೆಸರು.

Join Our Whatsapp Group

 ಅಭ್ಯಾಸ ಕ್ರಮ   :

1. ಮೊದಲು, ನೆಲದಲ್ಲಿ ಹೊಟ್ಟೆಯಮೇಲೆ ಚಪ್ಪಟೆಯಾಗಿ ಮಲಗಬೇಕು.ಬಳಿಕ, ಮೊಣಕೈಗಳನ್ನು ಬಾಗಿಸಿ, ಟೊಂಕದ ಇಬ್ಬದಿಗಳಲ್ಲಿ ನೆಲದಮೇಲೆ ಅಂಗೈಗಳನ್ನು ಹೋರಿರಬೇಕು.

2. ಆಮೇಲೆ,ಉಸಿರನ್ನು ಹೊರ ಬಿಟ್ಟು ಕೈಗಳನ್ನು ಪೂರಾ ನೀಳವಾಗಿ ಹಿಗ್ಗಿಸಿಡುವುದರ ಮೂಲಕ ತಲೆ, ಮುಂಡ ಮತ್ತು ಬೆನ್ನುಗಳನ್ನು ಮೇಲೆತ್ತಬೇಕು.ಆದರೆ ಕಾಲುಗಳನ್ನೂ ಮತ್ತು ಗುದಹ್ಯ ಮೇಲಭಾಗವನ್ನೂ ತಮ್ಮ ಸ್ಥಾನಗಳಿಂದ ಕದಲಿಸಬಾರದು.

3. ಈ ಭಂಗಿಯಲ್ಲಿ ಸಾಮಾನ್ಯವಾಗಿ ಉಸಿರಾಟದತ್ತ ಕೆಲವು ಸೆಕೆಂಡುಗಳ ಕಾಲ ನೆಲೆಸಬೇಕು.

4. ಬಳಿಕ, ಉಸಿರನ್ನು ಹೊರಬಿಟ್ಟು ಮಂಡಿಗಳನ್ನು ಬಾಗಿಸಿ ಪಾದಗಳನ್ನು ಮೇಲೆತ್ತಬೇಕು. ದೇಹದ ಭಾರವನ್ನು ವಸ್ತಿಕುಹರಿ ದ ಭಾಗ ತೊಡೆಗಳು ಮತ್ತು ಕೈಗಳು ಹೊತ್ತಿರುತ್ತವೆ. ಬಳಿಖ ಕೆಲವು ಸಲ ಉಸಿರಾಟ ನಡೆಸಬೇಕು.

5. ಆ ಬಳಿಕ, ಬಲಗೈಮೇಲೆ ಹೆಚ್ಚು ಒತ್ತಡವನ್ನಿಟ್ಟು,ಎಡಗೈಯನ್ನು ನೆಲದಿಂದ ಮೇಲೆತ್ತಿ ಆಳವಾಗಿ ಉಸಿರನ್ನು ಹೊರದೂಡುತ್ತ ಎಡೆತೊಳನ್ನು ಬಿಸಿ, ಹೆಗಲಿನಿಂದ ಬೆನ್ನ ಹಿಂದಕ್ಕೆ  ತೂಗಿಟ್ಟು ಎಕಡಮಂಡಿಯ ಚಿಪ್ಪನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು ಕೆಲವು ಸಲ ಉಸಿರಾಟ ನಡೆಸಿದ ಬಳಿಕ ಆಳವಾಗಿಯೂ ವೇಗವಾಗಿಯೂ  ಉಸಿರನ್ನು ಹೊರಬಿಟ್ಟು ಆಮೇಲೆ ಬಲತೋಳನ್ನಂ  ಹೆಗಲಿಂದ ಹಿಂಗಡೆಗೆ ಬಿಸಿ ತೂಗಿಟ್ಟು ಬಲಗೈಯಿಂದ ಬಲ  ಬಲಗೈಯಿಂದ ಬಲಮಂಡಿಯನ್ನು ಚಿಪ್ಪನ್ನು ಹಿಡಿದುಕೊಳ್ಳಬೇಕು.

6. ಇದಾದಮೇಲೆ, ಮಂಡಿಗಳ ಮೇಲಣ ಬಿಗಿತವನ್ನು ಸಡಿಲಿಸದೆ   ಕಾಲುಗಳನ್ನು ನೀಳಲವಾಗಿ ನೆಲದ ಮೇಲೆ ಚಾಚಿತ್ತು ಕತ್ತನ್ನು ಹಿಗ್ಗಿಸಿ ತಲೆಯನ್ನು ಆದಷ್ಟೂ ಹಿಂದಕ್ಕೆ ಬಿಸಿಡಬೇಕು ಆಗ ಮಂಡಿಗಳನ್ನು ಕ್ರಮಕ್ರಮವಾಗಿ ಒಂದರ ಬಳಿಗೆ ಇನ್ನೊಂದನ್ನು ಸೇರಿಸಲು ಯತ್ನಿಸಬೇಕು.

7. ಅನಂತರ ಆಸನದ ಭಾಗವನ್ನು ಕುಗ್ಗಿಸಿ ತೊಡೆಗಳನ್ನುಬಿಗಿಗೊಳಿಸಿ, ಈ ಭಂಗಿಯಲ್ಲಿ ಸುಮಾರು 15 20 ಸೆಕೆಂಡುಗಳ ಕಾಲ ನೆರಸಬೇಕು..ಈ ಭಂಗಿಯ ದಿಯಾಸ್ಗ ಅಭ್ಯಾಸದಲ್ಲಿ ಬೆನ್ನೆಲುಬು ಎದೆ ಮತ್ತು ಭುಜಗಳು ಸಂರ್ಣವಾಗಿ ಇರುವುದರಿಂದಲೂ ಕಿಬ್ಬೊಟ್ಟೆಯೂ ಕುಗ್ಗುವುದರಿಂದಲೂ ಉಸಿರಾಟವು ವೇಗವಾಗಿಯೂ ಶ್ರಮದಾಯಕವಾಗಿಯೂ ನಡೆಯುತ್ತದೆ.

8. ಕೊನೆಯಲ್ಲಿ ಮಂಡಿಗಳನ್ನು ಬಾಗಿಸಿ ಮಂಡಿಚಿಪ್ಪುಗಳ ಮೇಲಿನ ಕೈಗಳ ಭಿಗಿತವನ್ನು ಒಂದೊಂದಾಗಿ ಸಡಿಲಿಸಿ ನೆಲದ ಮೇಲೆ ವಿಶ್ರಮಿಸಬೇಕು.

 ಪರಿಣಾಮಗಳು :

       ಈ ಭಂಗಿಯು ‘ಭುಜಂಗಾಸನ’ ಒಂದರ ಭಂಗಿಗಿಂತಲೂ ಹೆಚ್ಚಿನ ಶ್ರಮವನ್ನು ಅಪೇಕ್ಷಿಸುವುದರಿಂದ ಇದರಿಂದ ದುರಕುವ ಫಲಗಳೂ ಹೆಚ್ಚು ಇದರಲ್ಲಿ, ವಸ್ತಿಕುಹರದ ಹಿಂಭಾಗದಲ್ಲಿಯ ತ್ರಿಕೋನಾಕಾರದ ’ಸೈಕ್ರಂ’ ಎಂಬ ಎಲುಬು, ಟೊಂಕದೆಲುಗುಗಳು, ಬೆನ್ನುಮೂಳೆಯ ಕೆಳಭಾಗ ಇವೆಲ್ಲವೂ ಪ್ರಯೋಜನಗಳನ್ನು ಪಡೆಯುವುದಲ್ಲದೆ ಕತ್ತು ಮತ್ತು ಹೆಗಲಿನ ಮಾಂಸಖಂಡಗಳು ಪೂರ್ಣವಾಗಿ ಹಿಗ್ಗುವಿಕೆಯನ್ನನು ಭವಿಸುತ್ತವೆ. ಈ ಭಂಗಿಯಲ್ಲಿಯೂ ಕೂಡ ಹೆಚ್ಚು ರಕ್ತವು  ಗುಹ್ಯಭಾಗದ ಮೇಲ್ಗಡೆಯ ಸುತ್ತ ಪರಿಚಯಿಸುವುದರಿಂದ ಅದು ಆರೋಗ್ಯ ಸ್ಥಿತಿಯನ್ನು ಪಡೆಯುವುದಲ್ಲದೆ, ಕಂಠಮಣಿಯ ಗ್ರಂಥಿಗಳು ಅದಕ್ಕೆ ಸಂಬಂಧಿಸಿದ ಪ್ಯಾರಾ ಥೈರಾಯ್ಡ್ ಎಂಬ ಗ್ರಂಥಿಗಳೂ, ಮೂತ್ರಪಿಂಡದ ಮೇಲಣ ‘ಎಡ್ರಿನಲ್’ ಎಂಬ ನಿರ್ನಾಳ ಗ್ರಂಥಿಗಳೂ ಅಲ್ಲದೆ ಗೋನೇಡ್ಸ್ ಎಂಬ ಅಂಡರೇತ್ರ    ಗ್ರಂಥಿಗಳೂ, ಈ ಆಸನಾ ಭ್ಯಾಸದಿಂದ ಹೆಚ್ಚಿನ ರಕ್ತಪರಿಚಲನೆಯನ್ನು ಪಡೆದು ಚೈತನ್ಯಯುಕ್ತವಾಗುತ್ತವೆ. ಇದೂ ಅಲ್ಲದೆ, ಈ ಆಸನಾಭ್ಯಾಸದಿಂದ ಎದೆಯೂ ಪೂರಾ ಅಗಲವಾಗುವುದಕ್ಕೆ ಅನುಕೂಲಿಸುತ್ತದೆ.