1. ಬಾಯಿಯ ಹುಣ್ಣಿಮೆ ತೊಂದರೆಯಿಂದ ಬಳಲುವವರು ಕೊತ್ತಂಬರಿ ಸೊಪ್ಪಿನ ರಸದಿಂದ ಬಾಯಿ ಮುಕ್ಕಳಿಸಬೇಕು ಇಲ್ಲವೇ ಊಟದ ನಂತರ ಎಲೆಗಳನ್ನು ಅಗಿದು ತಿನ್ನಬೇಕು.
2. ಅಲರ್ಜಿ ದಿಂದುಟಾದ ವಾಂತಿ ಇರುವಾಗ ಒಂದು ಲೋಟ ಮಜ್ಜಿಗೆಯಲ್ಲಿ ಎರಡು ಚಮಚ ಕೊತ್ತಂಬರಿ ಸೊಪ್ಪಿನ ತಾಜಾ ರಸವನ್ನು ದಿನಕ್ಕೆರಡು ಬಾರಿ ಸೇವನೆ ಮಾಡಬೇಕು.
3. ಕೊತ್ತಂಬರಿ ಸೊಪ್ಪಿನ ಅಧಿಕ ಕಬ್ಬಿಣಾಂಶ ಇರುವುದರಿಂದ ರಕ್ತಹೀನತೆಯಿಂದ ಬಳಲುವವರು ಪ್ರತಿದಿನ ಆಹಾರದಲ್ಲಿ ಇದನ್ನು ಮೂರು ಚಮಚೇ ಕೊತ್ತಂಬರಿ ಸೊಪ್ಪಿನ ರಸವನ್ನು ಜೇನಿನೊಂದಿಗೆ ಬೆರೆಸಿ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯಬೇಕು.
4. ಉಷ್ಣದಿಂದ ಮೂಗಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಕೊತ್ತಂಬರಿ ಸೊಪ್ಪಿನ ರಸವನ್ನು ಮೂಗಿನಲ್ಲಿ ಹಿಂಡಬೇಕು.
5. ತಲೆಸುತ್ತು ಬರುತ್ತಿದ್ದಲ್ಲಿ ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಕಲ್ಲು ಸಕ್ಕರೆ ಬೆರೆಸಿ ಕುಡಿಯಬೇಕು.
6. ಊಟದ ನಂತರ ಒಂದು ಲೋಟ ಮಜ್ಜಿಗೆಗೆ ಕೊತ್ತಂಬರಿ ಸೊಪ್ಪು ಇಲ್ಲವೆ ಸೊಪ್ಪಿನ ರಸ ಬೆರೆಸಿ ಕುಡಿಯುವ ರೂಢಿ ಇಟ್ಟುಕೊಂಡಲ್ಲಿ ಆಹಾರವು ಸುಲಭವಾಗಿ ಜೀರ್ಣವಾಗುವುದಲ್ಲದೆ ಹೊಟ್ಟೆಯುಬ್ಬರ ಕಾಡುವುದಿಲ್ಲ .
7. ಪ್ರತಿದಿನ ಊಟದ ನಂತರ ಕೊತ್ತಂಬರಿ ಸೊಪ್ಪನ್ನು ಐದು ತಿನ್ನುವುದರಿಂದ ಹಲ್ಲು ಹುಳುಕಾಗದಂತೆ ತಡೆಯುವುದಲ್ಲದೆ ವಸಡು ಗಟ್ಟಿಯಾಗುತ್ತದೆ.
8. ಪ್ರತಿದಿನ ಖಾಲಿ ಹೊಟ್ಟೆಗೆ ಒಂದು ಚಮಚ ಕೊತ್ತಂಬರಿ ಸೊಪ್ಪಿನ ರಸದೊಂದಿಗೆ ಜೇನು ಬೆರೆಸಿ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ.