ಮನೆ ರಾಷ್ಟ್ರೀಯ 6 ತಿಂಗಳಲ್ಲಿ 100 ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ

6 ತಿಂಗಳಲ್ಲಿ 100 ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೇನೆ

0

ಶ್ರೀನಗರ(Shreenagar): ಕಾಶ್ಮೀರದಲ್ಲಿ ಈ ವರ್ಷದ ಆರಂಭದಿಂದ ಈವರೆಗೆ ಉಗ್ರ ವಿರೋಧಿ ಕಾರ್ಯಾಚರಣೆಗಳಲ್ಲಿ 100 ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.

ಇದರಲ್ಲಿ ಲಷ್ಕರ್‌–ಎ–ತೈಯಬಾ ಉಗ್ರ ಸಂಘಟನೆಯ ಅತಿಹೆಚ್ಚು 63 ಕೇಡರ್‌ಗಳು ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಯ 24 ಉಗ್ರರು ಸೇರಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಲ್ಲದೆ, 29 ವಿದೇಶಿ ಉಗ್ರರನ್ನು ಈ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿದೆ. ಈ ಮೂಲಕ ಕಳೆದ ವರ್ಷಕ್ಕಿಂತಲೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷ ಮೊದಲ 5 ತಿಂಗಳ 12 ದಿನಗಳಲ್ಲಿ ಒಬ್ಬ ವಿದೇಶಿ ಪ್ರಜೆ ಸೇರಿದಂತೆ ಒಟ್ಟು 55 ಉಗ್ರರನ್ನು ಹತ್ಯೆ ಮಾಡಲಾಗಿತ್ತು ಎಂದಿದ್ದಾರೆ.