ಮನೆ ಸುದ್ದಿ ಜಾಲ ಮಥುರಾದಲ್ಲಿ ಮುಸ್ಲಿಂ ಕುಟುಂಬದ 8 ಮಂದಿ ಹಿಂದೂ ಧರ್ಮಕ್ಕೆ ಮತಾಂತರ!

ಮಥುರಾದಲ್ಲಿ ಮುಸ್ಲಿಂ ಕುಟುಂಬದ 8 ಮಂದಿ ಹಿಂದೂ ಧರ್ಮಕ್ಕೆ ಮತಾಂತರ!

0

ಲಕ್ನೋ : ಉತ್ತರ ಪ್ರದೇಶದ ಮಥುರಾದ ಜಮುನಾಪರ್ ಪ್ರದೇಶದ ಎಂಟು ಮಂದಿಯ ಮುಸ್ಲಿಂ ಕುಟುಂಬವು ವೃಂದಾವನದ ಧಾರ್ಮಿಕ ಸಮಾರಂಭದಲ್ಲಿ ಹಿಂದೂ ಧರ್ಮಕ್ಕೆ ಶಾಸ್ತ್ರೋಕ್ತವಾಗಿ ಮತಾಂತರಗೊಂಡಿದ್ದಾರೆ. ಕುಟುಂಬದ ಮುಖ್ಯಸ್ಥ ಜಾಕೀರ್ ಎಂಬವರು ತಮ್ಮ ಹೆಸರನ್ನು ‘ಜಗದೀಶ್’ ಎಂದು ಬದಲಾಯಿಸಿಕೊಂಡು, ತಮ್ಮ ಪೂರ್ವಜರ ಧರ್ಮವಾಗಿದ್ದ ಹಿಂದೂ ಧರ್ಮಕ್ಕೆ ಮರಳಿರುವುದಾಗಿ ಘೋಷಿಸಿದರು.

ವೃಂದಾವನದ ಶ್ರೀ ಜಿ ವಾಟಿಕಾ ಕಾಲೋನಿಯಲ್ಲಿರುವ ಭಾಗವತ್ ಧಾಮ ಆಶ್ರಮದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಜಗದೀಶ್ ಜೊತೆಗೆ ಅವರ ಪತ್ನಿ, ಪುತ್ರರು, ಸೊಸೆಯಂದಿರು ಮತ್ತು ಮೊಮ್ಮಕ್ಕಳು ಸೇರಿದಂತೆ ಎಂಟು ಮಂದಿ ಸದಸ್ಯರು ಈ ಮಹತ್ವದ ಪೌರಾಣಿಕ ನಿರ್ಧಾರದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳಂತೆ ಹವನ, ಪುಣ್ಯಸ್ನಾನ ಮತ್ತು ದೇವತಾ ಪೂಜೆ ನಡೆಸಲಾಯಿತು.

ಜಗದೀಶ್ ಹೇಳುವಂತೆ, “ನಮ್ಮ ಪೂರ್ವಜರು ಮೊಘಲರ ಕಾಲದವರೆಗೆ ಹಿಂದೂ ಧರ್ಮವನ್ನೇ ಅನುಸರಿಸುತ್ತಿದ್ದರು. ನಂತರ ಬಲವಂತದಿಂದ ಅಥವಾ ಪರಿಸ್ಥಿತಿಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು. ಆದರೆ ನಾನು ಯಾವಾಗಲೂ ಕಾಳಿದೇವಿಯನ್ನು ಪೂಜಿಸುತ್ತಿದ್ದೆ. ಹಿಂದೂ ಸಂಸ್ಕೃತಿಯ ನಂಬಿಕೆಗಳು ನಮ್ಮ ಮನಸ್ಸಿನಲ್ಲಿ ಸದಾ ಇತ್ತು. ಇದರಿಂದಲೇ ನಾವೀಗ ಈ ಧರ್ಮಕ್ಕೆ ಮರಳಿದೇವೆ.” ಮತಾಂತರದ ನಿರ್ಧಾರವು ಒಂದು ದಿನದಲ್ಲಿ ಆಗಿಲ್ಲ. ಕಳೆದ ಮೂರು ವರ್ಷಗಳಿಂದ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದೇವೆ. ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ಒತ್ತಡವಿಲ್ಲದೇ, ಶುದ್ಧವಾಗಿ ನಂಬಿಕೆಯ ಆಧಾರದ ಮೇಲೆ ಈ ಹೆಜ್ಜೆ ಇಟ್ಟಿದ್ದೇವೆ ಎಂದು ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ಈ ಮತಾಂತರ ಕಾರ್ಯಕ್ರಮದಲ್ಲಿ ಬಲಪಂಥೀಯ ಹಿಂದೂ ಸಂಘಟನೆಯಾದ ಹಿಂದೂ ಯುವ ವಾಹಿನಿಯು ಸಹಕಾರ ನೀಡಿದ್ದು, ಧಾರ್ಮಿಕ ವಿಧಿವಿಧಾನಗಳನ್ನು ಆಯೋಜಿಸಲು ಸಹಾಯ ಮಾಡಿದೆ. ಆಶ್ರಮದ ಪೂಜಾರಿಗಳು ಶಾಸ್ತ್ರೋಕ್ತ ಪ್ರಕಾರ ಧರ್ಮದಿಕ್ಷೆ ಕಾರ್ಯವನ್ನು ನಡೆಸಿದ್ದು, ಕುಟುಂಬವನ್ನು ಹಾರೈಕೆಗಳೊಂದಿಗೆ ಸ್ವಾಗತಿಸಿದ್ದಾರೆ.