ಮನೆ ರಾಜ್ಯ ಎಲ್ಲೆಂದರಲ್ಲಿ ಕಸ ಎಸೆದವರ ಮಾಹಿತಿ ನೀಡಿದರೆ ಬಿಬಿಎಂಪಿಯಿಂದ ಸಿಗುತ್ತೆ ಪ್ರಮಾಣ ಪತ್ರ

ಎಲ್ಲೆಂದರಲ್ಲಿ ಕಸ ಎಸೆದವರ ಮಾಹಿತಿ ನೀಡಿದರೆ ಬಿಬಿಎಂಪಿಯಿಂದ ಸಿಗುತ್ತೆ ಪ್ರಮಾಣ ಪತ್ರ

0

ಬೆಂಗಳೂರು(Bengaluru): ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸ ತಂದು ಸುರಿದು ಮಾಲಿನ್ಯ ಉಂಟು ಮಾಡುವವರ ಮಾಹಿತಿ ನೀಡಿದರೆ ಬಿಬಿಎಂಪಿಯಿಂದ ಪ್ರಶಂಸಾ ಪತ್ರ(ಅಪ್ರಿಸಿಯೇಷನ್ ಸರ್ಟಿಫಿಕೇಟ್) ಸಿಗಲಿದೆ.

ಕಂಡಕಂಡಲ್ಲಿ ಕಸ, ತ್ಯಾಜ್ಯ ಎಸೆಯುವುದರಿಂದ ನಗರದ ರಸ್ತೆಗಳು ಗಬ್ಬು ನಾರುತ್ತಿವೆ. ಈಗಾಗಲೇ ದಂಡ ಪ್ರಯೋಗ, ಮಾರ್ಷಲ್​ಗಳು ಎಚ್ಚರಿಕೆ ನೀಡಿದರೂ ಸಾರ್ವಜನಿಕರು ಅಸಡ್ಡೆ ತೋರುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ಹೊಸ ಪ್ರಯೋಗಕ್ಕೆ ಮುಂದಾಗಿದೆ.

ಸಿಲಿಕಾನ್ ಸಿಟಿಯಲ್ಲಿ 1500ಕ್ಕೂ ಅಧಿಕ ರಸ್ತೆ ಬದಿಗಳನ್ನು ಗಾರ್ಬೇಜ್ ವಲ್ನರಬಲ್ ಪಾಯಿಂಟ್ಸ್ ಎಂದು ಗುರುತಿಸಲಾಗಿದ್ದು, ಇದರಲ್ಲಿ 118 ಜಾಗಗಳನ್ನು ಗಾರ್ಬೇಜ್ ಬ್ಲಾಕ್ ಸ್ಪಾಟ್​​ಗಳು ಎಂದು ಗುರುತು ಮಾಡಲಾಗಿದೆ. ಇದರಲ್ಲಿ 48 ಜಾಗಗಳು ವಾರಕ್ಕೆ ಎರಡು ಬಾರಿ ಬ್ಲಾಕ್ ಸ್ಪಾಟ್‌ಗಳಾಗುತ್ತವೆ. 70 ಜಾಗಗಳನ್ನು ತ್ಯಾಜ್ಯದಿಂದ ಗಬ್ಬೆದ್ದು ನಾರುತ್ತಿರುವ ಸ್ಪಾಟ್​ಗಳೆಂದು ಗುರುತಿಸಲಾಗಿದೆ. 1,400ಕ್ಕೂ ಅಧಿಕ ಜಾಗಗಳಲ್ಲಿ ಮನೆ, ಇತರ ತ್ಯಾಜ್ಯ ತಂದು ಎಸೆದು ಜನರು ಮಾಲಿನ್ಯ ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ತಿಳಿಸಿದೆ.