ಮನೆ ಸುದ್ದಿ ಜಾಲ ಮಧ್ಯಂತರ ವ್ಯಾಪಾರ ಒಪ್ಪಂದ ಚೌಕಟ್ಟು ರಚನೆ; ಭಾರತ – ಯುಎಸ್‌ಗೆ ಶುಭ ಸುದ್ದಿ – ಪ್ರಧಾನಿ...

ಮಧ್ಯಂತರ ವ್ಯಾಪಾರ ಒಪ್ಪಂದ ಚೌಕಟ್ಟು ರಚನೆ; ಭಾರತ – ಯುಎಸ್‌ಗೆ ಶುಭ ಸುದ್ದಿ – ಪ್ರಧಾನಿ ಮೋದಿ

0

ನವದೆಹಲಿ/ವಾಷಿಂಗ್ಟನ್‌ : ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಮುಂಚಿತವಾಗಿ, ಉಭಯ ರಾಷ್ಟ್ರಗಳು ಮಧ್ಯಂತರ ವ್ಯಾಪಾರ ಚೌಕಟ್ಟನ್ನ ಘೋಷಿಸಿವೆ. ಅಮೆರಿಕ ಭಾರತದ ಮೇಲಿನ ಆಮದು ಸುಂಕವನ್ನು 18% ಇಳಿಕೆ ಮತ್ತು ರಷ್ಯಾ ತೈಲ ಖರೀದಿ ಹಿನ್ನೆಲೆ ವಿಧಿಸಿದ್ದ 25% ಹೆಚ್ಚುವರಿ ಸುಂಕವನ್ನು ತೆಗೆದುಹಾಕಿದ ಬಳಿಕ ವ್ಯಾಪಾರ ಚೌಕಟ್ಟು ಘೋಷಣೆ ಹೊರಬಿದ್ದಿದೆ.

ಉಭಯ ರಾಷ್ಟ್ರಗಳ ನಡುವೆ ಮಧ್ಯಂತರ ವ್ಯಾಪಾರ ಚೌಕಟ್ಟಿನ ರಚನೆಯಾಗಿದ್ದು, ಶೇ. 18ರ ತೆರಿಗೆ ವ್ಯಾಪ್ತಿಗೆ ಒಳಪಡುವ ವಸ್ತುಗಳ ಪರಸ್ಪರ ರಫ್ತು ವಹಿವಾಟಿನ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಚರ್ಚೆಗಳನ್ನ ಆರಂಭಿಸಿದ್ದಾರೆ. ಭಾರತ-ಅಮೆರಿಕ ವ್ಯಾಪಾರ ಒಪ್ಪಂದ, ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ ಸುಧಾರಣೆಗೂ ಮುನ್ನುಡಿ ಬರೆದಿದೆ.

ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರತಿಕ್ರಿಯಿಸಿ, ಅಮೆರಿಕಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ವೊಂದನನ್ನ ಹಂಚಿಕೊಂಡಿದ್ದು, ಭಾರತ ಮತ್ತು ಅಮೆರಿಕಕ್ಕೆ ಗ್ರೇಟ್‌ ನ್ಯೂಸ್‌ ಎಂದು ಬರೆದುಕೊಂಡಿದ್ದಾರೆ. ಭಾರತ ಮತ್ತು ಅಮೆರಿಕಕ್ಕೆ ಶುಭ ಸುದ್ದಿ. ನಮ್ಮ ಎರಡು ಮಹಾನ್ ರಾಷ್ಟ್ರಗಳ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನ ನಾವು ಒಪ್ಪಿಕೊಂಡಿದ್ದೇವೆ. ನಮ್ಮ ದೇಶಗಳ ನಡುವಿನ ಬಲವಾದ ಸಂಬಂಧಗಳಿಗೆ ಅಧ್ಯಕ್ಷ ಟ್ರಂಪ್ ಅವರ ವೈಯಕ್ತಿಕ ಬದ್ಧತೆಗಾಗಿ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ.

ಈ ಒಪ್ಪಂದವು ಭಾರತ ಮತ್ತು ಅಮೆರಿಕ ಎರಡಕ್ಕೂ ಪ್ರಯೋಜನವನ್ನು ನೀಡುತ್ತದೆ. ಭಾರತೀಯ ರೈತರು, ಉದ್ಯಮಿಗಳು ಮತ್ತು ನವೋದ್ಯಮಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಜೊತೆಗೆ ನಮ್ಮ ಪಾಲುದಾರಿಕೆಯ ಆಳ, ವಿಶ್ವಾಸ ಮತ್ತು ಚೈತನ್ಯವನ್ನ ಪ್ರತಿಬಿಂಬಿಸುತ್ತದೆ. ಭಾರತದ ಶ್ರಮಶೀಲ ರೈತರು, ಉದ್ಯಮಿಗಳು, ಎಂಎಸ್‌ಎಂಇಗಳು, ನವೋದ್ಯಮ ನಾವೀನ್ಯಕಾರರು, ಮೀನುಗಾರರು ಮತ್ತು ಇತರರಿಗೆ ಹೊಸ ಅವಕಾಶಗಳನ್ನ ತೆರೆಯುತ್ತದೆ. ಈ ಮೂಲಕ ‘ಮೇಕ್ ಇನ್ ಇಂಡಿಯಾ’ ಅನ್ನು ಬಲಪಡಿಸುತ್ತದೆ. ಅಲ್ಲದೇ ಮಹಿಳೆಯರು ಮತ್ತು ಯುವಕರಿಗೆ ಬೃಹತ್ ಉದ್ಯೋಗ ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

ಭಾರತ ಮತ್ತು ಅಮೆರಿಕ ನಾವೀನ್ಯತೆಯನ್ನ ಉತ್ತೇಜಿಸುವ ಬದ್ಧತೆಯನ್ನು ಹಂಚಿಕೊಳ್ಳುತ್ತವೆ ಮತ್ತು ಈ ಚೌಕಟ್ಟು ನಮ್ಮ ನಡುವಿನ ಹೂಡಿಕೆ ಮತ್ತು ತಂತ್ರಜ್ಞಾನ ಪಾಲುದಾರಿಕೆಯನ್ನು ಮತ್ತಷ್ಟು ಗಾಢಗೊಳಿಸುತ್ತದೆ. ಈ ಚೌಕಟ್ಟು ಸ್ಥಿತಿಸ್ಥಾಪಕ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳನ್ನ ಬಲಪಡಿಸುತ್ತದೆ ಮತ್ತು ಜಾಗತಿಕ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ನಾವು ವಿಕಸಿತ ಭಾರತವನ್ನ ನಿರ್ಮಿಸುವತ್ತ ಸಾಗುತ್ತಿರುವಾಗ, ನಮ್ಮ ಜನರನ್ನು ಸಬಲೀಕರಣಗೊಳಿಸುವ ಮತ್ತು ಹಂಚಿಕೆಯ ಸಮೃದ್ಧಿಗೆ ಕೊಡುಗೆ ನೀಡುವ ಜಾಗತಿಕ ಪಾಲುದಾರಿಕೆಗಳನ್ನು ನಿರ್ಮಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.