ಹುಬ್ಬಳ್ಳಿ : ನೇಹಾ ಹಿರೇಮಠ್ ಕೋಲೆ ಆರೋಪಿಗೆ ಧಾರವಾಡ ಹೈ ಕೋರ್ಟ್ ಪೀಠ 3ನೇ ಬಾರಿಗೆ ಜಾಮೀನು ಅರ್ಜಿ ತಿರಸ್ಕರಿಸಿದೆ. ಈ ಬಗ್ಗೆ ಮಾತನಾಡಿದ ನೇಹಾ ಹಿರೇಮಠ್ ಪರ ವಕೀಲ ರಾಘವೇಂದ್ರ ಮುತ್ತಿಗಿಕರ್ ಮಾತನಾಡಿ, ಆರೋಪಿ ಫಯಾಜ್ ಜಾಮೀನು ಅರ್ಜಿ ಸತತವಾಗಿ ಮೂರನೇ ಬಾರಿಗೆ ತಿರಸ್ಕಾರಗೊಂಡಿದೆ. ಇದು ನ್ಯಾಯಕ್ಕೆ ಸಿಕ್ಕ ಜಯ ಎಂದು ಹರ್ಷ ವ್ಯಕ್ತಪಡಿಸಿದರು.
ಆರೋಪಿ ಪರ ವಕೀಲರು ಈ ಪ್ರಕರಣದಲ್ಲಿ ನ್ಯಾಯಾಲಯದ ದಾರಿ ತಪ್ಪಿಸುತ್ತಿದ್ದಾರೆ ಎಂದು ವಕೀಲ ರಾಘವೇಂದ್ರ ಆರೋಪಿಸಿದರು. ಆದರೂ ನಮಗೆ ನ್ಯಾಯ ಸಿಗುವ ಭರವಸೆ ಇದೆ. ಇದುವರೆಗೂ ಈ ಪ್ರಕರಣ ಕುರಿತು ಟ್ರಯಲ್ ಕೂಡಾ ಆರಂಭವಾಗಿಲ್ಲ. ಒಮ್ಮೆಯೂ ಆರೋಪಿ ಫಯಾಜ್ ಕೋರ್ಟ್ಗೆ ಕುದ್ದು ಹಾಜರಾಗಿಲ್ಲ. ಕೇವಲ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾನೆ.
ನಮ್ಮ ವಕೀಲರ ತಂಡ ನೇಹಾ ಹಿರೇಮಠ್ಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತದೆ ಎಂದರು. ಬಳಿಕ ನೇಹಾ ತಂದೆ ನಿರಂಜನ್ ಮಾತನಾಡಿ. ವಕೀಲರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಮ್ಮ ಮಗಳ ಸಾವಿಗೆ ನ್ಯಾಯ ಸಿಗುವ ಭರವಸೆ ಇದೆ. ನಮ್ಮ ಮಗಳ ಕೊಲೆಯಾದ ದಿನದಿಂದಲೂ ಕಾಣದ ಕೈಗಳು ಈ ಪ್ರಕರಣದ ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಆದರೆ ನಮ್ಮ ಹೋರಾಟ ಬಿಡುವುದಿಲ್ಲ ಎಂದರು.















