ಮನೆ ಸುದ್ದಿ ಜಾಲ ಮೈಸೂರು  : ಹೆತ್ತ ತಾಯಿಯನ್ನೆ ಕೊಂದು ಸುಟ್ಟು ಹಾಕಿದ ಮಗ  

ಮೈಸೂರು  : ಹೆತ್ತ ತಾಯಿಯನ್ನೆ ಕೊಂದು ಸುಟ್ಟು ಹಾಕಿದ ಮಗ  

0

ಮೈಸೂರು: ಮಾದನಹಳ್ಳಿ ಗ್ರಾಮದಲ್ಲಿ ಪರ ಪುರುಷನ ಜೊತೆ ತಾಯಿ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಹೆತ್ತಮ್ಮನನ್ನು ಮಗನೇ ಕೊಲೆ ಮಾಡಿ ಮಾವಿನ ತೋಪಿನಲ್ಲಿ ಸುಟ್ಟುಹಾಕಿದ ಘಟನೆ ಭಾನುವಾರ ನಡೆದಿದೆ. ಈ ಪ್ರಕರಣದಲ್ಲಿ ಕೊಲೆ ಮಾಡಿದ ಮಗ ಹಾಗೂ ಇಬ್ಬರು ಸಂಬಂಧಿಕರನ್ನು ಜಯಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸುಧಾ (48) ಕೊಲೆಯಾದ ದುರ್ದೈವಿ. ಶಿವರುದ್ರಪ್ಪ .ಎಸ್. (30) ತಾಯಿ ಕೊಲೆ ಮಾಡಿದ ಪುತ್ರ.

ಪರ ಪುರುಷನ ಜೊತೆ ಸಂಬಂಧ ಹೊಂದಿದ್ದ ತಾಯಿಗೆ ಮಗ ಬುದ್ದಿ ಮಾತು ಹೇಳಿದ್ದನಂತೆ. ಅದಾಗಿಯೂ ಬೇರೆಯವರ ಬೈಕ್​ನಲ್ಲಿ ತಾಯಿ ತೆರಳುತ್ತಿರುವುದನ್ನು ಕಣ್ಣಾರೆ ಕಂಡಿದ್ದ ಮಗ ನಿನ್ನೆ ಬೆಳಗ್ಗೆ ತಾಯಿಗೆ ಹಲ್ಲೆ ಮಾಡಿದ್ದ. ಬಳಿಕ ಹಲ್ಲೆಗೊಳಗಾಗಿದ್ದ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಸಂಬಂಧಿಕರು ಅಡ್ಡಬಂದಿದ್ದು, ತಾನೇ ಕರೆದೊಯ್ಯುವುದಾಗಿ ಹೇಳಿದ್ದಾನೆ. ಆದರೆ ಕರೆದೊಯ್ದು ಮತ್ತೆ ಹಲ್ಲೆ ಮಾಡಿ, ತಾಯಿ ತಲೆ ಮೇಲೆ ಕಲ್ಲು ಹಾಕಿ ಹತ್ಯೆ ಎಸಗಿದ್ದಾನೆ. ಬಳಿಕ ಕಣಿಯನಹುಂಡಿ ಸಮೀಪದ ಮಾವಿನ ತೋಪಿನ ತೋಟದಲ್ಲಿ ತಾಯಿಯ ಮೃತದೇಹವನ್ನು ಸುಟ್ಟುಹಾಕಿ ಪರಾರಿಯಾಗಿದ್ದ. ಈ ಕುರಿತು ಜಯಪುರ ಠಾಣಾ ಪೊಲೀಸರು FIR ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು. ಸರ್ಕಲ್ ಇನ್ಸ್‌ಪೆಕ್ಟರ್ ಜಯಪ್ರಕಾಶ್ ನೇತೃತ್ವದ ತಂಡ ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಹತ್ಯೆಯಲ್ಲಿ ಆರೋಪಿ ಹಾಗೂ ಆತನಿಗೆ ಸಾಥ್ ನೀಡಿದ್ದ ಚಿಕ್ಕಪ್ಪನ ಮಕ್ಕಳಾದ ಆಕಾಶ್ (24) ಅಭಿ (22)ಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.