ಬೆಂಗಳೂರು : ಆಸ್ತಿಗಾಗಿ ವೃದ್ಧ ತಂದೆಯನ್ನು ಮಗನೇ ಇರಿದು ಕೊಂದ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಮುನಿಕೃಷ್ಣ (70) ಎಂದು ತಿಳಿದು ಬಂದಿದೆ. ಹತ್ಯೆಗೈದವನನ್ನು ಮೋಹನ್ ಕುಮಾರ್ ಎಂದು ಗುರುತಿಸಲಾಗಿದೆ.
ಕಳೆದ ಎರಡು ದಿನಗಳ ಹಿಂದೆ ಆರೋಪಿ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ತೀವ್ರ ಗಾಯಗೊಂಡಿದ್ದ ಮುನಿಕೃಷ್ಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೊಲೆ ಕೇಸ್ ದಾಖಲಿಸಿಕೊಂಡು ಆರೋಪಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.
ಮೃತ ಮುನಿಕೃಷ್ಣ ಬಿಎಂಟಿಸಿ ನಿವೃತ್ತ ಕಂಡಕ್ಟರ್ ಆಗಿದ್ದು, ಕೋಟ್ಯಂತರ ರೂ. ಮೌಲ್ಯದ ಆಸ್ತಿ ಮಾಡಿದ್ದರು. ಮೊಮ್ಮಕ್ಕಳ ಹೆಸರಿಗೆ ಕೆಲವು ಆಸ್ತಿಯ ವಿಲ್ ಮಾಡಿಟ್ಟಿದ್ದರು. ಆಸ್ತಿ ವಿಚಾರಕ್ಕಾಗಿ ಈ ಹಿಂದೆ ಹಲವು ಬಾರಿ ತಂದೆ ಮಕ್ಕಳ ನಡುವೆ ಗಲಾಟೆ, ಇದೇ ಕೋಪಕ್ಕೆ ಮುನಿಕೃಷ್ಣ ಮತ್ತು ಮಕ್ಕಳ ನಡುವೆ ಗಲಾಟೆಯಾಗಿತ್ತು ಎಂದು ತಿಳಿದು ಬಂದಿದೆ.















