ಮನೆ ರಾಷ್ಟ್ರೀಯ ಏರ್ ಅಂಬುಲೆನ್ಸ್ ಪತನ; ವಿಮಾನದಲ್ಲಿ ಬ್ಲ್ಯಾಕ್‌ಬಾಕ್ಸ್‌ ಇಲ್ಲ – ಹವಾಮಾನ ರೇಡಾರ್ ಪರಿಶೀಲನೆ..!

ಏರ್ ಅಂಬುಲೆನ್ಸ್ ಪತನ; ವಿಮಾನದಲ್ಲಿ ಬ್ಲ್ಯಾಕ್‌ಬಾಕ್ಸ್‌ ಇಲ್ಲ – ಹವಾಮಾನ ರೇಡಾರ್ ಪರಿಶೀಲನೆ..!

0

ರಾಂಚಿ : ಜಾರ್ಖಂಡ್‌ನ ರಾಂಚಿಯ ಛತ್ರಾ ಜಿಲ್ಲೆಯಲ್ಲಿ ಪತನಗೊಂಡಿದ್ದ ಏರ್ ಅಂಬುಲೆನ್ಸ್‌ನಲ್ಲಿ ಬ್ಲ್ಯಾಕ್‌ಬಾಕ್ಸ್‌ ಇಲ್ಲ. ಹೀಗಾಗಿ ವಿಮಾನ ಪತನದ ವೇಳೆ ಹವಾಮಾನ ರೇಡಾರ್ ಹೇಗಿತ್ತು ಎಂದು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ವರದಿಗಳ ಪ್ರಕಾರ, ಸೋಮವಾರ (ಫೆ.23) ರಾತ್ರಿ ಜಾರ್ಖಂಡ್‌ನಲ್ಲಿ ಅಪಘಾತಕ್ಕೀಡಾದ ಏರ್ ಅಂಬುಲೆನ್ಸ್‌ನಲ್ಲಿ ಬ್ಲ್ಯಾಕ್‌ಬಾಕ್ಸ್‌ ಇಲ್ಲ. ಇದು ಅಪಘಾತದ ಹಿಂದಿನ ಕಾರಣ ಪತ್ತೆಹಚ್ಚಲು ಪ್ರಮುಖ ಸವಾಲಾಗಿ ಪರಿಣಮಿಸಲಿದೆ. ಇನ್ನೂ ವಿಮಾನದಲ್ಲಿನ ಹವಾಮಾನ ರೇಡಾರ್ ಮುರಿದಿದ್ದ ಕಾರಣ ವಿಮಾನ ಯೋಜಿತ ದಿಕ್ಕಿನೆಡೆಗೆ ಹೋಗಲು ವಿಫಲವಾಗಿ ಅಪಘಾತಕ್ಕೀಡಾಗಿರಬಹುದು ಎಂದು ಪರಿಶೀಲನೆ ನಡೆಸುತ್ತಿದ್ದಾರೆ.

ಸಾಮಾನ್ಯವಾಗಿ ನಾಗರಿಕ ವಿಮಾನಯಾನ ನಿಯಮಗಳಿಗೆ ಸಂಬಂಧಿಸಿದಂತೆ 5,700 ಕೆಜಿಗಿಂತ ಕಡಿಮೆ ತೂಕದ ವಿಮಾನಗಳಿಗೆ ಕಾಕ್‌ಪಿಟ್ ಧ್ವನಿ ರೆಕಾರ್ಡರ್‌ಗಳು ಅಥವಾ ಫ್ಲೈಟ್ ಡೇಟಾ ರೆಕಾರ್ಡರ್‌ಗಳ ಅಗತ್ಯವಿರುವುದಿಲ್ಲ. ಹೀಗಾಗಿ ವಾಯು ಸಂಚಾರ ನಿಯಂತ್ರಣ, ಅವಶೇಷಗಳ ವಿಶ್ಲೇಷಣೆ ಮತ್ತು ಪ್ರತ್ಯಕ್ಷದರ್ಶಿಗಳ ಸಂವಹನ ದಾಖಲೆಗಳ ಮೂಲಕ ಅಪಘಾತವನ್ನು ಪರಿಶೀಲಿಸಬೇಕಾಗುತ್ತದೆ. ಜೊತೆಗೆ ಅಪಘಾತಕ್ಕೀಡಾದ ವಿಮಾನದಲ್ಲಿನ ಹವಾಮಾನ ರೇಡಾರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಪರಿಶೀಲನೆ ನಡೆಯುತ್ತಿದೆ.

ಜಾರ್ಖಂಡ್‌ನ ರಾಂಚಿಯ ಛತ್ರಾ ಜಿಲ್ಲೆಯಲ್ಲಿ ಏರ್ ಅಂಬುಲೆನ್ಸ್ ಪತನಗೊಂಡಿತ್ತು. ರಾಂಚಿಯಿಂದ ದೆಹಲಿಯತ್ತ ಏಳು ಜನರನ್ನು ಹೊತ್ತೊಯ್ಯುತಿದ್ದ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ರೆಡಾರ್ ಸಂಪರ್ಕ ಕಡಿತಗೊಂಡು ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ವಿಮಾನದಲ್ಲಿ ಓರ್ವ ವೈದ್ಯ, ರೋಗಿ, ನಾಲ್ವರು ನರ್ಸ್‌ಗಳು ಹಾಗೂ ಇಬ್ಬರು ಪೈಲಟ್‌ಗಳಿದ್ದರು. ಸೋಮವಾರ (ಫೆ.23) ಸಂಜೆ 7:34ಕ್ಕೆ ಎಟಿಸಿಯಿಂದ ಸಂಪರ್ಕ ಕಡಿತಗೊಂಡಿದೆ. ಪೈಲೆಟ್ ಸೇರಿ ವಿಮಾನದಲ್ಲಿದ್ದ 7 ಮಂದಿ ಸಾವನ್ನಪ್ಪಿದ್ದಾರೆ. ರೆಡ್‌ಬರ್ಡ್ ಏರ್‌ವೇಸ್ ಪ್ರೈ.ಲಿ ಕಂಪನಿಯ ಬೀಚ್ ಕ್ರಾಫ್ಟ್ ಕಿಂಗ್ ಏರ್ BE9L ಚಾರ್ಟೆಡ್ ವಿಮಾನ ಇದಾಗಿದೆ.