ಮನೆ ರಾಜ್ಯ ಚಾಮರಾಜನಗರ : ಜಮೀನಿನಲ್ಲಿದ್ದ 14 ಅಡಿ ಉದ್ದದ ಹೆಬ್ಬಾವು ಸೆರೆ

ಚಾಮರಾಜನಗರ : ಜಮೀನಿನಲ್ಲಿದ್ದ 14 ಅಡಿ ಉದ್ದದ ಹೆಬ್ಬಾವು ಸೆರೆ

0

ಚಾಮರಾಜನಗರ(Chamarajanagar): ತಾಲೂಕಿನ ಜ್ಯೋತಿಗೌಡನಪುರ ಬೆಲವತ್ತ ಜಮೀನಿನಲ್ಲಿ ಬರೊಬ್ಬರಿ 14 ಅಡಿ ಉದ್ದದ ಒಂದು ಕ್ವಿಂಟಲ್​ ತೂಕದ ಹೆಬ್ಬಾವು ಕಾಣಿಸಿಕೊಂಡಿದ್ದು, ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.

ಡಾ.ರಾಜೇಂದ್ರ ಎಂಬುವವರ ಜಮೀನಿನಲ್ಲಿ ಕೆಲಸಗಾರರು ಹೋದಾಗ ಈ ದೈತ್ಯ ಗಾತ್ರದ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ತಕ್ಷಣ ಸ್ನೇಕ್ ಚಾಂಪ್ ಅವರಿಗೆ ಈ ಮಾಹಿತಿಯನ್ನು ತಿಳಿಸಿದ್ದಾರೆ.

 ಸ್ಥಳಕ್ಕೆ ಆಗಮಿಸಿದ ಸ್ನೇಕ್ ಚಾಂಪ್,  ಸತತ ಒಂದೂವರೆ ತಾಸು ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಕಾಡಿಗೆ ಬಿಡಲಾಗಿದೆ.

100 ಕೆಜಿಗೂ ಹೆಚ್ಚು ತೂಗುವ ಈ ಹಾವು ಬರೋಬ್ಬರಿ 14 ಅಡಿ ಉದ್ದವಿದೆ. ಹಾವನ್ನು ಟ್ರಾಕ್ಟರ್ ಬಳಸಿ ಸಾಗಿಸಲಾಗಿದ್ದು, ಕಾಡಿಗೆ ಸುರಕ್ಷಿತವಾಗಿ ಬಿಡಲಾಗಿದೆ.