ಮನೆ ರಾಜ್ಯ ನಿರುದ್ಯೋಗ ಸಮಸ್ಯೆ ಬಗ್ಗೆ ಬಿಜೆಪಿ ನಾಯಕರು ಮಾತನಾಡುವುದು ಹಾಸ್ಯಾಸ್ಪದ – ಬಿಕೆ ಹರಿಪ್ರಸಾದ್‌

ನಿರುದ್ಯೋಗ ಸಮಸ್ಯೆ ಬಗ್ಗೆ ಬಿಜೆಪಿ ನಾಯಕರು ಮಾತನಾಡುವುದು ಹಾಸ್ಯಾಸ್ಪದ – ಬಿಕೆ ಹರಿಪ್ರಸಾದ್‌

0

ನವದೆಹಲಿ : ಬಿಜೆಪಿಯ ಕೆಲವು ನಾಯಕರು ಕರ್ನಾಟಕದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ ಎಂದು ಜೋರಾಗಿ ಹೇಳುತ್ತಿರುವುದು ಹಾಸ್ಯಾಸ್ಪದ. ಪ್ರಧಾನಿ ನರೇಂದ್ರ ಮೋದಿಯವರು 2014 ರಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿದ್ದರು. 11 ವರ್ಷಕ್ಕೆ 22 ಕೋಟಿ ಉದ್ಯೋಗ ನೀಡಬೇಕಾಗಿತ್ತು. ನಿರುದ್ಯೋಗ ಸಮಸ್ಯೆ ಬಗ್ಗೆ ಬಿಜೆಪಿ ನಾಯಕರು ಪ್ರಧಾನಿ ಮೋದಿಗೆ ಪ್ರಶ್ನಿಸಲಿ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಸವಾಲು ಹಾಕಿದರು.

ಹುಬ್ಬಳ್ಳಿ ಧಾರವಾಡದಲ್ಲಿ ನಿರುದ್ಯೋಗಿಗಳ ಪ್ರತಿಭಟನೆಯ ಬಗ್ಗೆ ದೆಹಲಿಯಲ್ಲಿ ಮಾತನಾಡಿದ ಅವರು, Gen-z ಯುವ ಸಮುದಾಯ ನಿರುದ್ಯೋಗ ಸಮಸ್ಯೆ ಬಗ್ಗೆ ಹೋರಾಟ ಮಾಡುತ್ತಿದೆ. ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಲು ಅವರಿಗೆ ಹಕ್ಕಿದೆ. ರಾಜ್ಯದಲ್ಲಿ ಸರ್ಕಾರದ ಕಾರ್ಯಕ್ರಮ ಸಹಿಸಲು ಆಗದೇ ಈ ಬಿಜೆಪಿ ಹೋರಾಟಕ್ಕೆ ಬೆಂಬಲಿಸುತ್ತಿದೆ ಎಂದರು.

2023-24 ರ ಮಾಹಿತಿ ಕೇಂದ್ರ ಸರ್ಕಾರದಲ್ಲಿ 40 ಲಕ್ಷ ಹುದ್ದೆಗಳು ಖಾಲಿ ಇದೆ. ಗೃಹ, ರೈಲ್ವೆ, ರಕ್ಷಣಾ ಇಲಾಖೆಯಲ್ಲಿ ಇದುವರೆಗೂ 9.79 ಲಕ್ಷ ಹುದ್ದೆ ಖಾಲಿ ಇದೆ. ದೇಶಭಕ್ತಿ, ದೇಶಸೇವೆ ಅಂತಾ ಭಾಷಣ ಮಾಡೊ‌ ಜನ ಸೈನ್ಯದಲ್ಲಿ 1.55 ಲಕ್ಷ ಹುದ್ದೆ ಖಾಲಿ ಇವೆ. ಶಸ್ತ್ರಾಸ್ತ್ರ ಪಡೆಗಳಲ್ಲಿ 92,414 ಖಾಲಿ ಇದೆ. ಇವರು ಯಾವುದೇ ಕ್ರಮ ವಹಿಸುತ್ತಿಲ್ಲ. ಈ ಬಗ್ಗೆ ಬಿಜೆಪಿಯ ನಾಯಕರ ಮೊದಲು ಹೋಗಿ ವಿಷ ಗುರುಗೆ ಕೇಳಲಿ ಎಂದು ವ್ಯಂಗ್ಯವಾಡಿದರು.

ಉರ್ದು ಭಾಷೆಯಲ್ಲಿ ಜಾಹೀರಾತು ನೀಡಿದಕ್ಕೆ ಬಿಜೆಪಿ ವಿರೋಧ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಅಂಧಭಕ್ತರಿಗೆ ಈ ದೇಶದ ಭಾಷೆಯ ಬಗ್ಗೆ ನೆಲದ ಸಂಸ್ಕೃತಿ ಬಗ್ಗೆ ಏನು ಗೊತ್ತಿಲ್ಲ. ವಿಷಗುರು ಇಂದು ಇಸ್ರೇಲ್‌ಗೆ ಹೋಗಿ ಹೇಳಿದ್ದಾರೆ. ಇದು ಆರ್ಯನ್‌ರ ಭೂಮಿ ಅಂತಾ ಹೇಳಿದ್ದಾರೆ. ವಿಷಗುರುಗೆ ಗೊತ್ತಿಲ್ಲ ಉರ್ದು ಭಾಷೆ ಜನ್ಮ ತಾಳಿದ್ದು, ಉತ್ತರ ಪ್ರದೇಶದ ಮೀರತ್‌ನಲ್ಲಿ‌ ಅಂತ. ಇದು ನಮ್ಮ ಭಾಷೆ ಉರ್ದು ಅದಕ್ಕೂ ಬಣ್ಣ ಲೇಪ ಮಾಡಿದ್ದಾರೆ. ತರಕಾರಿ, ಮಾಂಸಕ್ಕೆ ಧರ್ಮ ಲೇಪ ಮಾಡಿದ್ದಾರೆ. ಬಡಗಿಗೆ ಕೆಲಸ ಇಲ್ಲದಾಗ ಏನೋ ಮಾಡ್ತಾರಲ್ವಾ ಹಾಗೆ ಇದು ಎಂದರು.

ಡಾ. ಜಿ ಪರಮೇಶ್ವರ್ ಸಿಎಂ ಆಗಬೇಕೆಂಬ ವಿಚಾರದ ಬಗ್ಗೆ ಮಾತನಾಡಿ, ಅವರು ಸುದೀರ್ಘ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. 2013 ರಲ್ಲಿ ಯಾವುದೇ ಗ್ಯಾರಂಟಿಗಳು ಇಲ್ಲದೆ ಅಧಿಕಾರಕ್ಕೆ ತಂದವರು ಸುಳ್ಳು ಆಶ್ವಾಸನೆ ಕೊಟ್ಟು ಬಂದಿರಲಿಲ್ಲ. ನೇರವಾಗಿ ಬಿಜೆಪಿ ವಿರುದ್ಧ ಅಧಿಕಾರಿಕ್ಕೆ ಬಂದಿದ್ದರು. ಕಾರಣಾಂತರಗಳಿಂದ ಅವರು ಸೋತಿದ್ದರು‌. ಸಿಎಂ ಆಗಲಿಕ್ಕೆ ಆಗಲಿಲ್ಲ. 140 ಶಾಸಕರು ಕೂಡ ಸಿಎಂ ಆಗಲು ಅರ್ಹರೇ. ಇದು ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುವ ವಿಚಾರ ಎಂದು ಹೇಳಿದರು.